Homeರಾಷ್ಟ್ರೀಯವಿಮಾನದಲ್ಲಿ ಇರುಮುಡಿ ಸಾಗಿಸಲು ಅನುಮತಿ

ವಿಮಾನದಲ್ಲಿ ಇರುಮುಡಿ ಸಾಗಿಸಲು ಅನುಮತಿ

ನವದೆಹಲಿ, ನ.22- ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳುವ ಭಕ್ತರು ಇನ್ನು ಮುಂದೆ ವಿಮಾನಗಳಲ್ಲಿ ಇರುಮುಡಿ ಸಾಗಿಸಬಹುದಾಗಿದೆ.ವಿಮಾನದ ಮೂಲಕ ಶಬರಿಮಲೆ ಯಾತ್ರೆ ಕೈಗೊಳ್ಳುವ ಭಕ್ತರು ಸತತ ಮೂರನೇ ವರ್ಷವೂ ತಮ್ಮ ಪವಿತ್ರ ಇರುಮುಡಿ ಕಟ್ಟು ವಿಮಾನದ ಕ್ಯಾಬಿನ್‌ನಲ್ಲಿಯೇ (ಹ್ಯಾಂಡ್‌ ಬ್ಯಾಗೇಜ್‌ ಆಗಿ) ಕೊಂಡೊಯ್ಯಲು ವಿಮಾನಯಾನ ಇಲಾಖೆ ಅನುಮತಿ ನೀಡಿದೆ.

ಸಾಮಾನ್ಯವಾಗಿ ವಿಮಾನಯಾನದ ಕಟ್ಟುನಿಟ್ಟಿನ ಭದ್ರತಾ ನಿಯಮಗಳ ಪ್ರಕಾರ, ತೆಂಗಿನಕಾಯಿ ಸೇರಿದಂತೆ ಕೆಲವು ಪೂಜಾ ಸಾಮಗ್ರಿಗಳನ್ನು ಕ್ಯಾಬಿನ್‌ ಒಳಗೆ ಕೊಂಡೊಯ್ಯಲು ನಿರ್ಬಂಧವಿರುತ್ತದೆ. ಆದರೆ, ಶಬರಿಮಲೆ ಭಕ್ತರ ಶತಮಾನಗಳ ಸಂಪ್ರದಾಯ ಮತ್ತು ಧಾರ್ಮಿಕ ಭಾವನೆಗಳಿಗೆ ಗೌರವ ನೀಡಿರುವ ಕೇಂದ್ರ ವಿಮಾನಯಾನ ಸಚಿವ ಕೆ. ರಾಮ್‌ ಮೋಹನ್‌ ನಾಯ್ಡು ಅವರು ಈ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.ಈ ಮಂಡಲ-ಮಕರವಿಳಕ್ಕು ಯಾತ್ರೆಯ ಅವಧಿಯಲ್ಲೂ ಭದ್ರತಾ ನಿಯಮಗಳಲ್ಲಿ ವಿಶೇಷ ಸಡಿಲಿಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ:ಯಾತ್ರಿಕರಿಗೆ ವಿಮಾನ ನಿಲ್ದಾಣಗಳಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ದೇಶದ ಎಲ್ಲಾ ವಿಮಾನ ನಿಲ್ದಾಣಗಳ ನಿರ್ವಾಹಕರಿಗೆ ಸಚಿವಾಲಯವು ಸ್ಪಷ್ಟ ನಿರ್ದೇಶನ ನೀಡಿದೆ.

ಇದರಿಂದಾಗಿ ಭಕ್ತರು ತಮ್ಮ ಇರುಮುಡಿಯನ್ನು ಚೆಕ್‌‍-ಇನ್‌ ಲಗೇಜ್‌ಗೆ ಹಾಕುವ ಆತಂಕವಿಲ್ಲದೆ, ಭಕ್ತಿಪೂರ್ವಕವಾಗಿ ತಮ್ಮೊಂದಿಗೆ ಕ್ಯಾಬಿನ್‌ನಲ್ಲಿಯೇ ಕೊಂಡೊಯ್ಯಬಹುದಾಗಿದೆ. ವಿಮಾನ ಪ್ರಯಾಣದ ಸಡಿಲಿಕೆಯ ಜೊತೆಗೆ, ಕೇರಳ ಸರ್ಕಾರ ಮತ್ತು ದೇವಸ್ವಂ ಮಂಡಳಿ ಜಾರಿಗೆ ತಂದಿರುವ ಈ ಕೆಳಗಿನ ಪ್ರಮುಖ ನಿಯಮಗಳನ್ನು ಭಕ್ತರು ಪಾಲಿಸುವುದು ಕಡ್ಡಾಯವಾಗಿದೆ.

RELATED ARTICLES

Latest News