Homeಮನರಂಜನೆನಟ, ನಿರ್ದೇಶಕ ಎಸ್‌‍.ನಾರಾಯಣ್‌ ಸೇರಿ 6 ಮಂದಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಸೇರ್ಪಡೆ

ನಟ, ನಿರ್ದೇಶಕ ಎಸ್‌‍.ನಾರಾಯಣ್‌ ಸೇರಿ 6 ಮಂದಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಸೇರ್ಪಡೆ

ಬೆಂಗಳೂರು,ಅ.12- ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತರನ್ನು ಆಯ್ಕೆ ಮಾಡಲು ರಚಿಸಲಾಗಿರುವ ಆಯ್ಕೆ ಸಲಹಾ ಸಮಿತಿಗೆ ನಟ, ನಿರ್ದೇಶಕ ನಿರ್ಮಾಪಕ ಎಸ್‌‍.ನಾರಾಯಣ್‌ ಸೇರಿದಂತೆ ಆರು ಮಂದಿ ಸದಸ್ಯರನ್ನು ಸೇರ್ಪಡೆ ಮಾಡಲಾಗಿದೆ.

ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದ್ದು, ಚಲನಚಿತ್ರ ಕ್ಷೇತ್ರದಲ್ಲಿ ಎಸ್‌‍.ನಾರಾಯಣ್‌ ಅವರಲ್ಲದೆ ಮದನ್‌ ಮಲ್ಲು, ನಂಜುಂಡೇ ಗೌಡ ಅವರನ್ನು ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್‌, ಸಮಾಜ ಸೇವಾ ಕ್ಷೇತ್ರದಲ್ಲಿ ನಂಜುಂಡಿ.ಕೆ.ಪಿ ಅವರನ್ನು ಸಲಹಾ ಸಮಿತಿಯ ಸದಸ್ಯರನ್ನಾಗಿ ಸೇರ್ಪಡೆ ಮಾಡಿ ಆದೇಶಿಸಲಾಗಿದೆ.

ಅ.8ರಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಲು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ಹಾಗೂ ವಿವಿಧ ಕ್ಷೇತ್ರಗಳ ಪರಿಣಿತರನ್ನು ಒಳಗೊಂಡ ಆಯ್ಕೆಯ ಸಲಹಾ ಸಮಿತಿ ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.

RELATED ARTICLES
spot_img

Latest News