Homeರಾಜ್ಯಶಬರಿಮಲೆಯಲ್ಲಿ ವೈಎಸ್‌‍ವಿ ದತ್ತ ಫೋಟೋ ಹಿಡಿದು ಸಾಗಿದ ಭಕ್ತ

ಶಬರಿಮಲೆಯಲ್ಲಿ ವೈಎಸ್‌‍ವಿ ದತ್ತ ಫೋಟೋ ಹಿಡಿದು ಸಾಗಿದ ಭಕ್ತ

Devotee carries YSV Dutta photo in Sabarimala

ಚಿಕ್ಕಮಗಳೂರು,ಜ.17-ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಜೆಡಿಎಸ್‌‍ ಮುಖಂಡ ವೈಎಸ್‌‍ವಿ ದತ್ತ ಅವರು ಮತ್ತೆ ಕಡೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಬರಲಿ ಎಂದು ಇರುಮುಡಿಯೊಂದಿಗೆ ಶಬರಿಮಲೆಗೆ ವೈಎಸ್‌‍ವಿ ದತ್ತ ರವರ ಫೋಟೋ ಹಿಡಿದು ಅಭಿಮಾನಿಯೊಬ್ಬರು ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿದ್ದಾರೆ.

ಕಡೂರು ಕ್ಷೇತ್ರದ ದತ್ತ ಅವರ ಅಭಿಮಾನಿ ಬೀರೂರು ಪಟ್ಟಣದ ನಿವಾಸಿ ಗಣೇಶ್‌ ಅವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಜೊತೆಯಲ್ಲಿ ದತ್ತ ಅವರ ಫೋಟೋ ಹಿಡಿದು ದರ್ಶನ ಪಡೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಮುಂಬರುವ 2028ರಲ್ಲಿ ಕಡೂರಿನಿಂದ ವೈಎಸ್‌‍ವಿ ದತ್ತ ಅವರು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಬರಲಿ ಎಂದು ಅಯ್ಯಪ್ಪನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಗಣೇಶ್‌ ತಿಳಿಸಿದ್ದಾರೆ. ಜೊತೆಗೆ ಮಕರ ಜ್ಯೋತಿ ದರ್ಶನದ ವೇಳೆಯಲ್ಲಿ ದತ್ತ ಫೋಟೋ ಹಿಡಿದೆ ಜ್ಯೋತಿ ದರ್ಶನ ಮಾಡಿದ್ದಾರೆ.

RELATED ARTICLES
spot_img

Latest News