Homeರಾಜ್ಯ2025-26ನೇ ಸಾಲಿನಲ್ಲಿ ಬೆಸ್ಕಾಂಗೆ ಬರೋಬ್ಬರಿ 293 ಕೋಟಿ ಆದಾಯ

2025-26ನೇ ಸಾಲಿನಲ್ಲಿ ಬೆಸ್ಕಾಂಗೆ ಬರೋಬ್ಬರಿ 293 ಕೋಟಿ ಆದಾಯ

ಬೆಂಗಳೂರು,ಅ.3- ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತವು 2025-26ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 293.62 ಕೋಟಿ ರೂ. ಲಾಭ ದಾಖಲಿಸಿದೆ. ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಸ್ಕಾಂನ 144ನೇ ಆಡಳಿತ ಮಂಡಳಿ ಸಭೆಯಲ್ಲಿ 2025-26ನೇ ಸಾಲಿನ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆ ಹಾಗೂ ಲಾಭಾಂಶ ದಾಖಲಿಸಲು ಕಾರಣವಾದ ಅಂಶಗಳನ್ನು ಮಂಡಿಸಲಾಯಿತು.

ಬೆಸ್ಕಾಂ ಲಾಭದ ಹಾದಿಯಲ್ಲಿ ಸಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇಂಧನ ಸಚಿವರು, ಹೆಚ್ಚಿದ ಆದಾಯ ವಸೂಲಿ, ವಿದ್ಯುತ್‌ ಖರೀದಿಯಲ್ಲಿ ಸಮರ್ಪಕ ನಿರ್ವಹಣೆ ಮತ್ತು ಹಣಕಾಸು ವೆಚ್ಚದಲ್ಲಿನ ಇಳಿಕೆ, ಆರ್ಥಿಕ ಶಿಸ್ತು ಹೆಚ್ಚಿಸಿರುವುದು ಮುಂತಾದ ಸಂಯೋಜಿತ ಪರಿಣಾಮವಾಗಿ 2025-26ನೇ ಸಾಲಿನಲ್ಲಿ ಬೆಸ್ಕಾಂ 293.62 ಕೋಟಿ ರೂ. ಲಾಭ ದಾಖಲಿಸಲು ಸಾಧ್ಯವಾಗಿದೆ ಎಂದರು.

ಅಲ್ಲದೆ, ಆದಾಯ ಹೆಚ್ಚಳ ಮತ್ತು ವೆಚ್ಚ ನಿಯಂತ್ರಣಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸುಧಾರಣೆ ತರಲಾಗಿದೆ, ಎಂದು ಸಚಿವರು ಹೇಳಿದರು.
ಆದಾಯದ ಕುರಿತು ಮಾಹಿತಿ ಹಂಚಿಕೊಂಡ ಇಂಧನ ಸಚಿವರು, ನಮ ಸಮರ್ಪಕ ಬಿಲ್ಲಿಂಗ್‌ ವ್ಯವಸ್ಥೆಯು ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಪ್ರೋಬ್‌ ರೀಡಿಂಗ್‌ ವ್ಯವಸ್ಥೆಯಿಂದ ಸಿಬ್ಬಂದಿ ಹಸ್ತಕ್ಷೇಪ ಕಡಿಮೆಯಾಗಿದ್ದು, ಬಿಲ್ಲಿಂಗ್‌ ನಿಖರತೆ ಹೆಚ್ಚಿದೆ. ಇದರಿಂದ ಸುಮಾರು 100 ಮಿಲಿಯನ್‌ ಯೂನಿಟ್‌ ಹೆಚ್ಚುವರಿ ವಿದ್ಯುತ್‌ ಮಾರಾಟಕ್ಕೆ ಕಾರಣವಾಗಿರುವುದರ ಜತೆಗೆ ಗರಿಷ್ಠ ಬೇಡಿಕೆಯನ್ನು ನಿಖರವಾಗಿ ದಾಖಲಿಸಲು ಸಹ ನೆರವಾಗಿದೆ.

ಹೆಚ್ಚಿನ ಆದಾಯ ನೀಡುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರ ವಿಭಾಗದಲ್ಲಿ ಶೇ.100ರಷ್ಟು ಬಿಲ್ಲಿಂಗ್‌ ದಕ್ಷತೆ ಸಾಧಿಸಲು ಬೆಸ್ಕಾಂ ಮುಂದಾಗಿದೆ, ಎಂದರು. ಹೆಚ್ಚಿನ ಮೊತ್ತದ ಬಾಕಿ ಹಣಕ್ಕೆ ಸಂಬಂಧಿತ ಕಾನೂನು ಹೋರಾಟ ಮತ್ತು ನಿಯಂತ್ರಣ ಸಂಬಂಧಿತ ಪ್ರಕರಣಗಳ ನಿರಂತರ ಅನುಸರಣೆ ಮೂಲಕ ಕಂಪನಿಗೆ ಬರಬೇಕಿದ್ದ ಆದಾಯವನ್ನು ಪಡೆಯಲು ಕ್ರಮ ಕೈಗೊಳ್ಳಲಾಗಿದೆ.

RELATED ARTICLES
spot_img

Latest News