Homeಇದೀಗ ಬಂದ ಸುದ್ದಿಏಳು ಮಂದಿ ಹ*ತ್ಯೆ ಪ್ರಕರಣ: ದಿನಕ್ಕೊಂದು ಕರಾಳತೆ ಬೆಳಕಿಗೆ

ಏಳು ಮಂದಿ ಹ*ತ್ಯೆ ಪ್ರಕರಣ: ದಿನಕ್ಕೊಂದು ಕರಾಳತೆ ಬೆಳಕಿಗೆ

ಬೆಂಗಳೂರು,ನ.26- ರಾಜಧಾನಿ ಯನ್ನೇ ಬೆಚ್ಚಿ ಬೀಳಿಸಿದ್ದ ಏಳು ಮಂದಿ ಸರಣಿ ಕೊಲೆ ಪ್ರಕರಣ ಪತ್ತೇದಾರಿ ಕಥೆಯಂತೆ ದಿನಕ್ಕೊಂದು ಕರಾಳತೆ ತೆರೆದುಕೊಳ್ಳುತ್ತಿದ್ದು, ಇಲ್ಲಿ ಅಪ್ಪ,ಮಗಳ ಮನಸ್ಸು ಕಲ್ಲು ಬಂಡೆಯಾಯಿತೇ ಎಂಬ ಪ್ರಶ್ನೆ ಉದ್ಬವಿಸಿದೆ. ದಾರುಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಚ್ಚಿ ಬೀಳಿಸೋ ಸಂಗತಿಗಳು ಬೆಳಕಿಗೆ ಬರುತ್ತಲೇ ಇದ್ದು, ತನಿಖೆ ವೇಳೆ ಹಂತಕನ ಮಗಳ ಒಂದೊಂದೇ ಕರಾಳ ರಹಸ್ಯಗಳು ತೆರೆದುಕೊಳ್ಳುತ್ತಿವೆ. ಮಗಳಿಗೆ ಕ್ರೂರತೆಯ ಮನಸ್ಸು ಎಷ್ಟಿತ್ತೇಂದರೆ ಊಹಿಸಲು ಅಸಾಧ್ಯವಾದಷ್ಟಿದೆ.

ರಕ್ತ ಕಂಡರೆ ಎಂತಹವರಿಗೂ ಕೂಡ ನಡುಕ ಹುಟ್ಟಿಸುತ್ತದೆ. ಅದರಲ್ಲೂ ಕೊಲೆ ಕಣ್ಣಾರೆ ಕಂಡರೆ ಒಂದು ಕ್ಷಣ ಹೃದಯ ಬಡಿತ ನಿಲ್ಲುತ್ತದೆ. ಅಂತಹದರಲ್ಲಿ ಈ ಅಪ್ರಾಪ್ತೆಯ ಧೈರ್ಯ ಎಷ್ಟಿರಬೇಕು ಕಲ್ಪನೆ ಮಾಡಲು ಅಸಾಧ್ಯ. ಒಂದು ದಿನ ತಾಯಿ ಶವ, ಮತ್ತೊಂದು ದಿನ ಅಜ್ಜಿ ಶವದ ಜೊತೆ ಅಪ್ರಾಪ್ತೆ ಮಲಗುತ್ತಿದ್ದಳು ಎಂಬ ಅಂಶ ತಿಳಿಯುತ್ತಿದೆ. ಮಲಗಿದ್ದರೆ ಪರವಾಗಿಲ್ಲ ಆದರೆ ಮೂಟೆಯಿಂದ ರಕ್ತ ಸೋರುತ್ತಿದ್ದರೆ ಟೇಪ್‌ ಹಾಕಿ ಕಟ್ಟುತ್ತಿದ್ದಳಂತೆ.

ಕೊಲೆ ಮಾಡುವ ಸಮಯಕ್ಕೆ ಸರಿಯಾಗಿ ವಿಲೇವಾರಿಗೆ ಬೇಕಾದ ಸೀರೆ, ಚೀಲ, ಹಗ್ಗ, ಟೇಪ್‌ ಹಿಡಿದು ನಿಲ್ಲುತ್ತಿದ್ದಳು. ನಳಿನಿಯ ಕೊಲೆ ಮಾಡುವಾಗ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಳು ಎಂಬ ಅಂಶ ರಿವಿಲ್‌ ಆಗಿದ್ದು, ಹೊರಗಡೆ ಶಬ್ದ ಕೇಳದಂತೆ ಮಗಳೇ ಡೋರ್‌ ಲಾಕ್‌ ಮಾಡಿಕೊಳ್ಳುತ್ತಿದ್ದಳು. ರಕ್ತದ ಕಲೆಗಳನ್ನು ಅವಳೆ ಸ್ವಚ್ಛ ಮಾಡುತ್ತಿದ್ದಳಂತೆ. ನಂತರ ಇಬ್ಬರ ಬಟ್ಟೆಗಳನ್ನು ಅಪ್ಪ,ಮಗಳು ಚೀಲದಲ್ಲಿ ಹಾಕಿ ಗಂಟು ಕಟ್ಟುತ್ತಿದ್ದರು. ನಂತರ ನೂರಾರು ಕಿ.ಮೀ ಸುತ್ತಾಡಿ ಅವುಗಳನ್ನು ಬಿಸಾಡಿ ಬರುತ್ತಿದ್ದರು.

ನಂತರ ಪೊಲೀಸರು ಒಂದೊಂದು ದಿಕ್ಕಿನಲ್ಲಿ ಎಸೆಯಲಾಗಿದ್ದ ಶವಗಳು ಹಾಗೂ ಕೃತ್ಯಕ್ಕೆ ಬಳಸಲಾಗಿದ್ದ ವಸ್ತುಗಳನ್ನು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ.

RELATED ARTICLES

Latest News