ಬೆಂಗಳೂರು,ಸೆ.29- ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು, ಒಂದೆಡೆ ಸಂತಸ ತಂದಿದ್ದರೆ ಮತ್ತೊಂದೆಡೆ ಭಾರೀ ಅವಾಂತರವನ್ನೇ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ರಾತ್ರಿ ಆರಂಭವಾದ ಮಳೆ ಇಂದು ಬೆಳಗ್ಗೆ 8 ಗಂಟೆವರೆಗೂ ಬಿಟ್ಟುಬಿಟ್ಟು ಸುರಿದಿದ್ದು, ವಾಹನ ಸವಾರರು ಹಾಗೂ ಕೆಲಸ ಕಾರ್ಯಗಳಿಗೆ ತೆರಳುವವರು ಪರದಾಡುವಂತಾಗಿತ್ತು.
ಯಶವಂತಪುರ, ಮಲ್ಲೇಶ್ವರಂ, ರಾಜಾಜಿನಗರ, ವೈಟ್‌ಫೀಲ್ಡ್, ಮಾರತಹಳ್ಳಿ, ಮಾರ್ಕೆಟ್, ಲಾಲ್‌ಬಾಗ್ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದವು.ವೈಟ್‌ಫೀಲ್‌್ಡ, ಮಾರತ್‌ಹಳ್ಳಿ, ಔಟರ್ ರಿಂಗ್‌ರೋಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚು ಮಳೆಯಾಗಿದ್ದು, ರಸ್ತೆಗಳು ಅಕ್ಷರಸಹ ಕೆರೆಯಂತಾಗಿದ್ದು, ವಾಹನ ಚಾಲಕರು, ಪಾದಚಾರಿಗಳು ಈ ರಸ್ತೆಯಲ್ಲಿ ಸಂಚರಿಸಲು ಸಾಹಸ ಪಡಬೇಕಾಯಿತು.
ಇದರಿಂದ ಹಲವೆಡೆ ಸಂಚಾರಿ ದಟ್ಟಣೆ ಹೆಚ್ಚಾಗಿ ಸಂಚಾರಿ ಪೊಲೀಸರು ಹರಸಾಹಸ ಪಡುವಂತಾಯಿತು. ಮಲ್ಲೇಶ್ವರಂ, ನೆಲಮಂಗಲದಲ್ಲೂ ಸಹ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿಯೊಂದು ಆ್ಯಂಬುಲೆನ್‌್ಸ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮಲ್ಲೇಶ್ವರಂನಲ್ಲಿ ಸುರಿದ ಮಳೆಗೆ ಸಾರ್ಟ್‌ಬಜಾರ್ ಬಳಿ ಮರ ಉರುಳಿಬಿದ್ದಿದ್ದು, ಮೂರು ವಾಹನಗಳು ಜಖಂಗೊಂಡಿವೆ. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆಯುಂಟಾಗಿತ್ತು. ಕೂಡಲೇ ಜಿಬಿಎ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವುಗೊಳಿಸಿದರು. ಜಖಂಗೊಂಡ ಕಾರಿನ ಮಾಲೀಕರೊಬ್ಬರು ಪ್ರತೀ ರಾತ್ರಿ ಕಾರಿನಲ್ಲೇ ಮಲಗುತ್ತಿದ್ದೆ. ಆದರೆ ಅದೃಷ್ಟವಶಾತ್ ಕಳೆದ ರಾತ್ರಿ ನಾನು ಕಾರಿನಲ್ಲಿ ಮಲಗದೇ ಮನೆಗೆ ಹೋಗಿದ್ದರಿಂದ ಪ್ರಾಣ ಉಳಿದಿದೆ ಎಂದು ತಿಳಿಸಿದ್ದಾರೆ.
ಒಂದು ಕಾರು, ಎರಡು ದ್ವಿಚಕ್ರ ವಾಹನಗಳು ಮರ ಬಿದ್ದು ಹಾನಿಯಾಗಿದ್ದು, ಕಾಮಗಾರಿಗಾಗಿ ರಸ್ತೆ ಅಗೆದಿದ್ದರಿಂದ ಮರದ ಬೇರುಗಳು ಸಡಿಲವಾಗಿ ಮುರಿದುಬಿದ್ದಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಭಾರೀ ಮಳೆಯಾಗಿದ್ದು, ಒಂದೇ ರಾತ್ರಿಗೆ ಹುಬ್ಬೆ ಹುಣಸೆ ಹಾಗೂ ಉಡುಕುತೊರೆ ಜಲಾಶಯಗಳು ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಮಳೆಯಾಗಿದ್ದು, ಇನ್ನೂ 2-3 ದಿನ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಟ್ರಾಫಿಕ್ ಜಾಮ್ ಜಾಮ್…:
ಬೆಳಗ್ಗೆ 8 ಗಂಟೆವರೆಗೂ ಮಳೆ ಸುರಿಯುತ್ತಿದ್ದರಿಂದ ಕೆಲಸ ಕಾರ್ಯ ಹಾಗೂ ಶಾಲಾ-ಕಾಲೇಜುಗಳಿಗೆ ತೆರಳುವವರಿಗೆ ತೀವ್ರ ತೊಂದರೆಯುಂಟಾಗಿತ್ತು.ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದವರು ಕಾರುಗಳಲ್ಲಿ ಬಂದಿದ್ದರಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಇನ್ನೂ ಕೆಲವರು ಮಳೆ ನಿಂತ ಬಳಿಕ ಹೊರಟಿದ್ದರಿಂದ ಮನೆಯಿಂದ ಹೊರಟಿದ್ದರಿಂದ ಒಮೆಲೆ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಸಂಚಾರದಟ್ಟಣೆ ಉಂಟಾಗಿತ್ತು.
