Homeರಾಜಕೀಯಸ್ಟಿಂಗ್‌ ಆಪರೇಷನ್ ತನಿಖೆ ದಾರಿ ತಪ್ಪುತ್ತಿದೆ : ಎಚ್‌ಡಿಕೆ

ಸ್ಟಿಂಗ್‌ ಆಪರೇಷನ್ ತನಿಖೆ ದಾರಿ ತಪ್ಪುತ್ತಿದೆ : ಎಚ್‌ಡಿಕೆ

ಬೆಂಗಳೂರು,ನ.3- ಸ್ಟಿಂಗ್‌ ಆಪರೇಷನ್‌ ಮಾಡಿದವರ ಪತ್ತೆಗೆ ತನಿಖೆ ನಡೆಸದೆ ದಾರಿತಪ್ಪಿಸಲಾಗತ್ತಿದೆ ಎಂದು ಆರೋಪಿಸಿದ ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿಯವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಗಿಸುವ ಹೊಸ ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.

ತಿಪಟೂರಿನ ಶಾಂತಕುಮಾರ್‌ ನೇತೃತ್ವದಲ್ಲಿ ಹಲವು ಮುಖಂಡರನ್ನು ಜೆಡಿಎಸ್‌‍ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಟಿಂಗ್‌ ಆಪರೇಷನ್‌ ವಿಚಾರದಲ್ಲಿ ಸಿದ್ದರಾಮಯ್ಯ ಅವರು ಹೇಳಿರುವುದು ಸರಿ ಇದೆ. ಸಿದ್ದರಾಮಯ್ಯ ಅವರ ಬಗ್ಗೆ ನಾನು ಅನುಕಂಪ ವ್ಯಕ್ತಪಡಿಸಿಲ್ಲ. ಅವರ ವಿರುದ್ಧ ಹೋರಾಟ ಮಾಡುತ್ತಾ ಬಂದಿರುವೆ ಎಂದರು.

ಸ್ಟಿಂಗ್‌ ಆಪರೇಷನ್‌ ಮಾಡಿ ಬ್ಲಾಕ್‌ಮೇಲ್‌ ಮಾಡುವಂತಹ ವಿಚಾರಕ್ಕೆ ಕ್ರಮ ಕೈಗೊಂಡು ಅಂತ್ಯ ಹಾಡಬೇಕು. ರಾಜ್ಯದ ಗೌರವ ಉಳಿಸಬೇಕು ಎಂದರು. ಸ್ಟಿಂಗ್‌ ಆಪರೇಷನ್‌ ಆರೋಪದ ತನಿಖೆ ದಾರಿ ತಪ್ಪುತ್ತಿದ್ದು, ಸರಿಪಡಿಸಿಕೊಳ್ಳಬೇಕು ಎಂದು ಹೇಳಿದ್ದೇನೆ. ತನಿಖೆ ಯಾವ ರೀತಿ ನಡೆಯುತ್ತಿದೆ ಎಂದರೆ ಕೊಲೆ ಮಾಡಿದವರ ಬಗ್ಗೆಯೂ ಇಲ್ಲ, ಅದನ್ನು ಚಿತ್ರೀಕರಿಸಿದ ಬಗ್ಗೆಯೂ ಇಲ್ಲ, ಕೊಲೆಯಾಗುತ್ತಿದೆ ನೋಡಿ ಎಂದವರ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ ಎಂದು ಟೀಕಿಸಿದರು.

ಸಂತ್ರಸ್ತೆ ಕಳುಹಿಸಿದ್ದ ಇಮೇಲ್‌ ಎಲ್ಲಿಗೆ ಹೋಯಿತು. ಎಲ್ಲಿ ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಗೃಹ ಇಲಾಖೆ ವ್ಯಾಪ್ತಿಗೆ ಆ ವಿಚಾರ ಬರುವುದಿಲ್ಲ ಎಂಬ ಪ್ರಿಯಾಂಕ ಖರ್ಗೆ ಅವರ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಅದು ಏಕೆ ಇವರ ವ್ಯಾಪ್ತಿಗೆ ಬರುವುದಿಲ್ಲ, ಇದು ಏಕೆ ಅವರ ತನಿಖೆಗೆ ಬರುತ್ತದೆ? ತನಿಖೆ ನಡೆಸಲು ಗೃಹ ಇಲಾಖೆ ನನ್ನ ಬಳಿ ಇದೆಯೇ? ನಾಡಿನ ಜನ ಅಧಿಕಾರ ಕೊಟ್ಟಿರುವುದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು. ಎಲ್ಲದಕ್ಕೂ ನಮನ್ನು ದಾಖಲೆ ಕೇಳಿದರೆ ಇವರೇಕೆ ಇರಬೇಕು? ಹಾಗದರೆ ಇವರು ಗೃಹಸಚಿವರಾಗಲು ಅರ್ಹರಲ್ಲ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್‌‍ ಶಾಸಕಾಂಗ ಪಕ್ಷದ ನಾಯಕ ಸುರೇಶ್‌ ಬಾಬು, ಮಾಜಿ ಶಾಸಕರಾದ ಡಾ.ಅನ್ನದಾನಿ, ಎ.ಮಂಜುನಾಥ್‌, ನಿಂಗಪ್ಪ, ತಿಮರಾಯಪ್ಪ, ಸುರೇಶ್‌ ಗೌಡ, ತಿಪ್ಪೇಸ್ವಾಮಿ, ರಮೇಶ್‌ ಗೌಡ, ಸಂಸದ ಮಲ್ಲೇಶ್‌ ಬಾಬು ಉಪಸ್ಥಿತರಿದ್ದರು.

RELATED ARTICLES

Latest News