Homeಜಿಲ್ಲಾ ಸುದ್ದಿಗಳುಅ.14 ರಿಂದ 19ರವರೆಗೆ ಯೋಗ ದಸರಾ

ಅ.14 ರಿಂದ 19ರವರೆಗೆ ಯೋಗ ದಸರಾ

ಮೈಸೂರು: ಅ. 7- ದಸರಾ ಮಹೋತ್ಸವದ ಹಿನ್ನಲೆಯಲ್ಲಿ ಅ.14 ರಿಂದ 19 ರವರೆಗೆ 4 ದಿನಗಳ ಕಾಲ ಯೋಗ ದಸರಾ ನಡೆಯಲಿದ್ದು, ಅ.14ರಂದು ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಭೂ ದಾಖಲೆಗಳ ಉಪನಿರ್ದೇಶಕರು ಹಾಗೂ ಯೋಗ ದಸರಾ ಉಪವಿಶೇಷಾಧಿಕಾರಿ ರಮ್ಯ ಅವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅ. 14, 16, 18 ಹಾಗೂ 19 ರಂದು ನಾಲ್ಕು ದಿನಗಳ ಕಾಲ ಯೋಗ ದಸರಾ ಹಮಿಕೊಂಡಿದ್ದು ಅ.14 ರಂದು ಬೆಳಗ್ಗೆ 10 ಗಂಟೆಗೆ ನಗರದ ಜೆಕೆ ಮೈದಾನದಲ್ಲಿರುವ ಮೈಸೂರು ಮೆಡಿಕಲ್‌ ಕಾಲೇಜಿನ ಅಲ್ಯೂಮಿನಿ ಸಭಾಂಗಣದಲ್ಲಿ ಆರೋಗ್ಯ ಸಚಿವರಾದ ಯು.ಟಿ ಖಾದರ್‌ ಅವರು ಉದ್ಘಾಟನೆ ಮಾಡುವರು. ಅಂದು ಅದೇ ವೇದಿಕೆಯಲ್ಲಿ ಒಂದು ದಿನದ ಯೋಗ ವೈಜ್ಞಾನಿಕ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಹೇಳಿದರು.

ವೈಜ್ಞಾನಿಕ ವಿಚಾರ ಸಂಕಿರಣದಲ್ಲಿ ಆರೋಗ್ಯಕರ ಜೀವನ ನಡೆಸಲು ಯೋಗದ ಪಾತ್ರ ಹಾಗೂ ಇನ್ನಿತರೆ ವಿಷಯಗಳ ಬಗ್ಗೆ ಡಾ: ಎಂ ಯು ಸುಜನ್‌, ಡಾ: ಪಿ ಸುಧಾಕರ್‌, ಡಾ ಹರೀಶ್‌ ಬಾಬು ಹಾಗೂ ಡಾ: ಅರುಣ್‌ ಪಿ.ಜಿ ಅವರುಗಳು ವಿಚಾರ ಸಂಕಿರಣ ನಡೆಸಿಕೊಡಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.

ಜಿಲ್ಲಾ ಆಯುಷ್‌ ಅಧಿಕಾರಿ ಡಾ.ರೇಣುಕಾ ದೇವಿ ಮಾತನಾಡಿ, ಅ.16 ರಂದು ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆಯನ್ನು ವಸ್ತುಪ್ರದರ್ಶನ ಆವರಣದ ಪಿ.ಕಾಳಿಂಗರಾವ್‌ ಸಭಾಂಗಣದಲ್ಲಿ ಆಯೋಜಿಸಿದ್ದು, ಅಂದು ಬೆಳಗ್ಗೆ 10 ಗಂಟೆಗೆ ಶಾಸಕರಾದ ಟಿ.ಎ.ಸ್‌‍.ಶ್ರೀವತ್ಸ ಅವರು ಉದ್ಘಾಟನೆ ಮಾಡಲಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಸ್ಪರ್ಧಿಗಳು ಆನ್‌ ಲೈನ್‌ ಮುಖಾಂತರ ರಿಜಿಸ್ಟರ್‌ ಮಾಡಿಕೊಳ್ಳಬಹುದು, ಪ್ರಥಮ ಬಹುಮಾನ 3,000, ದ್ವಿತೀಯ ಬಹುಮಾನ 2,500 ಹಾಗೂ ತೃತೀಯ ಬಹುಮಾನ 2,000 ರೂ.ಗಳ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಅ.18 ರಂದು ಗ್ರಾಮೀಣ ಯೋಗ ದಸರಾ ಕಾರ್ಯಕ್ರಮವನ್ನು ನಂಜನಗೂಡು ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದ್ದು, ಶಾಸಕರಾದ ದರ್ಶನ್‌ ದೃವನಾರಾಯಣ್‌ ಅವರು ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಯೋಗ ದಸರಾ ಉಪಸಮಿತಿ ಕಾರ್ಯಾಧ್ಯಕ್ಷೆ ನಿರೂಪ್‌ ವೆಸ್ಲಿ ಮಾತನಾಡಿ, ಅ.19ರಂದು ಯೋಗ ಚಾರಣ ಹಾಗೂ ದುರ್ಗಾ ನಮಸ್ಕಾರ ಕಾರ್ಯಕ್ರಮ ಹಮಿಕೊಂಡಿದ್ದು ಅಂದು ಬೆಳಗ್ಗೆ 6 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಿಂದ ಮೆಟ್ಟಿಲುಗಳ ಮೂಲಕ ದೇವಸ್ಥಾನದವರೆಗೂ ಚಾರಣ ಮಾಡುವುದು ಹಾಗೂ ಬೆಳಗ್ಗೆ 8 ಗಂಟೆಗೆ ದೆವಸ್ಥಾನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ದುರ್ಗಾ ನಮಸ್ಕಾರ ಯೋಗಾಸನ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಟಿ.ದೇವೇಗೌಡ ಅವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಈ ವೇಳೆ ಗಣ್ಯರಾದ ಸುಶೀಲ್‌‍, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕಾರಾದ ನಿರ್ಮಲಾ ಅವರು ಭಾಗವಹಿಸಿದ್ದರು.

ಅ.11 ರಿಂದ 20 ರವರೆಗೆ ದಸರಾ ಪುಸ್ತಕ ಮೇಳ

ಮೈಸೂರು,ಅ. 7- ದಸರಾ ಮಹೋತ್ಸವದ ಅಂಗವಾಗಿ ಅ.11 ರಿಂದ 20ರವರೆಗೆ ಮೈಸೂರು ದಸರಾ ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳವನ್ನು ನಗರದ ಭಾರತ್‌ ಸೌಟ್‌್ಸಮತ್ತು ಗೈಡ್‌್ಸಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್‌ ತಂಗಡಗಿ ಅವರು ಉದ್ಘಾಟಿಸಲಿದ್ದು, ನಗರದ ಕಲಾಮಂದಿರ ಆವರಣದಲ್ಲಿ ಪುಸ್ತಕ ಮೇಳದಲ್ಲಿ ಸುಮಾರು 70 ಪ್ರಕಾಶಕರು ಭಾಗವಹಿಸಲಿದ್ದು, 90 ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರತೀ ದಿನ ಬೆಳಿಗ್ಗೆ ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ ಇರುತ್ತದೆ. ಹಾಗೆಯೇ ಸಂಜೆ ಸೆಲ್ಫಿ ವಿತ್‌ ಸಾಹಿತಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಮಾಹಿತಿ ನೀಡದರು.

ವಿವಿಧ ಕಾರ್ಯಕ್ರಮ :
ಅ.12 ರಂದು ಕನ್ನಡ ಪುಸ್ತಕ ಪ್ರಾಧಿಕಾರದಿಂದ ಮುದ್ರಣವಾಗಿರುವ 12 ಕೃತಿಗಳ ಬಿಡುಗಡೆ ಮಾಡಲಾಗುವುದು. ಅ.13 ರಂದು ಅಮ ರಾಮಚಂದ್ರರವರಿಂದ ಭಾವಗೀತೆ ಗಾಯನ, ಅ.14 ರಂದು ಯುವರಾಜ ಕಾಲೇಜು ವಿದ್ಯಾರ್ಥಿಗಳಿಂದ ನನ್ನ ಮೆಚ್ಚಿನ ಪುಸ್ತಕ ಓದು ಕಾರ್ಯಕ್ರಮ, ಅ.15 ರಂದು ಶ್ರೀ ಸಬ್ಬನಹಳ್ಳಿ ರಾಜು ಮತ್ತು ತಂಡದವತಿಯಿಂದ ಜನಪದ ಗೀತೆಗಳ ಗಾಯನ, ಅ.16 ರಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ ಹಾಗೂ ಕೆ.ಎಸ್‌‍.ಎನ್‌.ಟ್ರಸ್ಟ್‌ ನವರ ವತಿಯಿಂದ ಕವಿಗೋಷ್ಠಿ ಮತ್ತು ಕುಂಚ, ಕಾವ್ಯ ಗಾಯನ ನಡೆಸಲಾಗುವುದು.

ಅ.17 ರಂದು ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಂದ ರಂಗಗೀತೆ ಗಾಯನ, ಅ.18 ರಂದು ಚಾಮರಾಜನಗರದ ಶ್ರೀ ನರಸಿಂಹಮೂರ್ತಿ ಸಿ.ಎಂ. ಮತ್ತು ಬಸವರಾಜು ಬಿ. ತಂಡದ ವತಿಯಿಂದ ಕನಕ ಕೀರ್ತನೆ – ತತ್ವಪದಗಳು ಹಾಗೂ ಅ.19 ರಂದು ತುಮಕೂರಿನ ಶ್ರೀ ಎ.ಎನ್‌. ತಿಮಯ್ಯ ಅವರಿಂದ ದೇವಿ ಮಹಾತ ಮೂಡಲಪಾಯ ಯಕ್ಷಗಾನ ಪ್ರಸಂಗ ನಡೆಯಲಿದೆ ಎಂದು ತಿಳಿಸಿದರು.

ಪ್ರತೀ ದಿನ ಪುಸ್ತಕ ಮೇಳದಲ್ಲಿ ಕವಿತೆ ವಾಚಿಸಿ ಗಿಡ ಗಿಟ್ಟಿಸಿ ಎಂಬ ಹೊಸ ಕಾರ್ಯಕ್ರಮವನ್ನು ಆಯೋಜಿಸಿದ್ದು, ಆಸಕ್ತ ಕವಿಗಳು ತಮ ಕವಿತೆ ಓದಿ-ವಂದು ಗಿಡ ಪಡೆಯಬಹುದಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ದಸರಾ ಪುಸ್ತಕ ಮೇಳದ ಪೋಸ್ಟರ್‌ ಅನ್ನು ಬಿಡುಗಡೆಗೊಳಿಸಿದರು.

ಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕಿ ಎಸ್‌‍.ನಿರ್ಮಲ ಮಠಾಪತಿ, ಮೈಸೂರು ಜಿಲ್ಲಾ ಗ್ರಂಥಾಲಯ ಉಪ ನಿರ್ದೇಶಕಿ ಸಮ ಬಿ ಕೋಡಿಹಳ್ಳಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ನಂಜಯ್ಯ ಹೊಂಗನೂರು, ಕನ್ನಡ ಪುಸ್ತಕ ಪ್ರಾಧಿಕಾರ ಆಡಳಿತಾಧಿಕಾರಿ ಕೆ.ಬಿ.ಕಿರಣ್‌ ಸಿಂಗ್‌, ಮೈಸೂರು ಜಿಲ್ಲಾ ಸಾಹಿತ್ಯ ಪರಿಷತ್‌ ಮಾಜಿ ಅಧ್ಯಕ್ಷ ಚಂದ್ರಶೇಖರ್‌ ಹಾಗೂ ಮಹಾರಾಜ ಕಾಲೇಜು ಪ್ರಾಧ್ಯಾಪಕ ಪರಶುರಾಮ್‌ ಇದ್ದರು.

RELATED ARTICLES
spot_img

Latest News