ದೊಡ್ಡಬಳ್ಳಾಪುರ, ಆ.27– ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಶ್ರೀ ಕ್ಷೇತ್ರ ಘಾಟಿ ಸುಬ್ರಹಣ್ಯಸ್ವಾಮಿ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಒಟ್ಟು 59, 34, 739 ರೂ. ಮೊತ್ತದ ಹಣ ಸಂಗ್ರಹವಾಗಿದೆ.
ಮುಜರಾಯಿ ತಹಸೀಲ್ದಾರ್ ಜಿ.ಜೆ.ಹೇಮಾವತಿ ಅವರ ಸಮುಖದಲ್ಲಿ ದೇವಾಲಯದ ಸಿಬ್ಬಂದಿ ಮತ್ತು ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳಿಂದ ಹುಂಡಿಯ ಎಣಿಕೆ ಕಾರ್ಯವನ್ನು ನಿನ್ನೆ ನಡೆಸಲಾಯಿತು. ಹುಂಡಿಯಲ್ಲಿ 90,000 ರೂ. ಮೌಲ್ಯದ 1 ಕೆಜಿ 800 ಗ್ರಾಂ ಬೆಳ್ಳಿ, 5,760 ರೂ. ಮೌಲ್ಯದ 1 ಗ್ರಾ.600 ಮಿಲಿ ತೂಕದ ಚಿನ್ನ ಕಾಣಿಕೆ ರೂಪದಲ್ಲಿ ಹುಂಡಿಗೆ ಬಿದ್ದಿವೆ.
ಹುಂಡಿಯನ್ನು ನಿಯಮಾನುಸಾರ ತೆರೆದು ಎಣಿಕೆ ಕಾರ್ಯ ನಡೆಸಲಾಗಿದ್ದು. ಈ ವೇಳೆ ದೇವಾಲಯಕ್ಕೆ ಆಗಮಿಸಿದ್ದ ಭಕ್ತಾದಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಎಂ.ನಾರಾಯಣಸ್ವಾಮಿ, ಮುಜರಾಯಿ ಇಲಾಖೆ ತಹಸೀಲ್ದಾರ್ ಜಿ.ಜೆ. ಹೇಮಾವತಿ, ಪ್ರಧಾನ ಅರ್ಚಕ ಆರ್. ಸುಬ್ರಹಣ್ಯ, ದೇವಾಲಯದ ಸಿಬ್ಬಂದಿ ನಂಜಪ್ಪ ಹಾಗೂ ಇತರೆ ಸಿಬ್ಬಂದಿಗಳು ಮತ್ತು ಕೆನರಾ ಬ್ಯಾಂಕ್ ಸಿಬ್ಬಂದಿ, ಪೊಲೀಸರ ಸಮುಖದಲ್ಲಿ ಹುಂಡಿ ಕಾಣಿಕೆ ಕಾರ್ಯ ನಡೆಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.