Homeರಾಜ್ಯಬಸ್‌‍ ಅಡ್ಡಗಟ್ಟಿ 'ಅಲ್ಲಾ ಹು ಅಕ್ಬರ್‌' ಘೋಷಣೆ ಕೂಗಿದವನ ವಿರುದ್ಧ ಕೇಸ್

ಬಸ್‌‍ ಅಡ್ಡಗಟ್ಟಿ ‘ಅಲ್ಲಾ ಹು ಅಕ್ಬರ್‌’ ಘೋಷಣೆ ಕೂಗಿದವನ ವಿರುದ್ಧ ಕೇಸ್

ಬೆಂಗಳೂರು,ನ.21- ಚಲಿಸುತ್ತಿದ್ದ ಬಸ್‌‍ ಮುಂದೆ ಏಕಾಏಕಿ ಬೈಕ್‌ ನಿಲ್ಲಿಸಿ ತಡೆದು ಸಾರ್ವಜನಿಕ ಸ್ಥಳದಲ್ಲಿ ಅಲ್ಲಾ ಹು ಅಕ್ಬರ್‌ ಎಂದು ಘೋಷಣೆ ಕೂಗಿ ಕಿರಿಕಿರಿ ಉಂಟುಮಾಡಿದ ವ್ಯಕ್ತಿ ವಿರುದ್ಧ ಮಂಡ್ಯ ನಗರ ಪೂರ್ವ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಡ್ಯದ ಶಂಕರಮಠ ನಿವಾಸಿ ಅಬ್ದುಲ್‌ ಸತ್ತಾರ್‌ ಎಂಬಾತನ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ನಿನ್ನೆ ಮಂಡ್ಯದ ಮಹಾವೀರ ಸರ್ಕಲ್‌ನಲ್ಲಿ ಕೆಎಸ್‌‍ಆರ್‌ಟಿಸಿ ಬಸ್‌‍ ಹೋಗುತ್ತಿದ್ದಾಗ ಅಬ್ದುಲ್‌ ಏಕಾಏಕಿ ಬಸ್‌‍ ಮುಂದೆ ಬೈಕ್‌ ನಿಲ್ಲಿಸಿ ತಡೆದು ಅಲ್ಲಾ ಹು ಅಕ್ಬರ್‌ ಎಂದು ಘೋಷಣೆ ಕೂಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದಾನೆ.

ಈ ಘಟನೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನನ್ನು ಕರೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ.

RELATED ARTICLES

Latest News