ಬೆಂಗಳೂರು, ನ.3- ಕಳೆದ ವಾರ ಕುಸಿತ ಕಂಡಿದ್ದ ಚಿನ್ನದ ದರದಲ್ಲಿ ಅಲ್ಪ ಚೇತರಿಕೆಯಾಗಿದ್ದರೆ, ಬೆಳ್ಳಿ ದರ ಸ್ಥಿರವಾಗಿದೆ. ನಿನ್ನೆಯಿಂದ ಚಿನ್ನ ಸತತ ಏರುಗತಿಯಲ್ಲಿ ಸಾಗುತ್ತಿದೆ. ಬೆಳ್ಳಿ ಮಾತ್ರ ಕುಸಿತದಿಂದ ಚೇತರಿಕೆ ಕಾಣಲಿಲ್ಲ.
ಚಿನಿವಾರಪೇಟೆಯಲ್ಲಿ ಚಿನ್ನದ ದರ ಪದೇಪದೇ ಏರಿಳಿತಕ್ಕೆ ಒಳಗಾಗುತ್ತಿದೆ. ಕಳೆದ ವಾರ ಒಂದು ಗ್ರಾಂ ಶುದ್ಧ ಚಿನ್ನದ ದರ 500 ರೂ.ಗೂ ಹೆಚ್ಚು ಕಡಿಮೆಯಾಗಿತ್ತು. ಕಳೆದ ಹತ್ತು ದಿನಗಳಿಗೆ ಹೋಲಿಸಿದರೆ ಈಗಲೂ ಒಂದು ಗ್ರಾಂ ಚಿನ್ನದ ದರ ಸುಮಾರು 300 ರೂ.ನಷ್ಟು ಕಡಿಮೆಯಿದೆ. ಕಳೆದ 10 ತಿಂಗಳಲ್ಲೇ ಕನಿಷ್ಠ ದರಕ್ಕೆ ಇಳಿದಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಇಂದು 24 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 27 ರೂ. ಏರಿಕೆಯಾಗಿದ್ದು, 13,964 ರೂ.ನಷ್ಟಿದೆ. 22 ಕ್ಯಾರೆಟ್ ಚಿನ್ನದ ದರ ಒಂದು ಗ್ರಾಂಗೆ 25 ರೂ. ಹೆಚ್ಚಳವಾಗಿದ್ದು, 12,800 ರೂ.ನಷ್ಟಿದೆ. 18 ಕ್ಯಾರೆಟ್ನ ಆಭರಣ ಚಿನ್ನದ ದರ ಒಂದು ಗ್ರಾಂಗೆ 20 ರೂ. ಏರಿಕೆಯಾಗಿದ್ದು, 10,473 ರೂ.ನಷ್ಟಿದೆ.
ಕಳೆದ ಶುಕ್ರವಾರದಿಂದ ಸತತ ಇಳಿಕೆಯಾಗಿದ್ದ ಚಿನ್ನದ ದರ ಭಾನುವಾರ ಸ್ಥಿರವಾಗಿತ್ತು. ನಿನ್ನೆ ಮತ್ತು ಇಂದು ಏರಿಕೆಯಾಗಿದ್ದು, ದೀಪಾವಳಿ ಹಬ್ಬಕ್ಕೆ ಮತ್ತೆ ಚಿನ್ನ ದುಬಾರಿಯಾಗಲಿದೆಯೇ ಎಂಬ ಆತಂಕ ಆಭರಣ ಪ್ರಿಯರನ್ನು ಕಾಡುತ್ತಿದೆ. ಪ್ಲಾಟಿನಂ ಆಭರಣದ ದರದಲ್ಲಿ ಅಲ್ಪ ಚೇತರಿಕೆಯಾಗಿದೆ. 10 ಗ್ರಾಂಗೆ ಕೇವಲ 70 ರೂ. ಏರಿಕೆಯಾಗಿದ್ದು, 43,770 ರೂ.ನಷ್ಟಿದೆ.
ಇನ್ನು ಬೆಳ್ಳಿ ದರ ಮಾತ್ರ ಏರಿಕೆಯಾಗದೆ ಸ್ಥಿರವಾಗಿದೆ. ಕಳೆದ ವಾರ ಮೂರು ದಿನಗಳ ಕಾಲ ಒಟ್ಟು 20 ಸಾವಿರ ರೂ. ಕುಸಿತವಾಗಿ ಒಂದು ಕೆ.ಜಿ. ಬೆಳ್ಳಿ ದರ 2 ಲಕ್ಷ ರೂ.ಗೆ ಇಳಿದಿತ್ತು. ಕಳೆದ ಹತ್ತು ದಿನಗಳಲ್ಲಿ ಏರಿಕೆ ಕಾಣದ ಬೆಳ್ಳಿ ದರ ಕಳೆದ ಮೂರು ದಿನಗಳಿಂದಲೂ ಸ್ಥಿರವಾಗಿದೆ.
