Homeರಾಜ್ಯ`ಬಸವ ಮಂಟಪ' ಕೃತಿ ವಿವಾದ : ವಿವಾದಿತ ಲೇಖಕ ರವಿ ಹಂಜ್‌ ಪೊಲೀಸ್‌ ವಶಕ್ಕೆ

`ಬಸವ ಮಂಟಪ’ ಕೃತಿ ವಿವಾದ : ವಿವಾದಿತ ಲೇಖಕ ರವಿ ಹಂಜ್‌ ಪೊಲೀಸ್‌ ವಶಕ್ಕೆ

ತಿರುವಂತನಪುರ,ನ.21- ಬಸವಣ್ಣನವರ ಕುರಿತು ವಿವಾದಾತಕ ಹೇಳಿಕೆಗಳು ಹಾಗೂ ಬಸವ ಮಂಟಪ ಕೃತಿಯ ಲ್ಲಿನ ಬರಹಗಳ ಸುತ್ತ ಭುಗಿ ಲೆದ್ದಿರುವ ವಿವಾದ ಮತ್ತೊಂದು ಹಂತಕ್ಕೆ ತಲುಪಿದೆ. ಕೃತಿಯ ಲೇಖಕ ರವಿ ಹಂಜ್‌ ಅವರನ್ನು ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಬೆಳಗಾವಿಯ ಮಾರ್ಕೆಟ್‌ ಪೊಲೀಸ್‌‍ ಠಾಣೆಯಲ್ಲಿ ರವಿ ಹಂಜ್‌ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆಗೆ ಹಾಜರಾಗುವಂತೆ ಸೂಚಿಸುವ ಉದ್ದೇಶದಿಂದ ಪೊಲೀಸರು ಲುಕ್‌ಔಟ್‌ ನೋಟಿಸ್‌‍ ಜಾರಿಗೊಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಅವರನ್ನು ತಡೆದು ವಶಕ್ಕೆ ಪಡೆಯಲಾಗಿದೆ.

ಬಳಿಕ ಈ ಕುರಿತು ಬೆಳಗಾವಿ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ. ಸದ್ಯ ಬೆಳಗಾವಿ ಪೊಲೀಸರು ಅವರನ್ನು ತಮ ವಶಕ್ಕೆ ಪಡೆಯಲು ಹಾಗೂ ಮುಂದಿನ ಕಾನೂನು ಪ್ರಕ್ರಿಯೆ ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಏನಿದು ಬಸವ ಮಂಟಪ ಕೃತಿ ವಿವಾದ?
ರವಿ ಹಂಜ್‌ ಅವರು ಕಳೆದ ಎರಡು ವರ್ಷಗಳಲ್ಲಿ ಕನ್ನಡ ಪತ್ರಿಕೆಯೊಂದರಲ್ಲಿ ಬರೆದಿದ್ದ ಅಂಕಣ ಬರಹಗಳನ್ನು ಒಟ್ಟುಗೂಡಿಸಿ ಱಬಸವ ಮಂಟಪೞ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ. ನವೆಂಬರ್‌ 15ರಂದು ಬೆಂಗಳೂರಿನಲ್ಲಿ ಈ ಕೃತಿ ಬಿಡುಗಡೆಯಾಗಿತ್ತು. ಕೃತಿ ಬಿಡುಗಡೆಯಾದ ಬಳಿಕ ಬಸವಣ್ಣನವರ ಕುರಿತು ಮಾಡಲಾಗಿದೆ ಎನ್ನಲಾದ ಕೆಲವು ಉಲ್ಲೇಖಗಳು ಮತ್ತು ಲೇಖಕರು ನೀಡಿದ ಸಂದರ್ಶನದ ಹೇಳಿಕೆಗಳು ವಿವಾದಕ್ಕೆ ಕಾರಣವಾದವು.

ನವೆಂಬರ್‌ 13ರಂದು ನಡೆದ ಸಂದರ್ಶನವೊಂದರಲ್ಲಿ ರವಿ ಹಂಜ್‌ ಅವರು ಬಸವಣ್ಣನವರ ಪ್ರಸಿದ್ಧ ವಚನವಾದ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡೞ ಎಂಬ ಸಾಲುಗಳನ್ನು ವಿಶ್ಲೇಷಿಸುವ ಸಂದರ್ಭದಲ್ಲಿ ಬಸವಣ್ಣನವರನ್ನು ಕಳ್ಳ ಮತ್ತು ಕೊಲೆಗಾರನ ರೀತಿಯಲ್ಲಿ ಬಿಂಬಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ಅಲ್ಲದೆ, ಲಿಂಗಾಯತ ಪದವನ್ನು ತಿರುಚಿ ಲಿಂಗಾಹತ ಎಂದು ಉಲ್ಲೇಖಿಸಿರುವುದು ಹಾಗೂ ಲಿಂಗಾಯತ ಸಮುದಾಯದ ಪೂಜ್ಯರು ಮತ್ತು ಶರಣ ಪರಂಪರೆಯ ಕುರಿತು ಆಕ್ಷೇಪಾರ್ಹ ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ಸಮುದಾಯದ ಮುಖಂಡರು ಆರೋಪಿಸಿದ್ದರು.ಈ ಸಂದರ್ಶನದ ಕೆಲವು ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿತ್ತು.

ವಿವಾದ ತೀವ್ರಗೊಳ್ಳುತ್ತಿದ್ದಂತೆ ಬಸವ ಸಮಿತಿ ಅಧ್ಯಕ್ಷ ಅರವಿಂದ್‌ ಜತ್ತಿ ಅವರು ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಬಸವಣ್ಣನವರ ಕುರಿತು ಅವಹೇಳನಕಾರಿ ಬರಹ ಹಾಗೂ ಹೇಳಿಕೆಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಲಾಗಿದೆ. ಸಮಾಜದಲ್ಲಿ ದ್ವೇಷ ಮತ್ತು ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಈ ಬೆಳವಣಿಗೆಯ ಬೆನ್ನಲ್ಲೇ ನವೆಂಬರ್‌ 19ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಱಬಸವ ಮಂಟಪೞ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಹಾಗೂ ಲೇಖಕ ರವಿ ಹಂಜ್‌ ಮತ್ತು ಪ್ರಕಾಶಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಯಿತು. ಸಚಿವ ಸಂಪುಟ ಸಭೆಯ ಬಳಿಕ ಉಪಮುಖ್ಯಮಂತ್ರಿ ಡಾಜಿ. ಪರಮೇಶ್ವರ್‌ ಅವರು ಈ ನಿರ್ಧಾರವನ್ನು ಪ್ರಕಟಿಸಿದ್ದರು. ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳುವುದಕ್ಕೂ ಸಂಪೂರ್ಣ ನಿಷೇಧ ಹೇರುವುದಕ್ಕೂ ವ್ಯತ್ಯಾಸವಿದ್ದು, ಸರ್ಕಾರ ಕಾನೂನು ಪ್ರಕ್ರಿಯೆ ಮೂಲಕ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದರು. ವಿವಾದಿತ ಹೇಳಿಕೆಗಳಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ಬಗ್ಗೆಯೂ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಬಂಧನಕ್ಕೆ ಆಗ್ರಹ
ನವೆಂಬರ್‌ 20ರಂದು ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸೇರಿದಂತೆ ವಿವಿಧ ಲಿಂಗಾಯತ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದರು. ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ ಹಾಗೂ ಅಥಣಿಯ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿತ್ತು.

ಲೇಖಕ ರವಿ ಹಂಜ್‌ ಮತ್ತು ಪ್ರಕಾಶಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಿವಾದಿತ ಪುಸ್ತಕದ ಮಾರಾಟ ಮತ್ತು ಪ್ರಸಾರವನ್ನು ತಡೆಯಬೇಕು ಎಂದು ಪ್ರತಿಭಟನಾಕಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು.ಧಾರ್ಮಿಕ ಮತ್ತು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುವಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಮಠಾಧೀಶರು ಎಚ್ಚರಿಕೆ ನೀಡಿದ್ದರು.

ಲೇಖಕ ರವಿ ಹಂಜ್‌ ಹೇಳಿದ್ದೇನು?
ವಿವಾದದ ನಡುವೆಯೇ ರವಿ ಹಂಜ್‌ ತಮ ಕೃತಿಯನ್ನು ಸಮರ್ಥಿಸಿಕೊಂಡಿದ್ದರು. ತಮ ಪುಸ್ತಕದಲ್ಲಿನ ಪ್ರತಿಯೊಂದು ವಾಕ್ಯಕ್ಕೂ ಐತಿಹಾಸಿಕ ದಾಖಲೆಗಳು ಮತ್ತು ಸಾಕ್ಷ್ಯಾಧಾರಗಳಿವೆ. ಕೇವಲ ಎರಡು ನಿಮಿಷಗಳ ಪ್ರಚಾರದ ವಿಡಿಯೋ ನೋಡಿ ಜನರು ಪ್ರತಿಕ್ರಿಯಿಸುತ್ತಿದ್ದಾರೆ. ಸಂಪೂರ್ಣ ಸಂದರ್ಶನವನ್ನು ನೋಡಿದರೆ ತಮ ನಿಲುವು ಅರ್ಥವಾಗಲಿದೆ ಎಂದು ಹೇಳಿದ್ದರು.

ಸಂಶೋಧನಾ ಕೃತಿ ರಚಿಸುವಾಗ ಸಂಶೋಧಕ ತಟಸ್ಥವಾಗಿರಬೇಕು ಮತ್ತು ಲಭ್ಯವಿರುವ ಎಲ್ಲ ಆಧಾರಗಳನ್ನು ಜನರ ಮುಂದಿಡಬೇಕು ಎಂಬುದು ತಮ ನಿಲುವು ಎಂದು ಅವರು ಸಮರ್ಥಿಸಿಕೊಂಡಿದ್ದರು. ಇನ್ನೊಂದೆಡೆ, ವಿವಾದಿತ ಹೇಳಿಕೆಗಳ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿ ತಿದ್ದುಪಡಿ ಮಾಡಲು ಸಿದ್ಧವಿರುವುದಾಗಿ ರವಿ ಹಂಜ್‌ ಹೇಳಿದ್ದರೆಂಬ ವರದಿಗಳೂ ಪ್ರಕಟವಾಗಿದ್ದವು. ಆದರೆ ತಮ ಕೃತಿಯಲ್ಲಿನ ಸಂಶೋಧನಾ ನಿಲುವನ್ನು ಅವರು ಸಮರ್ಥಿಸಿಕೊಂಡಿದ್ದರು.

RELATED ARTICLES

Latest News