Homeರಾಜ್ಯಕೆಟ್ಟು ನಿಂತ ಬೆಂಗಳೂರು-ಹೊಸಪೇಟೆ ರೈಲು, ಹಳಿಯ ಮೇಲೆ ಲಗೇಜ್‌ ಹೊತ್ತು ನಡೆದ ಪ್ರಯಾಣಿಕರು

ಕೆಟ್ಟು ನಿಂತ ಬೆಂಗಳೂರು-ಹೊಸಪೇಟೆ ರೈಲು, ಹಳಿಯ ಮೇಲೆ ಲಗೇಜ್‌ ಹೊತ್ತು ನಡೆದ ಪ್ರಯಾಣಿಕರು

ತುರುವೇಕೆರೆ,ಸೆ.29- ಬೆಳಿಗ್ಗೆ ಬೆಂಗಳೂರಿನಿಂದ ಹೊರಟು ಸಂಜೆ ಹೊಸಪೇಟೆಗೆ ತಲುಪಬೇಕಿದ್ದ ರೈಲೊಂದು ಮಾರ್ಗಮಧ್ಯೆ ಕೆಟ್ಟು ನಿಂತು ಪ್ರಯಾಣಿಕರು ಪರದಾಡಿದ ಘಟನೆ ಕರಡಿ ಮತ್ತು ಅರಳುಗುಪ್ಪೆ ರೈಲು ನಿಲ್ದಾಣಗಳ ನಡುವೆ ನಡೆದಿದೆ.

ರೈಲು ಸಂಚರಿಸುತ್ತಿದ್ದಾಗ ಏಕಾಏಕಿ ಇಂಜಿನ್‌ನಲ್ಲಿ ದಟ್ಟ ಹೊಗೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಇಂಜಿನ್‌ ಆಫ್‌ ಮಾಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಆದರೆ, ಇಂಜಿನ್‌ ದೋಷದಿಂದಾಗಿ ರೈಲು ಮುಂದಕ್ಕೆ ಚಲಿಸಲಾಗದೆ ಹಳಿಯ ಮೇಲೆಯೇ ಸ್ಥಗಿತಗೊಂಡಿದೆ.

ನಡುದಾರಿಯಲ್ಲಿ ರೈಲು ನಿಂತಿದ್ದರಿಂದ ಪ್ರಯಾಣಿಕರು ತೀವ್ರ ಅನಾನುಕೂಲ ಎದುರಿಸುವಂತಾಯಿತು. ತಮ ಗಮ್ಯಸ್ಥಾನಗಳಿಗೆ ತೆರಳಬೇಕಿದ್ದವರು ಸಮಯಕ್ಕೆ ಸರಿಯಾಗಿ ತಲುಪಲಾಗದೆ ಹೈರಾಣಾದರು.

ಘಟನಾ ಸ್ಥಳದಲ್ಲಿ ಯಾವುದೇ ಪರ್ಯಾಯ ಸಾರಿಗೆ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಗತ್ಯಂತರವಿಲ್ಲದೆ ವೃದ್ಧರು, ಮಹಿಳೆಯರು ಸೇರಿದಂತೆ ಅನೇಕ ಪ್ರಯಾಣಿಕರು ತಮ ಭಾರೀ ಲಗೇಜ್‌ಗಳನ್ನು ಹೊತ್ತುಕೊಂಡು ರೈಲ್ವೆ ಹಳಿಯ ಪಕ್ಕದಲ್ಲೇ ಕಿಲೋಮೀಟರ್‌ಗಟ್ಟಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯಗಳು ಕಂಡುಬಂದವು. ರೈಲ್ವೆ ಇಲಾಖೆಯು ಇಂತಹ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ತಕ್ಷಣವೇ ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES
spot_img

Latest News