Homeರಾಜ್ಯಕೆಎಸ್‌‍ಆರ್‌ಟಿಸಿ ಬಸ್‌‍ಗಳಲ್ಲಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದವರಿಂದ 9.75 ಲಕ್ಷ ರೂ. ದಂಡ ವಸೂಲಿ

ಕೆಎಸ್‌‍ಆರ್‌ಟಿಸಿ ಬಸ್‌‍ಗಳಲ್ಲಿ ಟಿಕೆಟ್‌ ಪಡೆಯದೇ ಪ್ರಯಾಣಿಸುತ್ತಿದ್ದವರಿಂದ 9.75 ಲಕ್ಷ ರೂ. ದಂಡ ವಸೂಲಿ

ಬೆಂಗಳೂರು,ನ.24- ಕೆಎಸ್‌‍ಆರ್‌ಟಿಸಿ ಬಸ್‌‍ಗಳಲ್ಲಿ ಟಿಕೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ 5,737 ಮಂದಿಯಿಂದ ಅಕ್ಟೋಬರ್‌ನಲ್ಲಿ 9.75 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.ನಿಗಮದ ತನಿಖಾ ತಂಡಗಳು ಅಕ್ಟೋಬರ್‌ನಲ್ಲಿ 46,742 ಬಸ್‌‍ಗಳನ್ನು ತಪಾಸಣೆ ನಡೆಸಿದ್ದು, ಟಿಕೆಟ್‌ ರಹಿತ ಪ್ರಯಾಣ ಸೇರಿದಂತೆ ಒಟ್ಟು 4,701 ಪ್ರಕರಣಗಳನ್ನು ಪತ್ತೆ ಹಚ್ಚಿವೆ. ಈ ಸಂಬಂಧ ಪ್ರಯಾಣಿಕರಿಂದ 9.75 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಅಲ್ಲದೆ, ನಿಗಮದ ಆದಾಯ ಸೋರಿಕೆಯಾಗುತ್ತಿದ್ದ 1.44 ಲಕ್ಷ ರೂ. ಮೊತ್ತವನ್ನೂ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕರ್ತವ್ಯ ಲೋಪ ಎಸಗಿದವರ ವಿರುದ್ಧ ಇಲಾಖಾ ಶಿಸ್ತುಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಸಂಚರಿಸುವಾಗ ಕಡ್ಡಾಯವಾಗಿ ಟಿಕೆಟ್‌ ಅಥವಾ ಮಾನ್ಯ ಪಾಸ್‌‍ ಪಡೆದು ಪ್ರಯಾಣಿಸಬೇಕು ಎಂದು ಕೆಎಸ್‌‍ಆರ್‌ಟಿಸಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News