Homeಮನರಂಜನೆಮೈಸೂರು ಅರಮನೆ ವೈಭವಕ್ಕೆ ಮನಸೋತ ನಟಿ ಕಾಜಲ್‌ ಅಗರ್ವಾಲ್‌

ಮೈಸೂರು ಅರಮನೆ ವೈಭವಕ್ಕೆ ಮನಸೋತ ನಟಿ ಕಾಜಲ್‌ ಅಗರ್ವಾಲ್‌

ಮೈಸೂರು,ಅ.6- ದಕ್ಷಿಣ ಭಾರತದ ನಟಿ ಕಾಜಲ್‌ ಅಗರ್ವಾಲ್‌ ಮೈಸೂರಿನ ವಿಶ್ವವಿಖ್ಯಾತ ಅರಮನೆಗೆ ಭೇಟಿ ನೀಡಿ ಅರಮನೆಯ ವೈಭವ ಕಣ್ತುಂಬಿಕೊಂಡರು.ಅರಮನೆಯ ಭವ್ಯ ವಾಸ್ತುಶಿಲ್ಪ, ಕಲಾತಕ ವಿನ್ಯಾಸ ಮತ್ತು ಐತಿಹಾಸಿಕ ಹಿನ್ನೆಲೆಯನ್ನು ಆಸಕ್ತಿಯಿಂದ ಕಾಜಲ್‌ ವೀಕ್ಷಿಸಿದರು.

ವಿಶೇಷವಾಗಿ ದರ್ಬಾರ್‌ ಹಾಲ್‌ನ ಭವ್ಯತೆ ಮತ್ತು ಅಲಂಕಾರಕ್ಕೆ ಮನಸೋತರು. ಮೈಸೂರು ಅರಮನೆ ಭಾರತೀಯ ರಾಜಮನೆತನದ ಪರಂಪರೆ ಮತ್ತು ವಾಸ್ತುಶಿಲ್ಪದ ಅದ್ಭುತ ಪ್ರತೀಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಅರಮನೆ ಆವರಣದಲ್ಲಿ ಕೆಲಕಾಲ ಕಳೆದು ಪ್ರವಾಸದ ಅನುಭವವನ್ನು ಸವಿದರು.

RELATED ARTICLES
spot_img

Latest News