ಬೆಂಗಳೂರು, ನ. 17- ಭಾರತ ತಂಡದ ಮಾಜಿ ನಾಯಕ ಮಹೇಂದ್ರಸಿಂಗ್ ಧೋನಿ ಅವರು ಕ್ರಿಕೆಟ್ ಜೀವನಕ್ಕೆ ಸಂಪೂರ್ಣ ವಿದಾಯ ಹೇಳಿದ್ದಾರೆ. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಎಂ.ಎಸ್.ಧೋನಿ ಅವರು, ವಿಶ್ವದ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಹಳದಿ ಜೆರ್ಸಿಯಲ್ಲಿ ನನ್ನ ಪಯಣ ಮುಗಿಸಿದ್ದೇನೆ ಎಂದು ಭಾವುಕರಾಗಿ ಹೇಳಿದ್ದಾರೆ.
ಐಪಿಎಲ್ ಟೂರ್ನಿಯ ಆರಂಭಿಕ ಆವೃತ್ತಿಯಿಂದಲೂ ಚೆನ್ನೈ ಸೂಪರ್ ಕಿಂಗ್ಸ್ ನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಧೋನಿಗೆ ಈ ತಂಡದ ಸಂಪೂರ್ಣ ನಾಡಿಮಿಡಿತ ಅರಿವಿರುವುದರಿಂದ ಮುಂದಿನ ಆವೃತ್ತಿಯಲ್ಲಿ ಆ ಸಿಎಸ್‌ಕೆ ತಂಡದ ಮೆಂಟರ್ ಪಾತ್ರವನ್ನು ಫ್ರಾಂಚೈಸಿ ವಹಿಸಿದೆ.
ಸಿಎಸ್‌ಕೆ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಮೆಂಟರ್ ಸ್ಟೀಫನ್ ಫ್ಲೆಮಿಂಗ್ ಅವರ ಹೊಣೆಯು ಈಗ ಚಾಂಪಿಯನ್ ನಾಯಕ ಧೋನಿ ಹೆಗಲೇರಿದೆ.ಕಳೆದ ಕೆಲವು ಆವೃತ್ತಿಗಳಿಂದ ಕಳಪೆ ಪ್ರದರ್ಶನ ತೋರುತ್ತಿರುವ ಮುಂದಿನ ಆವೃತ್ತಿಯಲ್ಲಿ ಮತ್ತೊಮೆ ಚಾಂಪಿಯನ್ ಪಟ್ಟ ದಕ್ಕಿಸಿಕೊಳ್ಳಬೇಕೆಂಬ ಹೆಬ್ಬಯಕೆಯಿಂದ ಹಲವು ಬದಲಾವಣೆ ಮಾಡಿಕೊಂಡಿದ್ದು ಮಾಜಿ ವೇಗಿ ಜಹೀರ್‌ಖಾನ್‌ರನ್ನು ಮುಖ್ಯ ತರಬೇತುದಾರನಾಗಿ ಆಯ್ಕೆ ಮಾಡಿಕೊಂಡಿದೆ.
ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 2010,2011, 2018, 2021 ಹಾಗೂ 2023ರಲ್ಲಿ ಐಪಿಎಲ್ ಚಾಂಪಿಯನ್ ಆಗಿಸಿದ್ದು 10 ಬಾರಿ ತಂಡವನ್ನು ತಮ ನಾಯಕತ್ವದಲ್ಲಿ ಫೈನಲ್‌ಗೆ ಕೊಂಡೊಯ್ದಿದ್ದರು. ಐಪಿಎಲ್ ಟೂರ್ನಿಯಲ್ಲಿ ಮಹಿ, 278 ಪಂದ್ಯಗಳಿಂದ 5439 ರನ್ ಗಳಿಸಿದ್ದು, ಎರಡನೇ ಸ್ಕೋರರ್ ಆಗಿದ್ದು, 24 ಅರ್ಧಶತಕ, 264 ಬೌಂಡರಿ ಹಾಗೂ 375 ಸಿಕ್ಸರ್ ಬಾರಿಸಿದ್ದಾರೆ.
