ಬೆಂಗಳೂರು,ಅ.3- ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾಗಿದ್ದ ಶಿವೈಕ್ಯ ಡಾ.ಶ್ರೀ ಶಿವಕುಮಾರ ಮಹಾಸ್ವಾಮೀಜಿ ಅವರ ಬಗ್ಗೆ ಲಘುವಾಗಿ ಮಾತನಾಡಿರುವ ನೈಸ್ ಗುತ್ತಿಗೆದಾರ ಅಶೋಕ್ ಖೇಣಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಈ ಸಂಬಧ ಎಕ್‌್ಸನಲ್ಲಿ ಪೋಸ್ಟ್ ಮಾಡಿರುವ ಅವರು, ಇಂತಹ ಫ್ರಾಡ್ ವ್ಯಕ್ತಿಗೆ ಈ ರಾಜ್ಯದ ಮುಖ್ಯಮಂತ್ರಿ ರಕ್ಷಣೆ ಕೊಡುತ್ತ ಬಂದಿದ್ದಾರೆ. ಅಲ್ಲದೆ, ಅವರ ಜೊತೆ ಶಾಮೀಲಾಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಈ ಅಶೋಕ್ ಖೇಣಿ ಸಿದ್ದಗಂಗಾ ಮಠದ ಆಸ್ತಿಯನ್ನು ಕೂಡ ಲೂಟಿ ಮಾಡಿದ್ದಾರೆ. ಇಂತಹ ಧರ್ಮ ದ್ರೋಹಿಗೆ ಡಿಕೆಶಿ ಸಹಕಾರ ಕೊಡುತ್ತಾ ಬಂದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿ ಇರುವ ಶೋಭಾ ಅಪಾರ್ಟೆಂಟ್ ಯಾರದು? ಅದಕ್ಕೆ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕುಟುಂಬ, ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೂ ಏನು ಸಂಬಂಧ? ಅಮಾಸೆಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಎಂಬುವರು ಯಾರು? ಈ ಮುಖ್ಯಮಂತ್ರಿ ತಮ ಮತ್ತು ತಾಯಿ ಹೆಸರಿಗೆ ಆ ಭೂಮಿಯನ್ನು ಖರಿದಿಸಿದ್ದು ಹೇಗೆ? ಒಮೆ ಸರ್ಕಾರಿ ಯೋಜನೆಗೆ ನೋಟಿಫೈ ಆಗಿರುವ ಭೂಮಿಯನ್ನು ಇವರು ಖರೀದಿಸಲು ಹೇಗೆ ಸಾಧ್ಯವಾಯಿತು? ಎನ್‌ಓಸಿ ಹೇಗೆ ಸಿಕ್ಕಿತು? ಅಲ್ಲಿ ಕಟ್ಟಲಾಗಿರುವ ಗಗನಚುಂಬಿ ಶೋಭಾ ಅಪಾರ್ಟೆಂಟ್ ಮೂಲಕ ಅವರು 2000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮಾಡಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ.
ಈ ನೈಸ್ ರಸ್ತೆ ಅಕ್ಕಪಕ್ಕದಲ್ಲಿರುವ ಸ್ವಾಧೀನ ಆಗಿರುವ ಭೂಮಿಗೆ ಬಡವರಿಗೆ ಯಾರಿಗೂ ಈ ನೈಸ್ ಕಂಪನಿ ಗುತ್ತಿಗೆದಾರ ಎನ್‌ಓಸಿ ಕೊಟ್ಟಿಲ್ಲ. ಅಷ್ಟೇ ಅಲ್ಲ, ಸಿದ್ದಗಂಗಾ ಮಠಕ್ಕೆ ಎನ್‌ಓಸಿ ನಿರಾಕರಿಸಿದ್ದಾರೆ. ಆದರೆ, ಈ ರಸ್ತೆಯ ಸುತ್ತಮುತ್ತ 200-300 ಎಕರೆಯಷ್ಟು ಭೂಮಿಯನ್ನು ಮುಖ್ಯಮಂತ್ರಿ ಮತ್ತವರ ಪರಿವಾರ ಖರೀದಿಸಿದ್ದು ಹೇಗೆ? ಅವರು ಅನ್ಯಾಯದ ಮಾರ್ಗದಲ್ಲಿ ಕಸಿದುಕೊಂಡಿದ್ದಾರೆ. ಹೆದರಿಸಿ ಬೆದರಿಸಿ ಭೂಮಿಯನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಿತಿ ಮೀರಿದ ದುರಾಸೆ, ಅಂಕೆ ಇಲ್ಲದ ಭೂದಾಹ, ದೇವರು ಕೊಟ್ಟಿದ್ದು ಸಾಲದು.ಇನ್ನೂ ಬೇಕು ಎನ್ನುವ ಹಪಾಹಪಿ. ಮನುಷ್ಯನನ್ನು ತಪ್ಪುಗಳ ಮೇಲೆ ತಪ್ಪುಗಳನ್ನು ಮಾಡಲು ಪ್ರೇರೇಪಿಸುತ್ತದೆ. ನಮ ರಾಜ್ಯದ ಮುಖ್ಯಮಂತ್ರಿಯ ಕಥೆಯೂ ಹಾಗೆ ಆಗಿದೆ. ಶಿಶುಪಾಲನಿಗೆ ನೂರೊಂದು ತಪ್ಪುಗಳನ್ನು ಮಾಡಲು ಶ್ರೀಕೃಷ್ಣ ಪರಮಾತನು ಅವಕಾಶ ಕೊಟ್ಟಂತೆಯೇ ರಾಜ್ಯದ ಜನರೂ ಈ ವ್ಯಕ್ತಿಯ ತಪ್ಪುಗಳನ್ನು ಗಮನಿಸುತ್ತಲೇ ಬಂದು ಕೊನೆಯ ಅವಕಾಶ ನೀಡಿದ್ದಾರೆ. ಅವರ ಭೂದಾಹಕ್ಕೆ ಈಗ ಇಡೀ ನೈಸ್ ರಸ್ತೆ ಯೋಜನೆಯೇ ಸ್ವಾಹಾ ಆಗುವ ಅಪಾಯ ಎದುರಾಗಿದೆ.
ಹೈದರಾಬಾದ್ ಉದ್ಯಮಿ ಜತೆ ಶಾಮೀಲಾಗಿ ಇಡೀ ಪ್ರಾಜೆಕ್ಟ್ ಅನ್ನು ಖರೀದಿ ಮಾಡಲು ಹೊರಟಿದ್ದಾರೆ. ಮುಂದಿನ ವರ್ಷಕ್ಕೆ ನೈಸ್ ಒಪ್ಪಂದ ಮುಗಿಯುತ್ತದೆ. ಅದಕ್ಕೂ ಮೊದಲೇ ಅದನ್ನು ನುಂಗಿಬಿಡುವ ದುಸ್ಸಾಹಸಕ್ಕೆ ಈ ಮುಖ್ಯಮಂತ್ರಿ ಕೈ ಹಾಕಿದ್ದಾರೆ ಎಂದು ಅವರು ಆಪಾದಿಸಿದ್ದಾರೆ.
