Homeರಾಜ್ಯಹಸಿರು ವಿವಿಗಳ ಶ್ರೇಯಾಂಕದಲ್ಲಿ ಆದಿಚುಂಚನಗಿರಿ ವಿವಿಗೆ ರಾಜ್ಯದಲ್ಲಿ 5ನೇ ಸ್ಥಾನ

ಹಸಿರು ವಿವಿಗಳ ಶ್ರೇಯಾಂಕದಲ್ಲಿ ಆದಿಚುಂಚನಗಿರಿ ವಿವಿಗೆ ರಾಜ್ಯದಲ್ಲಿ 5ನೇ ಸ್ಥಾನ

ನಾಗಮಂಗಲ, ಸೆ.30- ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವದ್ಧಿ ಹಾಗೂ ಹಸಿರು ಕ್ಯಾಂಪಸ್‌‍ನಿರ್ಮಾಣದತ್ತ ಆದಿಚುಂಚನಗಿರಿ ವಿಶ್ವವಿದ್ಯಾಲಯ ಕೈಗೊಂಡಿರುವ ಕ್ರಮಗಳಿಗೆ ಮತ್ತೊಂದು ಗೌರವ ದೊರೆತಿದೆ. 2026ನೇ ಸಾಲಿನ ಯುಐ ಗ್ರೀನ್‌ಮೆಟ್ರಿಕ್‌ಸಸ್ಟೈನಬಲ್‌ ಯೂನಿವರ್ಸಿಟಿ ರ್ಯಾಂಕಿಂಗ್‌ನಲ್ಲಿ ಕರ್ನಾಟಕದ ವಿಶ್ವವಿದ್ಯಾಲಯಗಳ ಪೈಕಿ ಐದನೇ ಸ್ಥಾನ ಪಡೆದುಕೊಂಡಿದೆ.

ಇಂಡೋನೇಷ್ಯಾದ ವಿಶ್ವವಿದ್ಯಾಲಯವು ಸೆ.25ರಂದು ಬಿಡುಗಡೆ ಮಾಡಿದ ಯುಐ ಗ್ರೀನ್‌ಮೆಟ್ರಿಕ್‌ ಸಸ್ಟೈನಬಲ್‌ ಯೂನಿವರ್ಸಿಟಿ ರ್ಯಾಂಕಿಂಗ್‌ರಲ್ಲಿ ಆದಿಚುಂಚನಗಿರಿ ವಿಶ್ವವಿದ್ಯಾಲಯವು ದೇಶದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ 49ನೇ ಸ್ಥಾನ ಪಡೆದುಕೊಂಡಿದೆ.

ಹಸಿರು ಕ್ಯಾಂಪಸ್‌‍, ಪರಿಸರ ಸುಸ್ಥಿರತೆ ಮತ್ತು ಪರಿಸರ ಸಂರಕ್ಷಣೆಯಲ್ಲಿನ ವಿಶ್ವವಿದ್ಯಾಲಯಗಳ ಬದ್ಧತೆಯನ್ನು ಆಧರಿಸಿ ಈ ಶ್ರೇಯಾಂಕವನ್ನು ಸಿದ್ಧಪಡಿಸಲಾಗುತ್ತದೆ. ಸುಸ್ಥಿರ ಮೂಲಸೌಕರ್ಯ, ಹಸಿರು ಇಂಧನ ಬಳಕೆ, ಹವಾಮಾನ ಬದಲಾವಣೆಗೆ ಸಂಬಂಧಿಸಿದ ಕ್ರಮಗಳು, ತ್ಯಾಜ್ಯ ನಿರ್ವಹಣೆ ಹಾಗೂ ಮರುಬಳಕೆ, ನೀರಿನ ಸಂರಕ್ಷಣೆ, ಹಸಿರು ಸಾರಿಗೆ, ಸುಸ್ಥಿರ ಶಿಕ್ಷಣ ಮತ್ತು ಸಂಶೋಧನೆ, ಆಡಳಿತ ಹಾಗೂ ಡಿಜಿಟಲೀಕರಣ ಸೇರಿದಂತೆ ಎಂಟು ಪ್ರಮುಖ ಮಾನದಂಡಗಳ ಆಧಾರದ ಮೇಲೆ ವಿಶ್ವವಿದ್ಯಾಲಯಗಳನ್ನು ಮೌಲ್ಯಮಾಪನ ಮಾಡಲಾಗಿದೆ.

ಪರಿಸರ ಸ್ನೇಹಿ ಕ್ಯಾಂಪಸ್‌‍, ಸಂಪನೂಲಗಳ ಸಮರ್ಪಕ ಬಳಕೆ, ತ್ಯಾಜ್ಯ ನಿರ್ವಹಣೆ, ನೀರಿನ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವದ್ಧಿಗೆ ಸಂಬಂಧಿಸಿದ ಕ್ರಮಗಳಿಗೆ ದೊರೆತಿರುವ ಈ ಮಾನ್ಯತೆ ವಿಶ್ವವಿದ್ಯಾಲಯದ ಪರಿಸರ ಕಾಳಜಿಗೆ ದೊರೆತಿರುವ ಪ್ರಮುಖ ಗೌರವವಾಗಿದೆ.

RELATED ARTICLES
spot_img

Latest News