Homeರಾಷ್ಟ್ರೀಯಪರಂಪರೆ, ಸಂಪ್ರದಾಯ ಅನುಸರಿಸಿ ವಿಶ್ವದ ಸುರಕ್ಷತೆಗೆ ಕೆಲಸ ಮಾಡಿ : ಭಾಗವತ್

ಪರಂಪರೆ, ಸಂಪ್ರದಾಯ ಅನುಸರಿಸಿ ವಿಶ್ವದ ಸುರಕ್ಷತೆಗೆ ಕೆಲಸ ಮಾಡಿ : ಭಾಗವತ್

ಮುಂಬೈ, ಅ. 7- ಸಮಾಜ ಹಾಗೂ ವಿಶ್ವದ ಸುರಕ್ಷತೆ ಮತ್ತು ಕಲ್ಯಾಣಕ್ಕಾಗಿ ಭಾರತದ ಜನರು ತಮ್ಮ ಪರಂಪರೆ ಮತ್ತು ಸಂಪ್ರದಾಯಗಳನ್ನು ಅನುಸರಿಸಿ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದರು.

ವಿಶ್ವ ಹಿಂದೂ ಪರಿಷತ್‌ನ ಮಾಜಿ ಅಧ್ಯಕ್ಷ ಅಶೋಕ್‌ ಸಿಂಘಾಲ್‌ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ನಾಗಪುರ ಜಿಲ್ಲೆಯ ದೇವಲಾಪುರದಲ್ಲಿರುವ ಗೋ-ವಿಜ್ಞಾನ ಅನುಸಂಧಾನ ಕೇಂದ್ರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಎಲ್ಲರೂ ಸಾರ್ಥಕ ಜೀವನ ನಡೆಸುವಂತಾಗಲು ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು. ಸಮಾಜದ ಗಾತ್ರಕ್ಕೆ ಹೋಲಿಸಿದರೆ ಉತ್ತಮ ಕಾರ್ಯಗಳಲ್ಲಿ ತೊಡಗಿರುವವರ ಸಂಖ್ಯೆ ಕಡಿಮೆಯಿದ್ದು, ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಿನ ಜನರು ಪಾಲ್ಗೊಳ್ಳಬೇಕು ಎಂದು ಭಾಗವತ್‌ ಕರೆ ನೀಡಿದರು.

ಒಳ್ಳೆಯ ಕೆಲಸ ಮಾಡಿದವರನ್ನು ಸ್ಮರಿಸಲು ಎರಡು ಮಾರ್ಗಗಳಿವೆ. ಅವರಂತೆ ಉತ್ತಮ ಕಾರ್ಯಗಳನ್ನು ಮಾಡುವುದು ಅಥವಾ ಕೇವಲ ಅವರನ್ನು ನೆನಪಿಸಿಕೊಳ್ಳುವುದು. ಸಮಾಜಕ್ಕಾಗಿ ಏನಾದರೂ ಮಾಡಬೇಕು ಎಂದು ತಿಳಿದಿದ್ದರೂ, ಬೇರೆಯವರು ಮಾಡಲಿ ಎಂದು ಹಲವರು ನಿರೀಕ್ಷಿಸುತ್ತಾರೆ ಎಂದು ಅವರು ಹೇಳಿದರು.

ವೈಯಕ್ತಿಕ ಜೀವನದಲ್ಲಿ ತ್ಯಾಗ ಮತ್ತು ಸಹನೆಯನ್ನು ಪ್ರದರ್ಶಿಸುವವರು ಇತರರಿಗೆ ಕಠಿಣ ಹಾದಿಯಲ್ಲಿ ಸಾಗಲು ಸ್ಫೂರ್ತಿಯಾಗುತ್ತಾರೆ. ಮೊರೋಪಂತ್‌ ಪಿಂಗ್ಳೆ ಮತ್ತು ಅಶೋಕ್‌ ಸಿಂಘಾಲ್‌ ಅವರಂತಹ ನಾಯಕರು ವೈಯಕ್ತಿಕ ಲಾಭಕ್ಕಿಂತ ಸಮಾಜದ ಒಳಿತಿಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಭಾಗವತ್‌ ಸ್ಮರಿಸಿದರು.

RELATED ARTICLES
spot_img

Latest News