ಬೆಂಗಳೂರು, ನ.26- ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಗರಣ ಕುರಿತು ರಾಜ್ಯ ಸರ್ಕಾರ ಸಿಐಡಿ ನಡೆಸಿದ ತನಿಖೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಕ್ಲೀನ್ಚಿಟ್ ಪಡೆದಿದ್ದರು. ಆದರೆ ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳ ವಿಚಾರಣೆಯ ತೂಗು ಕತ್ತಿಯಿಂದ ಪಾರಾಗಲು ಸಾಧ್ಯವಾಗಿಲ್ಲ. ಸಿಬಿಐ, ಜಾರಿ ನಿರ್ದೇಶ ನಾಲಯ (ಇಡಿ)ದ ತನಿಖೆಗಳು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿವೆ. ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬಿ. ನಾಗೇಂದ್ರ ಮತ್ತು ನಿಗಮದ ಅಧ್ಯಕ್ಷರಾಗಿದ್ದ ಶಾಸಕ ಬಸವನಗೌಡ ದದ್ದಲ್ ಅವರನ್ನು ನಿರ್ದೋಶಿಗಳೆಂದು ಪರಿಗಣಿಸಲಾಗಿದ್ದು, ಆರೋಪಿಗಳ ಬದಲಾಗಿ ಮಾಫಿ ಸಾಕ್ಷಿಗಳನ್ನಾಗಿ ಗುರುತಿಸಲಾಗಿದೆ. ಆದರೆ ಪ್ರಕರಣದ ತನಿಖೆ ನಡೆಸಿ ನಾಗೇಂದ್ರ ಅವರನ್ನು ಬಂಧಿಸಿದ್ದ ಇಡಿ, 31 ಆರೋಪಿಗಳನ್ನು ಗುರುತಿಸಿದ್ದು, ಅದರಲ್ಲಿ ಬಿ. ನಾಗೇಂದ್ರ ಪ್ರಮುಖರಾಗಿ ದ್ದಾರೆ.
ಇತ್ತೀಚೆಗೆ ಹೊಸದಾಗಿ 6 ಮಂದಿ ಆರೋಪಿಗಳನ್ನು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದ್ದು, ವಿಚಾರಣೆಗೆ ಸಮನ್್ಸ ಜಾರಿ ಮಾಡಿದೆ. ನಿಗಮದ 187 ಕೋಟಿ ರೂ.ಗಳ ಪೈಕಿ 89.63 ಕೋಟಿ ರೂ.ಗಳ ನಕಲಿ ದಾಖಲೆಗಳು ಹಾಗೂ ಚೆಕ್ ಮೂಲಕ ಅಕ್ರಮವಾಗಿ ಅನಧಿಕೃತ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿರುವುದಾಗಿ ನಾಗೇಂದ್ರ ಅವರ ಪಾತ್ರ ಇದೆ ಎಂದು ಆರೋಪಿಸಲಾಗಿದೆ. ಸಿಡಿಐ ತನಿಖೆಯಲ್ಲಿ 30 ಮಂದಿ ಆರೋಪಿಗಳನ್ನು ಉಲ್ಲೇಖಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಅದರಲ್ಲಿ ನಾಗೇಂದ್ರ ಪ್ರಮುಖ ಆರೋಪಿ ಯಾಗಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಲ್ಲಿ ಗೊಂದಲಗಳಾಗಿವೆ. ಸಿಐಡಿ ನಾಗೇಂದ್ರ ಅವರಿಗೆ ಕ್ಲೀನ್ಚಿಟ್ ನೀಡಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದನಾಭ, ಮಧ್ಯವರ್ತಿ ನೆಕ್ಕುಂಟಿ ನಾಗರಾಜು ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಎಂದು ಹೇಳಲಾದ ಸತ್ಯ ನಾರಾಯಣ ವರ್ಮ ಅವರನ್ನು ಪ್ರಮುಖ ಆರೋಪಿಗಳನ್ನಾಗಿ ಗುರುತಿಸಿವೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಾಗೇಂದ್ರ ಅವರಿಗೆ ರಾಜಕೀಯವಾಗಿ ಮಗ್ಗುಲ ಮುಳ್ಳಾಗಿದೆ. ಹಗರಣ ಆರೋಪದಲ್ಲೇ ಸಿಲುಕಿ ನಾಗೇಂದ್ರ ಮೊದಲ ಬಾರಿಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಐಡಿ ತನಿಖೆಯಲ್ಲಿ ತಮ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ವಾದ ಮಂಡಿಸಿ ಮತ್ತೆ ಡಿ.ಕೆ.ಶಿವಕುಮಾರ್ ಸರ್ಕಾರದಲ್ಲಿ ಸಂಪುಟ ಸೇರಿದ್ದರು. ಆದರೆ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಭಾರೀ ಗದ್ದಲ ಮಾಡಿದ್ದರಿಂದಾಗಿ ನಾಗೇಂದ್ರ ಅನಿವಾರ್ಯವಾಗಿ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈಗ ಸಿಐಡಿಯ ದೋಷಾರೋಪಣಾ ಪಟ್ಟಿಯಲ್ಲಿ ತಮ ಹೆಸರಿಲ್ಲ ಎಂಬ ಕಾರಣಕ್ಕಾಗಿ ಮತ್ತೆ ಸಂಪುಟ ಸೇರಲು ನಾಗೇಂದ್ರ ಲಾಬಿ ಆರಂಭಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರದ ಅಧಿಕಾರಿಗಳು ಕ್ಲೀನ್ಚಿಟ್ ನೀಡಿದರೂ, ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ಸಂಕಷ್ಟ ತಪ್ಪಿದ್ದಲ್ಲ ಎಂಬ ಪರಿಸ್ಥಿತಿ ನಾಗೇಂದ್ರ ಅವರನ್ನು ಕಾಡುತ್ತಿದೆ.
B Nagendra in Valmiki Corporation scam case
