Homeರಾಷ್ಟ್ರೀಯಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆ

ಡಾಲರ್‌ ಎದುರು ರೂಪಾಯಿ ಮೌಲ್ಯ ಏರಿಕೆ

ಮುಂಬೈ, ನ.25- ದೇಶೀಯ ಷೇರು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ, ವಿದೇಶಿ ಹೂಡಿಕೆದಾರರಿಂದ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಿಕೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯ ಪರಿಣಾಮವಾಗಿ ಇಂದು ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 53 ಪೈಸೆ ಏರಿಕೆಯಾಗಿ 92.29 ಕ್ಕೆ ತಲುಪಿದೆ.

ಅಂತರಬ್ಯಾಂಕ್‌ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ 92.65ರ ಮಟ್ಟದಲ್ಲಿ ವಹಿವಾಟು ಆರಂಭಿಸಿ, ಬಳಿಕ ಡಾಲರ್‌ ಎದುರು 92.29ಕ್ಕೆ ಏರಿಕೆಯಾಯಿತು. ಹಿಂದಿನ ವಹಿವಾಟಿನ ಅಂತ್ಯಕ್ಕೆ ಹೋಲಿಸಿದರೆ ಇದು 53 ಪೈಸೆಯಷ್ಟು ಏರಿಕೆಯಾಗಿದೆ.

ಏಳು ತಿಂಗಳ ಗರಿಷ್ಠ ಮಟ್ಟದಿಂದ ಕುಸಿದಿದ್ದ ರೂಪಾಯಿ, ಡಾಲರ್‌ ಎದುರು 23 ಪೈಸೆ ನಷ್ಟದೊಂದಿಗೆ 92.85ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ನ. 13ರಂದು ಡಾಲರ್‌ ಎದುರು 94.19ರಲ್ಲಿ ವಹಿವಾಟು ಮುಕ್ತಾಯಗೊಳಿಸಿದ್ದ ರೂಪಾಯಿ, ನಂತರ ಸತತ ಐದು ವಹಿವಾಟು ದಿನಗಳಲ್ಲಿ ಒಟ್ಟಾರೆ ಶೇ.2ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿತ್ತು.

ಜಾಗತಿಕ ಮಾರುಕಟ್ಟೆಯ ಪ್ರಮುಖ ಕಚ್ಚಾ ತೈಲ ಮಾನದಂಡವಾದ ಬ್ರೆಂಟ್‌ ಕ್ರೂಡ್‌ ಬೆಲೆ ಶೇ.1.30ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 90.21 ಡಾಲರ್‌ನಲ್ಲಿ ವಹಿವಾಟು ನಡೆಸಿತು. ದೇಶೀಯ ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 1,466.70 ಅಂಕಗಳು ಅಥವಾ ಶೇ.1.78ರಷ್ಟು ಏರಿಕೆಯಾಗಿ 83,902.69ಕ್ಕೆ ತಲುಪಿತು. ನಿಫ್ಟಿ ಕೂಡ 411.95 ಅಂಕಗಳು ಅಥವಾ ಶೇ.1.63ರಷ್ಟು ಏರಿಕೆಯಾಗಿ 25,761.60ರಲ್ಲಿ ವಹಿವಾಟು ನಡೆಸಿತು

RELATED ARTICLES

Latest News