Homeಮನರಂಜನೆವಿಚಾರಣೆಗೆ ಗೈರಾದ ನಟ ಧನ್ವೀರ್‌ಗೆ ಕಾನೂನು ಸಂಕಷ್ಟ

ವಿಚಾರಣೆಗೆ ಗೈರಾದ ನಟ ಧನ್ವೀರ್‌ಗೆ ಕಾನೂನು ಸಂಕಷ್ಟ

ಬೆಂಗಳೂರು,ನ.3-ವಿಚಾರಣೆಗೆ ಹಾಜರಾಗುವಂತೆ ನಟ ಧನ್ವೀರ್‌ಗೆ ಪೊಲೀಸರು ನೋಟೀಸ್‌‍ ನೀಡಿದರೂ ಸಹ ಗೈರು ಹಾಜರಾಗಿದ್ದು, ಅವರ ವಿರುದ್ಧ ಕಾನೂನು ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಧನ್ವೀರ್‌ ಅವರು ಪೊಲೀಸರ ಮೊದಲ ನೋಟೀಸ್‌‍ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹಾಗೂ ವಿಚಾರಣೆಗೆ ಹಾಜರಾಗಿಲ್ಲ. ಹಾಗಾಗಿ ಪೊಲೀಸರು ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಧನ್ವೀರ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದನೆ, ಜೀವ ಬೆದರಿಕೆ ಹಾಗೂ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಗರದ ಚಾಮರಾಜಪೇಟೆ, ಆರ್‌ಆರ್‌ನಗರ ಮತ್ತು ಬಸವೇಶ್ವರ ನಗರ ಪೊಲೀಸ್‌‍ ಠಾಣೆಗಳಲ್ಲಿ ಮೂರು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.
ಈ ಠಾಣೆಗಳಲ್ಲಿ ಮೊದಲು ಎನ್‌ಸಿಆರ್‌ ದಾಖಲಾಗಿತ್ತು. ನಂತರ ನ್ಯಾಯಾಲಯದ ಸೂಚನೆ ಮೇರೆಗೆ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾಯ ಠಾಣಾ ಪೊಲೀಸರು ಧನ್ವೀರ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್‌‍ ನೀಡಿದ್ದರೂ ಇದುವರೆಗೂ ಗೈರು ಹಾಜರಾಗಿದ್ದಾರೆ.ಹಾಗಾಗಿ ಆತನಿಗೆ ಎರಡನೇ ನೋಟೀಸ್‌‍ ನೀಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಮೂರನೇ ನೋಟೀಸ್‌‍ಗೂ ಬಾರದಿದ್ದರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಹಿರಿಯ ಪೊಲೀಸ್‌‍ ಅಧಿಕಾರಿ ಈ ಸಂಜೆಗೆ ತಿಳಿಸಿದ್ದಾರೆ.

ಬ್ಯಾಟರಾಯನಪುರ ಪೊಲೀಸ್‌‍ ಠಾಣೆಯಲ್ಲಿ ಧನ್ವೀರ್‌ ವಿರುದ್ಧ ಎನ್‌ಸಿಆರ್‌ ಸಹ ದಾಖಲಾಗಿದೆ.
ಸಚಿವ ಜಮೀರ್‌ ಅಹಮದ್‌ ಅವರ ಪುತ್ರ, ನಟ ಝೈದ್‌ ಖಾನ್‌ ವಿರುದ್ಧ ಧನ್ವೀರ್‌ ಅವಹೇಳನಕಾರಿ ಶಬ್ದ ಬಳಸಿ ನಿಂದಿಸಿರುವ ಆರೋಪದ ಹಿನ್ನಲೆಯಲ್ಲಿ ಚಾಮರಾಜಪೇಟೆ ಪೊಲೀಸ್‌‍ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಆರ್‌ಆರ್‌ನಗರ ಮತ್ತು ಬಸವೇಶ್ವರ ನಗರ ಪೊಲೀಸ್‌‍ ಠಾಣೆಯಲ್ಲಿ ಜೀವ ಬೆದರಿಕೆ, ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪದಡಿಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿದ್ದು, ನೋಟೀಸ್‌‍ಗಳನ್ನು ಜಾರಿಗೊಳಿಸಲಾಗಿದೆ.

RELATED ARTICLES

Latest News