ಕಾಗೆ ಒಂದು ಪಕ್ಷಿಯಷ್ಟೇ ಅಲ್ಲ, ಜಗತ್ತಿನ ಜೀವಂತ ಕಂಪ್ಯೂಟರ್ ಆಗಿದೆ. ಅದರ ಮೆದುಳು ಮಾನವರ ಮೆದುಳಿನ ಕಾರ್ಟೆಕ್್ಸ ನಂತೆಯೇ ಕಾರ್ಯ ನಿರ್ವಹಿಸುತ್ತದೆ.ಕಾಗೆ ಮಾನವರನ್ನು ಮತ್ತು ಇತರ ಜೀವಿಗಳನ್ನು ಸ್ಕ್ಯಾನ್ ಮಾಡಿ ವರ್ಷಗಳ ಕಾಲ ನೆನಪಿಟ್ಟುಕೊಳ್ಳಬಲ್ಲದು.
ಕೋಗಿಲೆಗಳ ಮೊಟ್ಟೆಗಳಿಗೆ ಕಾವು ನೀಡಿ ಮರಿ ಮಾಡುವ ಕಾಗೆ ತನಗೆ ಕಾಯಿಲೆ ಬಂದಾಗ ಇತರ ಜೀವಿಗಳ ಸಹಾಯ ಬೇಡುವುದಿಲ್ಲ. ಇರುವೆಗಳ ಗೂಡಿನ ಬಳಿ ಹೋಗಿ ಬೇಕೆಂದೇ ಇರುವೆಗಳನ್ನು ಕೆಣಕುತ್ತದೆ. ಪುಕ್ಕಗಳನ್ನು ತೆರೆದು ಕೂತುಕೊಳ್ಳುತ್ತದೆ. ಇರುವೆಗಳು ಅದನ್ನು ಕಚ್ಚುತ್ತವೆ. ಇರುವೆಗಳು ಫಾರ್ಮಿಕ್ ಆಸಿಡ್ ಎಂಬ ದ್ರವವನ್ನು ಸ್ರವಿಸುವುದರಿಂದ ಕಾಗೆಯ ಅನಾರೋಗ್ಯ ಗುಣವಾಗುತ್ತದೆ.
ಕಾಗೆ ತನ್ನ ಕೊಕ್ಕಿನಿಂದ ಕಬ್ಬಿಣದ ಕಂಬಿಯನ್ನು ತೆಗೆದುಕೊಂಡು ಆಹಾರ ಹೆಕ್ಕಿಕೊಂಡು ತಿನ್ನಬಲ್ಲ ಬುದ್ಧಿವಂತ ಪಕ್ಷಿಯಾಗಿದೆ.ನೀರಿನ ಹೂಜಿಯಲ್ಲಿ ತಳದಲ್ಲಿದ್ದ ನೀರನ್ನು ಚಿಕ್ಕ ಚಿಕ್ಕ ಕಲ್ಲುಗಳನ್ನು ಹೂಜಿಗೆ ಕೊಕ್ಕೊನಿಂದ ಹಾಕಿ ಮೇಲೆ ಬರಿಸಿಕೊಂಡು ಕಾಗೆ ಕುಡಿಯಿತು ಎಂಬ ಕಥೆ ಚಿರಪರಿಚಿತ. ಇದು ಕೇವಲ ಕಥೆಯಲ್ಲ, ವೈಜ್ಞಾನಿಕವಾಗಿ ಪರೀಕ್ಷಿಸಿ ಋಜುವಾತಾಗಿರುವ ಸತ್ಯ.
ಕಾಗೆ ಸಿಂಹದಷ್ಟು ಭಯಂಕರ ಪ್ರಾಣಿಯಲ್ಲ, ಹದ್ದಿನಷ್ಟು ದೊಡ್ಡ ಪಕ್ಷಿಯಲ್ಲ, ಆದರೆ ಅದರ ಕೊಕ್ಕು ಒಂದು ಭಯಾನಕ ಆಯುಧವಾಗಿದೆ.ಇನ್ನು ಕಾಗೆಯ ಸ್ನೇಹಪರತೆ ಸರ್ವವಿದಿತ. ಆಹಾರ ಕಂಡೊಡನೆ ತನ್ನ ಪರಿವಾರವನ್ನೇ ಕರೆದು ಹಂಚಿಕೊಂಡು ತಿನ್ನುವ ಅದರ ಸ್ವಭಾವ ಅನುಸರಣೀಯ.
ದಿನ ಬೆಳಗಾಗುವ ವೇಳೆ ಕಾಗೆ ಕೂಗುವುದನ್ನು ಆಲಿಸುತ್ತಲೇ ಎಲ್ಲರೂ ನಿದ್ದೆಯಿಂದ ಏಳುತ್ತಾರೆ. ಕಾಗೆ ಶನಿ ದೇವರ ವಾಹನವೂ ಆಗಿ ಧಾರ್ಮಿಕ ಕ್ಷೇತ್ರದಲ್ಲಿಯೂ ಪ್ರಸಿದ್ಧವಾಗಿದೆ. ಹೀಗೆ ಕಾಗೆ ಜಗತ್ತಿನ ಅತಿ ಬುದ್ಧಿವಂತ ಪಕ್ಷಿಯಾಗಿದೆ. ಇನ್ನು ಮುಂದೆ ಕಾಗೆ-ಕಾಗೆ ಎಂದು ಹೀಗಳೆಯದಿರಿ, ಕಡೆಗಣಿಸದಿರಿ.
