ಬೆಂಗಳೂರು,ನ.24- ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬೆಂಗಳೂರು ವಿಭಾಗವು ಕೇಂದ್ರೀಯ ಬೆಂಗಳೂರು-ನೀಲಕ್ಕಲ್ (ಪಂಪಾ-ಶಬರಿಮಲೆ) ನಡುವೆ ನ.28ರಿಂದ ಐರಾವತ ಸೇವೆ ಆರಂಭಿಸಲಿದೆ.
ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50ಕ್ಕೆ ಹೊರಡುವ ಬಸ್ ಮೈಸೂರು, ಕೋಯಿಕ್ಕೋಡ್, ತ್ರಿಶೂರ್, ಕೊಟ್ಟಾಯಂ ಮತ್ತು ಏರುಮೇಲಿ ಮಾರ್ಗವಾಗಿ ಮರುದಿನ ಬೆಳಗ್ಗೆ 6.45ಕ್ಕೆ ನೀಲಕ್ಕಲ್ ತಲುಪಲಿದೆ.
ಮರು ಪ್ರಯಾಣದಲ್ಲಿ ನೀಲಕ್ಕಲ್‌ನಿಂದ ಸಂಜೆ 6 ಗಂಟೆಗೆ ಹೊರಡುವ ಬಸ್ ಮರುದಿನ ಬೆಳಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ನೀಲಕ್ಕಲ್‌ಗೆ ವಯಸ್ಕರ ಆನ್‌ಲೈನ್‌ಟಿಕೆಟ್ ದರ 1980 ರೂ. ನಿಗದಿಪಡಿಸಲಾಗಿದೆ. ಮೈಸೂರಿನಿಂದ ಪ್ರಯಾಣಿಸುವವರಿಗೆ 1,880 ರೂ. ದರ ಇರಲಿದೆ.
