ಬೆಂಗಳೂರು: ನಾವೇನು ತಿನ್ನುತ್ತೇವೆಯೋ, ಅದೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಇದನ್ನೇ ನಮ್ಮ ಹಿರಿಯರು ʼಊಟ ಬಲ್ಲವನಿಗೆ ರೋಗವಿಲ್ಲʼ ಎಂದಿರುವುದು. ಉತ್ತಮ ಆಹಾರ ಪದ್ಧತಿಯಿಂದ ರೋಗಗಳನ್ನು ಹೇಗೆ ತಡೆಯಬಹುದು ಮತ್ತು ಸುದೀರ್ಘ ಕಾಲ ಆರೋಗ್ಯವಾಗಿ ಬದುಕುವುದು ಹೇಗೆ ಎಂಬುದನ್ನು ಚರ್ಚಿಸಲು, ಹ್ಯಾಪಿಯೆಸ್ಟ್ ಹೆಲ್ತ್ ಸಂಸ್ಥೆಯು ಇದೇ ಆಗಸ್ಟ್ 8, 2026 ರಂದು ಬೆಂಗಳೂರಿನಲ್ಲಿ ‘ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026’ ಎಂಬ ಒಂದು ದಿನದ ಬೃಹತ್ ಸಮಿಟ್ ಅನ್ನು ಆಯೋಜಿಸಿದೆ.
ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ‘ದಿ ಚಾನ್ಸರಿ ಪೆವಿಲಿಯನ್’ ಹೋಟೆಲ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ದೇಶದ ಪ್ರಮುಖ ಪೋಷಕಾಂಶ ತಜ್ಞರ), ಖ್ಯಾತ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ದಿಗ್ಗಜರು ಭಾಗವಹಿಸಲಿದ್ದಾರೆ.
ಈ ಸಮಿಟ್‌ನಲ್ಲಿ ಏನಿರುತ್ತೆ? ಮನುಷ್ಯನ ದೀರ್ಘಾಯುಷ್ಯ, ಕರುಳಿನ ಆರೋಗ್ಯ, ತಾಯಿ ಮತ್ತು ಮಕ್ಕಳ ಪೋಷಣೆ ಹಾಗೂ ವೈಯಕ್ತಿಕ ಆರೋಗ್ಯದ ಬಗ್ಗೆ ಈ ಸಮಿಟ್‌ನಲ್ಲಿ ಆಳವಾದ ಚರ್ಚೆ ನಡೆಯಲಿದೆ. ಸೇಂಟ್ ಜಾನ್ಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಪೋಷಕಾಂಶ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಡಾ. ಸುಮತಿ ಸ್ವಾಮಿನಾಥನ್ ಅವರು ‘ದೀರ್ಘಾಯುಷ್ಯಕ್ಕಾಗಿ ಸರಿಯಾದ ಆಹಾರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಇವರೊಂದಿಗೆ ಡಾ. ಆಶಾ ಬೆನಕಪ್ಪ, ಖ್ಯಾತ ತಜ್ಞರಾದ ಶೀಲಾ ಕೃಷ್ಣಸ್ವಾಮಿ, ಡಾ. ನಂದಿತಾ ಅಯ್ಯರ್, ಅದಿತಿ ಪ್ರಸಾದ್ ಆಪ್ಟೆ ಮತ್ತು ಡಾ. ಉಮೇಶ್ ವಾಧವಾನಿ ಅವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ವೈಯಕ್ತಿಕ ಪೋಷಕಾಂಶಗಳು, ಕರುಳಿನ ಆರೋಗ್ಯ, ತಾಯಿ-ಮಕ್ಕಳ ಪೋಷಣೆ ಮತ್ತು ಜೀವನಶೈಲಿಯ ಬಗ್ಗೆ ಉಪಯುಕ್ತ ಮಾಹಿತಿ ಹಂಚಿಕೊಳ್ಳಲಿದ್ದಾರೆ.
ವಿಜ್ಞಾನ ಆಧಾರಿತ ನಂಬಿಕಾರ್ಹ ಮಾಹಿತಿ ನೀಡುವುದೇ ನಮ್ಮ ಗುರಿ
ಈ ಮಹತ್ವದ ಕಾರ್ಯಕ್ರಮದ ಬಗ್ಗೆ ವಿವರಗಳನ್ನು ಹಂಚಿಕೊಂಡಿರುವ ಹ್ಯಾಪಿಯೆಸ್ಟ್ ಹೆಲ್ತ್‌ನ ಜ್ಞಾನ ವಿಭಾಗದ ಸಿಇಒ ಮತ್ತು ಮುಖ್ಯ ಸಂಪಾದಕ ರಘು ಕೃಷ್ಣನ್, “ಬರಲಿರುವ ರೋಗಗಳನ್ನು ಮುಂಚಿತವಾಗಿ ತಡೆಯುವಲ್ಲಿ ಪೋಷಕಾಂಶಗಳ ಪಾತ್ರ ಬಹಳ ದೊಡ್ಡದು. ಈ ಬಗ್ಗೆ ವಿಜ್ಞಾನವು ವೇಗವಾಗಿ ಬೆಳೆಯುತ್ತಿದೆ. ಹೀಗಾಗಿ, ಜನರಿಗೆ ವಿಜ್ಞಾನ ಆಧಾರಿತವಾದ, ಶೇ. 100ರಷ್ಟು ನಂಬಿಕಾರ್ಹ ಮಾಹಿತಿಯನ್ನು ನೀಡಿ, ಅವರು ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುವುದೇ ‘ದಿ ಎಡ್ಜ್ ಆಫ್ ನ್ಯೂಟ್ರಿಷನ್ 2026’ ಸಮಿಟ್‌ನ ಮುಖ್ಯ ಉದ್ದೇಶವಾಗಿದೆ,” ಎಂದು ಹೇಳಿದರು.
ಆಗಸ್ಟ್ 8, 2026ರಂದು ಶನಿವಾರ 135 ರೆಸಿಡೆನ್ಸಿ ರಸ್ತೆಯಲ್ಲಿರುವ ದಿ ಚಾನ್ಸರಿ ಪೆವಿಲಿಯನ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 9:30ಕ್ಕೆ ನೋಂದಣಿ ಶುರುವಾಗಲಿದೆ. ಬೆಳಿಗ್ಗೆ 10:00ಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಲಿದೆ.
ಐಟಿ ದಿಗ್ಗಜ ಅಶೋಕ್ ಸೂಟಾ ಅವರು ಸ್ಥಾಪಿಸಿರುವ ‘ಹ್ಯಾಪಿಯೆಸ್ಟ್ ಹೆಲ್ತ್’, ಕೇವಲ ಆಸ್ಪತ್ರೆಗಳಿಗೆ ಸೀಮಿತವಾಗದೆ, ಜನರಿಗೆ ಸಮಗ್ರ ಆರೋಗ್ಯ ಸೇವೆಗಳನ್ನು ನೀಡುವ ವಿಶಿಷ್ಟ ಸಂಸ್ಥೆಯಾಗಿದ್ದು, ಕ್ಲಿನಿಕ್‌ಗಳು, ವೆಲ್‌ನೆಸ್ ಸೆಂಟರ್‌ಗಳು, ಅತ್ಯಾಧುನಿಕ ಡಯಗ್ನೊಸ್ಟಿಕ್ಸ್ ಹಾಗೂ ಡಿಜಿಟಲ್ ಹೆಲ್ತ್ ಸೇವೆಗಳನ್ನು ಒದಗಿಸುತ್ತಿದೆ.
