Friday, November 22, 2024
Homeಅಂತಾರಾಷ್ಟ್ರೀಯ | Internationalನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ಶತ್ರುಗಳಿಗೆ ತಕ್ಕಪಾಠ ಕಲಿಸಲು ನಾವು ಸಿದ್ದ : ನೆತನ್ಯಾಹು

ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ಶತ್ರುಗಳಿಗೆ ತಕ್ಕಪಾಠ ಕಲಿಸಲು ನಾವು ಸಿದ್ದ : ನೆತನ್ಯಾಹು

ನವದೆಹಲಿ,ಏ.14- ಇರಾನ್ ದಾಳಿ ತಡೆಯಲು ಇಸ್ರೇಲ್ ಸಿದ್ದವಾಗಿದೆ ಅವರಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಗುಡುಗಿದ್ದಾರೆ. ಸಿರಿಯಾದ ರಾಜಧಾನಿ ಡಮಾಸ್ಕಸ್‍ನಲ್ಲಿರುವ ಇರಾನ್‍ನ ರಾಯಭಾರ ಕಚೇರಿಯ ಮೇಲೆ ನಡೆದ ಬಾಂಬ್ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ತಡರಾತ್ರಿ ಇಸ್ರೇಲ್ ಪ್ರದೇಶವನ್ನು ನೇರವಾಗಿ ಗುರಿಯಾಗಿಸಿಕೊಂಡು ಸ್ಪೋಟಕ ಡ್ರೋನ್‍ಗಳು ಮತ್ತು ಕ್ಷಿಪಣಿಗಳ ದಾಳಿ ನಡೆಸಿರುವುದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇರಾನ್ ನಮ್ಮ ಮೇಲೆ ದಾಳಿ ನಡೆಸಬಹುದು ಎಂಬ ನಿರೀಕ್ಷೆಯಿತ್ತು. ಹೀಗಾಗಿ ನಾವು ನಮ್ಮ ರಕ್ಷಣಾತ್ಮಕ ವ್ಯವಸ್ಥೆಗಳನ್ನು ನಿಯೋಜಿಸಿಕೊಂಡಿದ್ದೇವೆ. ನಾವು ರಕ್ಷಣಾತ್ಮಕವಾಗಿ ಮತ್ತು ಆಕ್ರಮಣಕಾರಿಯಾಗಿ ಯಾವುದೇ ಸನ್ನಿವೇಶಕ್ಕೆ ಸಿದ್ಧರಿದ್ದೇವೆ ಅವರು ಎಚ್ಚರಿಸಿದ್ದಾರೆ.

ಇರಾನ್‍ನ ನೇರ ದಾಳಿಯ ಜೊತೆಗೆ, ಅದರ ಮಿತ್ರರಾಷ್ಟ್ರಗಳ ಪಡೆಗಳು ಇಸ್ರೇಲಿ ಸ್ಥಾನಗಳ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದವು ಹೀಗಾಗಿ ಹಲವಾರು ಪ್ರದೇಶಗಳಲ್ಲಿ ಸೈರನ್‍ಗಳು ಮೊಳಗಿದವು ಮತ್ತು ಇಂದು ಮುಂಜಾನೆ ಜೆರುಸಲೆಮ್‍ನಲ್ಲಿ ಸ್ಪೋಟದ ಸದ್ದು ಕೇಳಿದೆ.

ಡಮಾಸ್ಕಸ್‍ನಲ್ಲಿರುವ ತನ್ನ ದೂತಾವಾಸದ ಮೇಲೆ ಎಪ್ರಿಲ್ 1 ರಂದು ನಡೆದ ವೈಮಾನಿಕ ದಾಳಿಯ ನಂತರ ಇರಾನ್ ಈ ಹಿಂದೆ ಇಸ್ರೇಲ್ ವಿರುದ್ಧ ಪ್ರತೀಕಾರದ ಬೆದರಿಕೆಗಳನ್ನು ನೀಡಿತ್ತು, ಅಲ್ಲಿ ಇಬ್ಬರು ಜನರಲ್‍ಗಳು ಸೇರಿದಂತೆ ಏಳು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್ ಸಿಬ್ಬಂದಿ ಕೊಲ್ಲಲ್ಪಟ್ಟಿದ್ದರು. ಯುನೈಟೆಡ್ ಸ್ಟೇಟ್ಸ ಸನ್ನಿಹಿತ ಪ್ರತೀಕಾರದ ಬಗ್ಗೆ ಪದೇ ಪದೇ ಎಚ್ಚರಿಕೆ ನೀಡಿತ್ತು.

ನಾವು ಇಸ್ರೇಲ್ ಜೊತೆಗೆ ನಿಂತಿರುವ ಯುಎಸ್ ಅನ್ನು ಶ್ಲಾಸುತ್ತೇವೆ, ಹಾಗೆಯೇ ಬ್ರಿಟನ್, ಫ್ರಾನ್ಸ್ ಮತ್ತು ಇತರ ಹಲವು ದೇಶಗಳ ಬೆಂಬಲವನ್ನು ನಾವು ಪ್ರಶಂಸಿಸುತ್ತೇವೆ. ನಾವು ಸ್ಪಷ್ಟವಾದ ತತ್ವವನ್ನು ನಿರ್ಧರಿಸಿದ್ದೇವೆ: ನಮಗೆ ಯಾರು ಹಾನಿ ಮಾಡುತ್ತಾರೆ, ನಾವು ಅವರಿಗೆ ಹಾನಿ ಮಾಡುತ್ತೇವೆ.

ಯಾವುದೇ ಬೆದರಿಕೆಯ ವಿರುದ್ಧ ನಾವು ನಮ್ಮನ್ನು ರಕ್ಷಿಸಿಕೊಳ್ಳುತ್ತೇವೆ ಮತ್ತು ಹಾಗೆ ಮಾಡುತ್ತೇವೆ ಎಂದು ನೆತನ್ಯಾಹು ಎಚ್ಚರಿಸಿದ್ದಾರೆ. ಈ ಮಧ್ಯೆಇಸ್ರೇಲ್‍ನ ಬೇಹುಗಾರಿಕಾ ಸಂಸ್ಥೆ ಮೊಸಾಯಿದ್ ಇಂದು ಗಾಜಾದಲ್ಲಿನ ಯುದ್ಧದಲ್ಲಿ ಕದನ ವಿರಾಮಕ್ಕೆ ಅಂತರಾಷ್ಟ್ರೀಯ ಮಧ್ಯವರ್ತಿಗಳ ಇತ್ತೀಚಿನ ಪ್ರಸ್ತಾವನೆಯನ್ನು ಪ್ಯಾಲೆಸ್ತೀನ್ ಉಗ್ರಗಾಮಿ ಗುಂಪು ಹಮಾಸ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.

RELATED ARTICLES

Latest News