Homeಜಿಲ್ಲಾ ಸುದ್ದಿಗಳುಚಿರತೆ ದಾಳಿಗೆ 30 ಕುರಿಗಳು ಬಲಿ

ಚಿರತೆ ದಾಳಿಗೆ 30 ಕುರಿಗಳು ಬಲಿ

ನಾಗಮಂಗಲ, ನ.11- ತಾಲೂಕಿನ ಕೋಟೆಬೆಟ್ಟ ಗ್ರಾಮದಲ್ಲಿ ಚಿರತೆ ದಾಳಿಗೆ ಸುಮಾರು 30 ಕುರಿಗಳು ಬಲಿಯಾಗಿದ್ದು, 10 ಕುರಿಗಳು ಗಾಯಗೊಂಡಿರುವ ಘಟನೆ ನಡೆದಿದೆ.ಗ್ರಾಮದ ಭಾಗ್ಯಮ ಅವರಿಗೆ ಸೇರಿದ ಕುರಿಗಳ ಹಿಂಡಿನ ಮೇಲೆ ಚಿರತೆ ದಾಳಿ ನಡೆಸಿದ್ದು, ಘಟನೆಯಿಂದ ಕುರಿಗಾಹಿ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ.

ಗ್ರಾಮದ ಕಾಲೋನಿಯಲ್ಲಿ ವಾಸಿಸುವ ಬೋವಿ ಸಮುದಾಯಕ್ಕೆ ಸೇರಿದ ಭಾಗ್ಯಮ ಅವರ ಕುಟುಂಬಕ್ಕೆ ಕುರಿ ಸಾಕಾಣಿಕೆಯೇ ಜೀವನದ ಪ್ರಮುಖ ಆಧಾರವಾಗಿತ್ತು. ಏಕಾಏಕಿ ನಡೆದ ಚಿರತೆ ದಾಳಿಯಿಂದ ಕುಟುಂಬದ ಆರ್ಥಿಕ ಬದುಕಿಗೆ ದೊಡ್ಡ ಹೊಡೆತ ಬಿದ್ದಿದೆ.

ಕುರಿಗಳನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬ ಇದೀಗ ಜೀವನ ನಿರ್ವಹಣೆ ಹೇಗೆ ಎಂಬ ಆತಂಕದಲ್ಲಿದೆ. ಈ ಹಿಂದೆ ಚಿರತೆ ಹಾವಳಿ ಕುರಿತು ಸಂಬಂಧಪಟ್ಟ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕುಟುಂಬಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಯಿಂದ ಅಪಾರ ನಷ್ಟ ಅನುಭವಿಸಿರುವ ಕುಟುಂಬಕ್ಕೆ ಸರ್ಕಾರ ಹಾಗೂ ಅರಣ್ಯ ಇಲಾಖೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಚಿರತೆ ಹಾವಳಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಂಡು ಕುರಿಗಾಹಿಗಳ ಬದುಕಿಗೆ ರಕ್ಷಣೆ ಒದಗಿಸಬೇಕು ಎಂದು ಗ್ರಾಮಸ್ಥರು ಹಾಗೂ ಕುಟುಂಬದವರು ಆಗ್ರಹಿಸಿದ್ದಾರೆ.

RELATED ARTICLES

Latest News