Homeರಾಷ್ಟ್ರೀಯರಷ್ಯಾ ವಿದೇಶಾಂಗ ಸಚಿವರ AI ವಿಡಿಯೋ ಪ್ರಕರಣ : ಪ್ರಶಾಂತ್‌ ಭೂಷಣ್‌ ವಿರುದ್ಧ ಎಫ್‌ಐಆರ್‌

ರಷ್ಯಾ ವಿದೇಶಾಂಗ ಸಚಿವರ AI ವಿಡಿಯೋ ಪ್ರಕರಣ : ಪ್ರಶಾಂತ್‌ ಭೂಷಣ್‌ ವಿರುದ್ಧ ಎಫ್‌ಐಆರ್‌

ನವದೆಹಲಿ, ನ. 4 (ಪಿಟಿಐ): ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್‌ ಅವರ ವಿಡಿಯೋವೊಂದನ್ನು ಡಿಜಿಟಲ್‌ ತಂತ್ರಜ್ಞಾನದ ಮೂಲಕ ತಿರುಚಿ, ಅದರಲ್ಲಿ ಭಾರತದ ವಿರುದ್ಧ ಪ್ರತಿಕೂಲ ಹೇಳಿಕೆಗಳಿವೆ ಎಂಬಂತೆ ಬಿಂಬಿಸಿ ಹಂಚಿಕೊಂಡ ಆರೋಪದ ಮೇಲೆ, ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಪೊಲೀಸರು ನಡೆಸಿದ ಸೈಬರ್‌ ಗಸ್ತು ವೇಳೆ, ಅಟ್‌ ದಿ ಕ್ವಾಯ್‌್ಟ ನ್ಯೂಸ್‌‍ ಎಂಬ ಸಾಮಾಜಿಕ ಜಾಲತಾಣ ಖಾತೆಯೊಂದು ಪೋಸ್ಟ್‌ ಅನ್ನು ಗಮನಿಸಿದರು. ಅದರಲ್ಲಿ, ರಷ್ಯಾದ ವಿದೇಶಾಂಗ ಸಚಿವರ ತಿರುಚಲಾದ ವಿಡಿಯೋವೊಂದನ್ನು ಪ್ರಶಾಂತ್‌ ಭೂಷಣ್‌ ಅವರ ಎಕ್‌ ಖಾತೆಯಿಂದ ಹಂಚಿಕೊಳ್ಳಲಾಗಿದೆ ಎಂದು ಉಲ್ಲೇಖಿಸಲಾಗಿತ್ತು.

ಈ ವಿಡಿಯೋದಲ್ಲಿ ದಾರಿತಪ್ಪಿಸುವ ಮತ್ತು ಪ್ರಚೋದನಕಾರಿ ವಿಷಯಗಳಿದ್ದು, ಇವು ವದಂತಿಗಳನ್ನು ಹರಡಲು, ವ್ಯಕ್ತಿಗಳ ಮಾನಹಾನಿ ಮಾಡಲು ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವ ಸಾಧ್ಯತೆಯಿದೆ ಎಂದು ಪೊಲೀಸರು ಹೇಳಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಸೆಕ್ಷನ್‌ 336(4) (ನಕಲಿ ದಾಖಲೆ ಸೃಷ್ಟಿಸುವುದು), 353(1) (ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳು), 356 (ಮಾನಹಾನಿ) ಮತ್ತು 340(2) (ನಕಲಿ ದಾಖಲೆಯನ್ನು ಅಸಲಿ ಎಂದು ಬಳಸುವುದು) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ( ) ಸೆಕ್ಷನ್‌ 66ಸಿ (ಗುರುತಿನ ಕಳ್ಳತನ/ ) ಅಡಿಯಲ್ಲಿ ಸ್ಪೆಷಲ್‌ ಸೆಲ್‌‍ೞಪೊಲೀಸ್‌‍ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ರಷ್ಯಾದ ವಿದೇಶಾಂಗ ಸಚಿವರಿಗೆ ಸಂಬಂಧಿಸಿದ್ದೆಂದು ತಪ್ಪಾಗಿ ಬಿಂಬಿಸಲಾದ ಈ ಡಿಜಿಟಲ್‌ ತಿರುಚಿದ ವಿಡಿಯೋವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಪರಿಶೀಲಿಸಿ, ಅದು ಸುಳ್ಳು ಎಂದು ದೃಢಪಡಿಸಿದ ನಂತರ ಈ ಬೆಳವಣಿಗೆ ನಡೆದಿದೆ.

ಈ ಕೃತಕ ವಿಡಿಯೋ ತುಣುಕಿನಲ್ಲಿ, ರಷ್ಯಾದ ವಿದೇಶಾಂಗ ಸಚಿವರು ಭಾರತದ ಆಂತರಿಕ ವ್ಯವಹಾರಗಳು ಮತ್ತು ತೈಲ ಖರೀದಿಯ ಕುರಿತು ಭಾರತವನ್ನು ಟೀಕಿಸುವಂತೆ ಬಿಂಬಿಸಲಾಗಿದೆ.
ಪೊಲೀಸರು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದು, ವಿಡಿಯೋದಲ್ಲಿರುವ ವಿಷಯ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅದು ಹರಡಿದ ರೀತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES

Latest News