Homeರಾಷ್ಟ್ರೀಯರಾಹುಲ್‌ ಗಾಂಧಿ ಬೆಂಗಾವಲು ಪಡೆಯ ವಾಹನಗಳು ಆಂಬ್ಯುಲೆನ್ಸ್‌ಗೆ ಡಿಕ್ಕಿ: ಹಲವರಿಗೆ ಗಾಯ

ರಾಹುಲ್‌ ಗಾಂಧಿ ಬೆಂಗಾವಲು ಪಡೆಯ ವಾಹನಗಳು ಆಂಬ್ಯುಲೆನ್ಸ್‌ಗೆ ಡಿಕ್ಕಿ: ಹಲವರಿಗೆ ಗಾಯ

ಲಕ್ನೋ, ಅ.26- ಉತ್ತರ ಪ್ರದೇಶದಲ್ಲಿ ರಾಹುಲ್‌ ಗಾಂಧಿ ಅವರ ಬೆಂಗಾವಲು ಪಡೆಯಲ್ಲಿದ್ದ ಕಾರುಗಳು ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.ಉತ್ತರ ಪ್ರದೇಶದ ಪೂರ್ವಾಂಚಲ್‌ ಎಕ್ಸ್‌ಪ್ರೆಸ್‌ವೇಯಲ್ಲಿ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ಬೆಂಗಾವಲು ಪಡೆಯಲ್ಲಿದ್ದ ಐದು ವಾಹನಗಳು ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.

ರಾಜ್ಯ ರಾಜಧಾನಿ ಲಕ್ನೋದಿಂದ 100 ಕಿ.ಮೀ. ದೂರದಲ್ಲಿರುವ ಹಲಿಯಾಪುರ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಬೆಂಗಾವಲು ಪಡೆಯ ಹಿಂಭಾಗದಲ್ಲಿದ್ದ ಐದು ವಾಹನಗಳು ಅಪಘಾತಕ್ಕೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ರಾಹುಲ್‌ ಗಾಂಧಿ ಸುರಕ್ಷಿತವಾಗಿದ್ದಾರೆ. ಗಾಯಗೊಂಡವರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿ ಸೇರಿದ್ದಾರೆ.

ಅಪಘಾತ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಆಂಬ್ಯುಲೆನ್ಸ್‌ ರಸ್ತೆಯ ಬಲಭಾಗದ ವೇಗದ ಲೇನ್‌ನಲ್ಲಿ ಇರುವುದು ಮತ್ತು ಇತರ ಲೇನ್‌ಗಳಲ್ಲಿ ಹಲವು ವಾಹನಗಳು ಜಮಾಯಿಸಿರುವುದು ಕಂಡುಬಂದಿದೆ. ಡಿಕ್ಕಿಯ ರಭಸಕ್ಕೆ ಮುಂಭಾಗ (ಬಾನೆಟ್‌) ಜಜ್ಜಲ್ಪಟ್ಟಿದ್ದ ಸ್ಕಾರ್ಪಿಯೋ ಎಸ್‌ಯುವಿ ವಾಹನವೊಂದು ಆಂಬ್ಯುಲೆನ್ಸ್‌ನ ಮುಂಭಾಗದಲ್ಲಿ ನಿಂತಿರುವುದು ದೃಶ್ಯಗಳಲ್ಲಿ ಕಾಣಿಸಿದೆ.

RELATED ARTICLES

Latest News