Homeರಾಷ್ಟ್ರೀಯಪ್ರಾಣ ಪಣಕ್ಕಿಟ್ಟು ವಿಮಾನ ಪತನ ತಪ್ಪಿಸಿದ ಪೈಲಟ್‌ ಮಚ್ಚರ್‌ಗೆ 1 ಕೋಟಿ ರೂ. ಬಹುಮಾನ

ಪ್ರಾಣ ಪಣಕ್ಕಿಟ್ಟು ವಿಮಾನ ಪತನ ತಪ್ಪಿಸಿದ ಪೈಲಟ್‌ ಮಚ್ಚರ್‌ಗೆ 1 ಕೋಟಿ ರೂ. ಬಹುಮಾನ

ನವದೆಹಲಿ,ಅ.3- ದುಬೈನಿಂದ ಟೆಲ್‌ ಅವೀವ್‌ಗೆ ಪ್ರಯಾಣಿಸುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಅಪಹರಣ ಮತ್ತು ವಿಮಾನ ಪತನಗೊಳಿಸುವ ಸಂಚನ್ನು ಜೀವದ ಹಂಗು ತೊರೆದು ವಿಫಲಗೊಳಿಸಿದ ಭಾರತೀಯ ಪೈಲಟ್‌ ಕ್ಯಾಪ್ಟನ್‌ ಸ್ಮಿತ್ ಮಚ್ಚರ್‌ ಅವರಿಗೆ ಮ್ಯಾನ್‌ಕೈಂಡ್‌ ಫಾರ್ಮಾ ಸಂಸ್ಥೆಯು 1 ಕೋಟಿ ರೂ.ಗಳ ನಗದು ಬಹುಮಾನ ಘೋಷಿಸಿದೆ.ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿರುವ ಸಂಸ್ಥೆಯು, ಕ್ಯಾಪ್ಟನ್‌ ಸಿತ್‌ ಮಚ್ಚರ್‌ ತಮ ಜೀವಕ್ಕಿಂತ ಹೆಚ್ಚಾಗಿ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡಿದರು.

ಇದು ನಿಜವಾದ ನಾಯಕತ್ವ. ಅವರ ಈ ಅಸಾಧಾರಣ ಸೇವೆಗೆ ನಮ ಕೃತಜ್ಞತೆಯ ಸಂಕೇತವಾಗಿ 1 ಕೋಟಿ ರೂ. ಬಹುಮಾನ ನೀಡುತ್ತಿದ್ದೇವೆ. ಅವರು ಭಾರತವೇ ಹೆಮೆ ಪಡುವಂತೆ ಮಾಡಿದ್ದಾರೆ ಎಂದು ಹೇಳಿದೆ.ಕ್ಯಾಪ್ಟನ್‌ ಸಿತ್‌ ಮಚ್ಚರ್‌ ಅವರ ಸಾಹಸಿಕ ಹಾಗೂ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿರುವ ಪ್ರಮುಖ ಔಷಧೀಯ ಕಂಪನಿ ಮ್ಯಾನ್‌ಕೈಂಡ್‌ ಫಾರ್ಮಾ, ಕ್ಯಾಪ್ಟನ್‌ ಸಿತ್‌ ಹಾಗೂ ಅವರ ಕುಟುಂಬಕ್ಕೆ 1 ಕೋಟಿ ರೂಪಾಯಿ ನಗದು ಬಹುಮಾನವನ್ನು ನೀಡುವುದಾಗಿ ಪ್ರಕಟಿಸಿದೆ.

ಶೌರ್ಯ ಪ್ರಶಸ್ತಿಗೆ ಆಗ್ರಹ:
ಕ್ಯಾಪ್ಟನ್‌ ಸಿತ್‌ ಅವರ ಶೌರ್ಯವನ್ನು ಗೌರವಿಸಿ ಅವರಿಗೆ ಭಾರತ ಸರ್ಕಾರದ ವತಿಯಿಂದ ಶೌರ್ಯ ಪ್ರಶಸ್ತಿ ನೀಡಬೇಕೆಂದು ಭಾರತೀಯ ಪೈಲಟ್‌ಗಳ ಒಕ್ಕೂಟ ಒತ್ತಾಯಿಸಿದೆ. ಎಫ್‌ಐಪಿ ಅಧ್ಯಕ್ಷ ಕ್ಯಾಪ್ಟನ್‌ ಸಿ.ಎಸ್‌‍. ರಾಂಧವ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರಾಣಾಪಾಯದ ಸ್ಥಿತಿಯಲ್ಲೂ ಕರ್ತವ್ಯ ನಿರ್ವಹಿಸಿ ನೂರಾರು ಜೀವಗಳನ್ನು ರಕ್ಷಿಸಿದ ಕ್ಯಾಪ್ಟನ್‌ ಸಿತ್‌ ಅವರಿಗೆ ಸೂಕ್ತ ಗೌರವ ಮತ್ತು ಪ್ರಶಸ್ತಿ ನೀಡಬೇಕೆಂದು ಕೋರಿದ್ದಾರೆ.

ಘಟನೆಯ ವಿವರ:
ಕಳೆದ ಸೆಪ್ಟೆಂಬರ್‌ 30 (ಬುಧವಾರ) ರಂದು 27 ಮಕ್ಕಳು ಸೇರಿದಂತೆ ಒಟ್ಟು 174 ಪ್ರಯಾಣಿಕರಿದ್ದ ಫ್ಲೈದುಬೈ ಎಫ್‌ಝಡ್‌1073 ವಿಮಾನವು ದುಬೈನಿಂದ ಟೆಲ್‌ ಅವೀವ್‌ಗೆ ತೆರಳುತ್ತಿದ್ದಾಗ ಈ ರೋಮಾಂಚಕಾರಿ ಹಾಗೂ ಭೀಕರ ಘಟನೆ ಸಂಭವಿಸಿದೆ. ವಿಮಾನದ ಸಹ-ಪೈಲಟ್‌, ಒಮಾನ್‌ ಮೂಲದ ಹಮಾಮ್‌ ಅಲ್‌-ಹಮಾಮಿ ಎಂಬಾತ ಕಾಕ್‌ಪಿಟ್‌ನೊಳಗೆ ಕ್ಯಾಪ್ಟನ್‌ ಸಿತ್‌ ಮಚ್ಚರ್‌ ಅವರ ಮೇಲೆ ಚಾಕುವಿನಿಂದ ದಿಢೀರ್‌ ದಾಳಿ ನಡೆಸಿದ್ದಲ್ಲದೆ, ಕೊಡಲಿ ಏಟು ನೀಡಿ ವಿಮಾನವನ್ನು ಅಪಹರಿಸಿ ಪತನಗೊಳಿಸಲು ಯತ್ನಿಸಿದ್ದ.

ತೀವ್ರ ರಕ್ತಸ್ರಾವ ಮತ್ತು ಗಂಭೀರ ಗಾಯಗಳ ಹೊರತಾಗಿಯೂ ಅಪ್ರತಿಮ ಧೈರ್ಯ ಪ್ರದರ್ಶಿಸಿದ ಕ್ಯಾಪ್ಟನ್‌ ಸಿತ್‌, ದಾಳಿಕೋರನನ್ನು ಧೈರ್ಯವಾಗಿ ಎದುರಿಸಿ ಕಾಕ್‌ಪಿಟ್‌ ಬಾಗಿಲನ್ನು ತೆರೆಯುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆಯುತ್ತಿದ್ದಂತೆ ವಿಮಾನದಲ್ಲಿದ್ದ ಇಸ್ರೇಲಿ ಪ್ರಯಾಣಿಕರು ತಕ್ಷಣ ಕಾಕ್‌ಪಿಟ್‌ಗೆ ನುಗ್ಗಿ ದಾಳಿಕೋರ ಹಮಾಮ್‌ ಅಲ್‌-ಹಮಾಮಿಯನ್ನು ಬಂಧಿಸಿ ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಿಂದಾಗಿ ವಿಮಾನದಲ್ಲಿದ್ದ 170ಕ್ಕೂ ಹೆಚ್ಚು ಪ್ರಯಾಣಿಕರ ಜೀವ ಉಳಿಯಿತು.

RELATED ARTICLES
spot_img

Latest News