Homeರಾಜ್ಯದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಕುಸಿದ ಚಿನ್ನ-ಬೆಳ್ಳಿ ದರಗಳು

ದೀಪಾವಳಿ ಹಬ್ಬ ಮುಗಿದ ಬೆನ್ನಲ್ಲೇ ಕುಸಿದ ಚಿನ್ನ-ಬೆಳ್ಳಿ ದರಗಳು

ಬೆಂಗಳೂರು, ನ.11-ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಚಿನ್ನ-ಬೆಳ್ಳಿ ದರಗಳು ಕುಸಿತದ ಹಾದಿ ಹಿಡಿದಿವೆ. ಈ ಹಬ್ಬಕ್ಕೂ ಮುನ್ನ ಏರಿಕೆಯಾಗಿ ಆಭರಣ ಪ್ರಿಯರಿಗೆ ನಿರಾಸೆಯುಂಟು ಮಾಡಿದ್ದವು. ಆದರೆ ನಿನ್ನೆಯಿಂದ ಚಿನ್ನ-ಬೆಳ್ಳಿ ದರಗಳು ಇಳಿಮುಖವಾಗಿವೆ.

ನಿನ್ನೆಯಿಂದೀಚೆಗೆ ಶುದ್ಧ ಚಿನ್ನದ ದರಲ್ಲಿ ಒಂದು ಗ್ರಾಂಗೆ 262 ರೂ. ಕಡಿಮೆಯಾಗಿದೆ. ಬೆಳ್ಳಿ ಒಂದು ಕೆ.ಜಿ.ಗೆ 5 ಸಾವಿರ ರೂ. ಇಳಿಕೆಯಾಗಿದೆ. ದುಬಾರಿಯಾಗಿದ್ದ ಚಿನ್ನ-ಬೆಳ್ಳಿ ದರಗಳು ಇತ್ತೀಚೆಗೆ ಇಳಿಮುಖವಾಗಿರುವುದು ಗ್ರಾಹಕರಲ್ಲಿ ತುಸು ಸಮಾಧಾನ ತಂದಿದೆ.

ಸದ್ಯಕ್ಕೆ ಮತ್ತೆ ದುಬಾರಿ ದರದತ್ತ ದಾಪುಗಾಲು ಹಾಕುವ ಸಾಧ್ಯತೆ ವಿರಳ. ಏರಿಳಿತವಾಗುತ್ತಾ ಇದೇ ದರ ಮುಂದುವರೆಯಬಹುದು. ಇಲ್ಲವೇ ಇನ್ನಷ್ಟು ಇಳಿಕೆಯಾಗಬಹುದು. ಎಲ್ಲದಕ್ಕೂ ಜಾಗತಿಕವಾಗಿ ನಡೆಯುವ ವಿದ್ಯಮಾನಗಳ ಮೇಲೆ ಚಿನಿವಾರಪೇಟೆ ಅವಲಂಬಿತವಾಗಿದೆ ಎಂಬುದು ವರ್ತಕರ ಅಭಿಪ್ರಾಯ.

ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ ಕಳೆದ ಒಂದು ವಾರದಲ್ಲಿ ಚಿನ್ನ ಇಂದು ಕನಿಷ್ಠ ದರಕ್ಕೆ ಕುಸಿದಿದೆ. 24 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ನಿನ್ನೆ 191ರೂ. ಮತ್ತು ಇಂದು 71 ರೂ. ಕಡಿಮೆಯಾಗಿದ್ದು, ಪ್ರಸ್ತುತ 14, 198 ರೂ. ನಷ್ಟಿದೆ. 22 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ ಇಂದು 65 ರೂ. ಕಡಿಮೆಯಾಗಿದ್ದು, 13,015 ರೂ. ನಷ್ಟಿದೆ. 18 ಕ್ಯಾರೆಟ್‌ನ ಚಿನ್ನವು ಒಂದು ಗ್ರಾಂಗೆ 53 ರೂ. ಕಡಿಮೆಯಾಗಿ 10,649 ರೂ. ನಷ್ಟಿದೆ.

ನಿನ್ನೆ ವರೆಗೆ ಏರುಗತಿಯಲ್ಲಿದ್ದ ಪ್ಲಾಟಿನಮ್‌ ಆಭರಣವು ಇಂದು ಸ್ಥಿರವಾಗಿದ್ದು, 10 ಗ್ರಾಂಗೆ 47,240 ರೂ.ನಷ್ಟಿದೆ. ಇನ್ನು ಬೆಳ್ಳಿ ದರವು ಒಂದು ಕೆ.ಜಿ.ಗೆ ಇಂದು 5 ಸಾವಿರ ರೂ. ಕುಸಿತವಾಗಿದ್ದು, 2 ಲಕ್ಷ ರೂ. ನಷ್ಟಿದೆ. ನ.5ರಂದು 10 ಸಾವಿರ ರೂ. ಏರಿಕೆಯಾಗಿದ್ದ ಬೆಳ್ಳಿ ದರವು ನ.6 ರಂದು 5 ಸಾವಿರ ರೂ. ಕುಸಿತವಾಗಿ 2.5ಲಕ್ಷ ರೂ. ನಷ್ಟಿತ್ತು. ಅದೇ ದರ ನಿನ್ನೆಯವರೆಗೂ ಮುಂದುವರೆದಿತ್ತು.

RELATED ARTICLES

Latest News