Thursday, April 16, 2026
Homeಅಂತಾರಾಷ್ಟ್ರೀಯಪಾಕ್ ನ ಕರಾಚಿಯಲ್ಲಿ ಬೆಂಕಿ ಅವಘಡ : 28ಕ್ಕೆ ಏರಿದ ಸಾವಿನ ಸಂಖ್ಯೆ

ಪಾಕ್ ನ ಕರಾಚಿಯಲ್ಲಿ ಬೆಂಕಿ ಅವಘಡ : 28ಕ್ಕೆ ಏರಿದ ಸಾವಿನ ಸಂಖ್ಯೆ

ಕರಾಚಿ(ಪಾಕಿಸ್ತಾನ),ಜ.21- ಕರಾಚಿಯಲ್ಲಿರುವ ಶಾಪಿಂಗ್‌ ಪ್ಲಾಜಾದಲ್ಲಿ ಸಂಭವಿಸಿದ ಬೆಂಕಿ ಅವಶೇಷಗಳಲ್ಲಿ ಇದುವರೆಗೂ ಕನಿಷ್ಠ 28 ಜನರು ಸಾವನ್ನಪ್ಪಿದ್ದಾರೆ, ಇನ್ನೂ 80 ಜನರು ಕಣರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕರಾಚಿಯ ಎಂಎ ಜಿನ್ನಾ ರಸ್ತೆಯಲ್ಲಿರುವ ಗುಲ್‌ ಪ್ಲಾಜಾ ಶಾಪಿಂಗ್‌ ಮಾಲ್‌ನಲ್ಲಿ ಜ.17ರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಮೊದಲಿಗೆ ಮೂವರು ಸಾವನ್ನಪ್ಪಿ 7 ಮಂದಿ ಗಾಯಗೊಂಡಿದ್ದರು.

ಇದೀಗ ಸಾವಿನ ಸಂಖ್ಯೆ 28ಕ್ಕೆ ಏರಿದ್ದು, 80ಕ್ಕೂ ಜನರು ಕಾಣೆಯಾಗಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಇದರಿಂದಾಗಿಯೂ ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಳೆಯ ಕಟ್ಟಡದ ಅವಶೇಷಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಿನ್ನೆಯೂ ಸಹ ಕಾರ್ಯಾಚರಣೆ ನಡೆಸಲಾಗಿದ್ದು, ಸತತ ನಾಲ್ಕು ದಿನಗಳಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ.

ಜಿನ್ನಾ ಮತ್ತು ನಾಗರಿಕ ಆಸ್ಪತ್ರೆಗಳಿಗೆ ಇಲ್ಲಿಯವರೆಗೆ 28 ಶವಗಳನ್ನು ರವಾನಿಸಲಾಗಿದೆ. ಶನಿವಾರ ರಾತ್ರಿ ಬೆಂಕಿ ಕಾಣಿಸಿಕೊಂಡಾಗಿನಿಂದ ಇಲ್ಲಿಯವರೆಗೂ 28 ಶವಗಳನ್ನು ಆಸ್ಪತ್ರೆಗಳಿಗೆ ತರಲಾಗಿದೆ. 18 ಶವಗಳನ್ನು ಗುರುತಿಸಲಾಗಿದೆ. ಇತರರ ಗುರುತನ್ನು ದೃಢಪಡಿಸಲು ಡಿಎನ್‌ಎ ಪರೀಕ್ಷೆಗಳನ್ನು ಸಹ ನಡೆಸಲಾಗುತ್ತಿದೆ ಎಂದು ಪೊಲೀಸ್‌‍ ಸರ್ಜನ್‌ ಸುಮಯ್ಯ ಸೈಯದ್‌ ತಿಳಿಸಿದ್ದಾರೆ.

ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಯಾದ ಗುಲ್‌ ಶಾಪಿಂಗ್‌ ಪ್ಲಾಜಾದ ನೆಲಮಾಳಿಗೆಯಲ್ಲಿರುವ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ಕಟ್ಟಡದ ಉಳಿದ ಭಾಗಗಳಿಗೂ ಹರಡಿ ಈ ದುರಂತ ಸಂಭವಿಸಿದೆ. ಕಾರ್ಯಾಚರಣೆಯ 34 ಗಂಟೆಗಳ ನಂತರ ಬೆಂಕಿ ತಹಬದಿಗೆ ತರಲಾಯಿತು. ಬೆಂಕಿಯ ತೀವ್ರತೆಯಿಂದಾಗಿ ಶಿಥಿಲಗೊಂಡ ಕಟ್ಟಡದ ಹಲವು ಭಾಗಗಳು ಕುಸಿದಿವೆ ಎಂದು ರಕ್ಷಣಾ 1122 ಮುಖ್ಯ ಕಾರ್ಯಾಚರಣಾ ಅಧಿಕಾರಿ ಅಬಿದ್‌ ಜಲಾಲ್‌ ಹೇಳಿದ್ದಾರೆ.

ಬೆಂಕಿ ತೀವ್ರತೆ ಹೆಚ್ಚಿದ್ದರಿಂದ ರಕ್ಷಣಾ ಕಾರ್ಯಾಚರಣೆ ನಿಧಾನವಾಗಿ ಸಾಗಿತ್ತು. ಫ್ಲಾಜಾದ ಎಲ್ಲಾ ಮಹಡಿಗಳಲ್ಲಿ ಸುಮಾರು 1200 ಅಂಗಡಿಗಳು ಇದ್ದವು. ಕಾಣೆಯಾದ ಜನರ ಸಂಬಂಧಿಕರು ಮತ್ತು ಕುಟುಂಬಗಳು ಸುದ್ದಿಗಾಗಿ ಕಾತರದಿಂದ ಕಾಯುತ್ತಿರುವುದರಿಂದ ಕಟ್ಟಡದ ಸ್ಥಳದಿಂದ ಹೊರಹೋಗಲು ನಿರಾಕರಿಸಿದ್ದಾರೆ. ಆದರೆ ಅಧಿಕಾರಿಗಳು ಎಂ ಎ ಜಿನ್ನಾ ರಸ್ತೆಯನ್ನು ಎಲ್ಲಾ ಸಂಚಾರಕ್ಕೆ ಮುಚ್ಚಿದ್ದಾರೆ.

ಬೆಂಕಿಯಲ್ಲಿ ಮಡಿದವರ ಸರಣಾರ್ಥ ವ್ಯಾಪಾರ ಮಾಲೀಕರು ಮತ್ತು ವ್ಯಾಪಾರಿಗಳು ಒಂದು ದಿನದ ಶೋಕಾಚರಣೆಯನ್ನು ಆಚರಿಸಿದ್ದಾರೆ. ಬೆಂಕಿಯಿಂದ ಕನಿಷ್ಠ 3 ಬಿಲಿಯನ್‌ ನಷ್ಟವಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಪೂರ್ಣಗೊಂಡ ನಂತರವೇ ನಿಖರವಾದ ಅಂಕಿಅಂಶ ತಿಳಿದುಬರಲಿದೆ ಎಂದು ಗುಲ್‌ ಪ್ಲಾಜಾ ಅಂಗಡಿ ಮಾಲೀಕರ ಸಂಘದ ಹಿರಿಯ ಅಧಿಕಾರಿ ತನ್ವೀರ್‌ ಪಾಷಾ ತಿಳಿಸಿದ್ದಾರೆ.

RELATED ARTICLES

Latest News