ಮಾಸ್ಕೋ, ನ.18 – ರಷ್ಯಾದ ಮಿಲಿಟರಿ ಸಾರಿಗೆ ವಿಮಾನವೊಂದು ಪಶ್ಚಿಮ ಸೈಬೀರಿಯಾದಲ್ಲಿ ಪತನಗೊಂಡಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 19 ಮಂದಿ ಸಾವನ್ನಪ್ಪಿದ್ದಾರೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪ್ರಾಥಮಿಕ ತನಿಖೆಯು ತಾಂತ್ರಿಕ ದೋಷವನ್ನು (ಉಪಕರಣಗಳ ವೈಫಲ್ಯ) ಸೂಚಿಸಿದೆ. ಮಾಸ್ಕೋದಿಂದ ಪೂರ್ವಕ್ಕೆ ಸುಮಾರು 3,000 ಕಿಲೋಮೀಟರ್ (ಸುಮಾರು 1,860 ಮೈಲಿ) ದೂರದಲ್ಲಿರುವ ಕೆಮೆರೋವೊ ಪ್ರದೇಶದ ಯಗುನೋವೊ ಗ್ರಾಮದ ಬಳಿ, ಜನವಸತಿ ಯಿಲ್ಲದ ಪ್ರದೇಶದಲ್ಲಿ ಎಎನ್-12 ವಿಮಾನವು ಪತನಗೊಂಡಿದೆ.
ವಿಮಾನದಲ್ಲಿದ್ದ ಸಿಬ್ಬಂದಿ ಸೇರಿದಂತೆ ಒಟ್ಟು 19 ಮಂದಿಯೂ ಮೃತಪಟ್ಟಿದ್ದಾರೆ ಎಂದು ಸಚಿವಾಲಯ ಹೇಳಿದೆ. ವಾಯುಪಡೆಯ ತಜ್ಞರು ಅಪಘಾತಕ್ಕೆ ನಿಖರ ಕಾರಣ ವನ್ನು ಪತ್ತೆಹಚ್ಚಲು ತನಿಖೆ ನಡೆಸುತ್ತಿದ್ದಾರೆ.
ಸಾಮಾನ್ಯವಾಗಿ ಎಎನ್-12 ವಿಮಾನದಲ್ಲಿ ಆರು ಮಂದಿ ಸಿಬ್ಬಂದಿ ಇರುತ್ತಾರೆ. ಎಎನ್-12 ಎಂಬುದು ಸೋವಿಯತ್ ಒಕ್ಕೂಟದಲ್ಲಿ ನಿರ್ಮಿಸಲಾದ, ನಾಲ್ಕು ಎಂಜಿನ್ಗಳನ್ನು ಹೊಂದಿರುವ ಟರ್ಬೊಪ್ರೊಪ್ ಸಾರಿಗೆ ವಿಮಾನವಾಗಿದೆ. ಇದು 1950ರ ದಶಕದ ಅಂತ್ಯದಿಂದಲೂ ಬಳಕೆಯಲ್ಲಿದೆ. ಇಂತಹ ಒಟ್ಟು 1,000ಕ್ಕೂ ಹೆಚ್ಚು ವಿಮಾನಗಳನ್ನು ನಿರ್ಮಿಸಲಾಗಿದ್ದು, ಇಂದಿಗೂ ರಷ್ಯಾ ಮತ್ತು ಇತರ ಕೆಲವು ರಾಷ್ಟ್ರಗಳಲ್ಲಿ ಇವು ಬಳಕೆಯಲ್ಲಿವೆ.
