Thursday, April 16, 2026
Homeರಾಜ್ಯಮಾಜಿ ಸಚಿವ ರಾಜೂಗೌಡ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಮಾಜಿ ಸಚಿವ ರಾಜೂಗೌಡ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Former Minister Raju Gowda's car accident

ಯಾದಗಿರಿ,ಜ.17- ಸಿಸಿಎಲ್‌ ಕ್ರಿಕೆಟ್‌ ಪಂದ್ಯ ಮುಗಿಸಿ ಹೈದ್ರಾಬಾದ್‌ನಿಂದ ಯಾದಗಿರಿ ಮೂಲಕ ತಮ ಊರಿಗೆ ತೆರಳುತ್ತಿದ್ದ ಮಾಜಿ ಸಚಿವ ರಾಜೂಗೌಡ ಅವರು ಪ್ರಯಾಣಿಸುತ್ತಿದ್ದ ಕಾರು ಹೈವೇ ರಸ್ತೆಯಲ್ಲಿ ಅಪಘಾತಕ್ಕಿಡಾಗಿದ್ದು, ಅದೃಷ್ಟವಶಾತ್‌ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ತಡರಾತ್ರಿ ನೆರೆಯ ವಿಶಾಖಪಟ್ಟಣ ದಿಂದ ಸೆಲೆಬ್ರಟಿ ಕ್ರಿಕೆಟ್‌ ಲೀಗ್‌ ಪಂದ್ಯ ಮುಗಿಸಿ ಕಾರಿನಲ್ಲಿ ತೆರಳುತ್ತಿದ್ದಾಗ ನಗರದ ಗಂಜ್‌ ಪ್ರದೇಶದ ಹೈವೇ ರಸ್ತೆಯಲ್ಲಿ ಟ್ರಕ್‌ ವೊಂದು ಇವರ ಕಾರಿಗೆ ಹಿಂದಿನಿಂದ ಗುದ್ದಿದೆ.

ಪರಿಣಾಮ ಅಪಘಾತದ ರಭಸಕ್ಕೆ ಕಾರು ಚಾಲಕನ ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.
ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ರಾಜೂಗೌಡ ಅವರಿಗೆ ಅಲ್ಪಸ್ವಲ್ಪ ತರಚಿದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ವಾಪಸ್‌‍ ಮನೆಗೆ ಮರಳಿ ವಿಶ್ರಾಂತಿ ಪಡೆಯುತ್ತಿದ್ದಾರೆ.

RELATED ARTICLES

Latest News