Homeರಾಷ್ಟ್ರೀಯನಕಲಿ ದಾಖಲೆಗಳ ಮೂಲಕ ಭಾರತೀಯರಿಗೆ ದಕ್ಷಿಣ ಆಫ್ರಿಕಾ ಉದ್ಯೋಗ ವೀಸಾ ನೀಡಿದ ಆರೋಪ ; ಹೈಕಮಿಷನ್‌...

ನಕಲಿ ದಾಖಲೆಗಳ ಮೂಲಕ ಭಾರತೀಯರಿಗೆ ದಕ್ಷಿಣ ಆಫ್ರಿಕಾ ಉದ್ಯೋಗ ವೀಸಾ ನೀಡಿದ ಆರೋಪ ; ಹೈಕಮಿಷನ್‌ ಅಮಾನತು

ನವದೆಹಲಿ, ನ.3- ನಕಲಿ ದಾಖಲೆಗಳನ್ನು ಸಲ್ಲಿಸಿ ಭಾರತೀಯರಿಗೆ ದಕ್ಷಿಣ ಆಫ್ರಿಕಾದಲ್ಲಿ ನಾಲ್ಕು ವರ್ಷಗಳ ಉದ್ಯೋಗ ವೀಸಾ ಕೊಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ದಕ್ಷಿಣ ಆಫ್ರಿಕಾದ ನವದೆಹಲಿಯ ಹೈಕಮಿಷನ್‌ನ ಗೃಹ ವ್ಯವಹಾರ ಮತ್ತು ವಲಸೆ ವಿಭಾಗದ ಪ್ರಥಮ ಕಾರ್ಯದರ್ಶಿ ಸ್ಫಿಸೊ ಗುಂಬಿ ಅವರನ್ನು ಅಮಾನತುಗೊಳಿಸಲಾಗಿದೆ.

ಸ್ಥಳೀಯ ದಕ್ಷಿಣ ಆಫ್ರಿಕಾ ಕಂಪನಿಗಳಲ್ಲಿ ಉದ್ಯೋಗ ದೊರೆತಿದೆ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಹತ್ತಾರು ಭಾರತೀಯರು ನಾಲ್ಕು ವರ್ಷಗಳ ಉದ್ಯೋಗ ವೀಸಾ ಪಡೆದಿದ್ದಾರೆ ಎನ್ನಲಾಗಿದೆ. ಈ ಪ್ರಕರಣದ ತನಿಖಾಧಿಕಾರಿಗಳು ದಕ್ಷಿಣ ಆಫ್ರಿಕಾದ ಗೌಟೆಂಗ್‌ ಪ್ರಾಂತ್ಯದಲ್ಲಿರುವ ಉದ್ಯೋಗದಾತ ಕಂಪನಿಗಳ ವಿಳಾಸಗಳನ್ನು ಪರಿಶೀಲಿಸಿದಾಗ, ಕನಿಷ್ಠ 50 ಕಂಪನಿಗಳು ಕೇವಲ ಕಾಗದದ ಮೇಲಷ್ಟೇ ಅಸ್ತಿತ್ವದಲ್ಲಿರುವುದು ಪತ್ತೆಯಾಗಿದೆ.

ಈ ವೀಸಾ ವಂಚನೆ ಜಾಲದಲ್ಲಿ ಭಾರತದ ಹೈದರಾಬಾದ್‌ನ ವಲಸೆ ಸಲಹಾ ಸಂಸ್ಥೆಯೊಂದು ಭಾಗಿಯಾಗಿರುವ ಶಂಕೆಯಿದೆ. ದಕ್ಷಿಣ ಆಫ್ರಿಕಾದ ಮಿಡ್‌ರ್ಯಾಂಡ್‌ನಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಇಗ್ನೇಷಿಯಸ್‌ ಪಸಾಲಾ ಕೂಡ ಈ ಜಾಲದ ಸಂಪರ್ಕದಲ್ಲಿದ್ದ ಎನ್ನಲಾಗಿದೆ.

RELATED ARTICLES

Latest News