ಬೆಂಗಳೂರು, ಅ.6-ಕಳೆದ ನಾಲ್ಕು ದಿನಗಳಿಂದ ಚೇತರಿಕೆ ಕಾಣದ ಚಿನ್ನದ ದರವು ಇಳಿಮುಖದ ಹಾದಿಯಲ್ಲೇ ಸಾಗುತ್ತಿದೆ. ಆದರೆ, ಬೆಳ್ಳಿ ದರ ಮಾತ್ರ ಕಳೆದ ಎರಡು ವಾರಗಳಿಂದ ಸ್ಥಿರವಾಗಿದೆ.
ಜಾಗತಿಕವಾಗಿ ಆಗಾಗ್ಗೆ ಉಂಟಾಗುವ ವಿದ್ಯಮಾನಗಳು ಹಾಗೂ ಬದಲಾವಣೆಗಳ ಪರಿಣಾಮದಿಂದ ಚಿನಿವಾರಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಏರಿಳಿತ ಉಂಟಾಗುತ್ತಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಅಕ್ಟೋಬರ್ ಮೂರರ ನಂತರ ಚಿನ್ನದ ದರದಲ್ಲಿ ಏರಿಕೆಯಾಗಿಲ್ಲ. ಇಂದು ಬೆಳಿಗ್ಗೆ 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 16 ರೂ.ಕಡಿಮೆಯಾಗಿದ್ದು, 14,902 ರೂ.ನಷ್ಟಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 15 ರೂ. ಇಳಿಕೆಯಾಗಿದ್ದು, 13,660 ರೂ.ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 12 ರೂ. ಕುಸಿತವಾಗಿದ್ದು,11,177 ರೂ. ನಷ್ಟಿದೆ.
ಚಿನ್ನದದಂತೆ ಪ್ಲಾಟಿನಮ್ ದರವು ಇಳಿಕೆಯಾಗಿದೆ. 10 ಗ್ರಾಂಗೆ 210 ರೂ.ಕಡಿಮೆಯಾಗಿದ್ದು, ಪ್ರಸ್ತುತ 52,700 ರೂ. ನಷ್ಟಿದೆ.ಇನ್ನೂ ಬೆಳ್ಳಿ ದರವು ಚೇತರಿಕೆ ಕಾಣದೇ ಸ್ಥಿರತೆಯಲ್ಲೇ ಮುಂದುವರೆಯುತ್ತಿದೆ. ಕಳೆದ ಎರಡು ವಾರಗಳಿಂದ ಇಳಿಕೆಯತ್ತ ಸಾಗುತ್ತಾ ಬಂದಿರುವ ಬೆಳ್ಳಿ ದರವು ಒಂದು ಕೆ.ಜಿ.ಗೆ 2.35 ಲಕ್ಷ ರೂ.ನಷ್ಟಿದೆ. ಅಕ್ಟೋಬರ್ ಒಂದರಿಂದ ಇದೇ ದರ ಮುಂದುವರೆದಿದೆ.
