Thursday, April 16, 2026
Homeರಾಜ್ಯವಿಬಿಜಿ ರಾಮ್‌ ಜಿ ಬಗ್ಗೆ ರಾಜ್ಯ ಬಿಜೆಪಿ ಶಾಸಕರಿಗೆ ಶಿವರಾಜ್‌ ಸಿಂಗ್‌ ಪಾಠ

ವಿಬಿಜಿ ರಾಮ್‌ ಜಿ ಬಗ್ಗೆ ರಾಜ್ಯ ಬಿಜೆಪಿ ಶಾಸಕರಿಗೆ ಶಿವರಾಜ್‌ ಸಿಂಗ್‌ ಪಾಠ

ಬೆಂಗಳೂರು,ಜ.21- ನಾಳೆಯಿಂದ ವಿಧಾನಮಂಡಲದ ಉಭಯ ಸದನಗಳ ಜಂಟಿ ವಿಶೇಷ ಅಧಿವೇಶನ ಆರಂಭವಾಗಲಿದ್ದು, ಸದನದಲ್ಲಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದೆ. ವಿಶೇಷವಾಗಿ ಈ ಅಧಿವೇಶನದಲ್ಲಿ ಎರಡು ದಿನಗಳ ಕಾಲ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ವಿಬಿಜಿ ರಾಮ್‌ ಜಿ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚವ್ಹಾಣ್‌ ಅವರ ಮುಂದಾಳತ್ವದಲ್ಲಿ ಶಾಸಕಾಂಗ ಸಭೆಯನ್ನು ಕರೆಯಲಾಗಿದ್ದು, ಶಾಸಕರು, ವಿಧಾನಪರಿಷತ್‌ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಲಾಗಿದೆ. ಸಂಜೆ ನಡೆಯಲಿರುವ ಶಾಸಕಾಂಗ ಸಭೆಯಲ್ಲಿ ಮುಖ್ಯವಾಗಿ ಕಾಯ್ದೆ ತಿದ್ದುಪಡಿಯನ್ನು ಸದನದಲ್ಲಿ ಹೇಗೆ ಸಮರ್ಥನೆ ಮಾಡಿಕೊಳ್ಳಬೇಕು? ಪ್ರತಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರ ನೀಡುವ ಕುರಿತು ಶಿವರಾಜ್‌ಸಿಂಗ್‌ ಚವ್ಹಾಣ್‌, ಶಾಸಕರಿಗೆ ಮತ್ತು ವಿಧಾನಪರಿಷತ್‌ ಸದಸ್ಯರಿಗೆ ಸಲಹೆ ನೀಡಲಿದ್ದಾರೆ.

ಮಾಜಿ ಪ್ರಧಾನಿ ದಿ.ಮನಮೋಹನ್‌ ಸಿಂಗ್‌ ಅವರ ನೇತೃತ್ವದಲ್ಲಿ ಜಾರಿಗೆ ತಂದಿದ್ದ ಮನ್ರೇಗಾ ಯೋಜನೆಯಲ್ಲಿ ಯಾವ ರೀತಿ ದುರುಪಯೋಗವಾಗಿತ್ತು. ಎಷ್ಟು ಅಕ್ರಮಗಳು ನಡೆದಿತ್ತು? ಯಾವ ಉದ್ದೇಶಕ್ಕಾಗಿ ತಿದ್ದುಪಡಿ ಮಾಡಲಾಗಿತ್ತು ಎಂಬುದರ ಬಗ್ಗೆ ಸದನದಲ್ಲಿ ಸವಿಸ್ತಾರವಾಗಿ ವಿವರಿಸಬೇಕೆಂದು ಸೂಚನೆ ನೀಡಲಿದ್ದಾರೆ.

ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ ತನ್ನ ಪಾಲಿನ ಅನುದಾನ ನೀಡಬೇಕಲ್ಲ ಎಂಬ ಚಿಂತೆ ಕಾಂಗ್ರೆಸ್‌‍ ಸರ್ಕಾರಕ್ಕೆ ಕಾಡುತ್ತಿದೆ. ಆದ್ದರಿಂದಲೇ ಈ ಯೋಜನೆಯನ್ನು ವಿರೋಧ ಮಾಡಲಾಗುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಬೇಕೆಂದು ಸೂಚಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರಕ್ಕೆ, 18 ವರ್ಷಗಳಲ್ಲಿ ಉದ್ಯೋಗ ಖಾತರಿ ಯೋಜನೆಯಲ್ಲಾದ ದೋಷಗಳನ್ನು ಸರಿ ಮಾಡಲು ಹಾಗೂ ಭ್ರಷ್ಟಾಚಾರ ತಡೆಗಟ್ಟಲು ವಿಬಿ ಜಿ ರಾಮ್‌ ಜಿ ಯೋಜನೆಯನ್ನು ಜಾರಿ ಮಾಡಿದೆ. ವಿಕಸಿತ ಭಾರತ ಹೆಸರಿನ ಬಗ್ಗೆ ಕಾಂಗ್ರೆಸ್‌‍ ಆಕ್ಷೇಪ ಮಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ಪಾರರ‍್ಶಕವಾಗಿ ಉದ್ಯೋಗ ಖಾತರಿ ನೀಡಲು ಈ ಯೋಜನೆ ತರಲಾಗಿದೆ.

ಆದರೆ ತಾವು ನಿರುದ್ಯೋಗಿಗಳಾಗುತ್ತೇವೆ ಎಂಬ ಭಯ ಕಾಂಗ್ರೆಸ್ಸಿಗರಿಗಿದೆ. ವೋಟ್‌ ಚೋರಿ ಎಂದು ಹೇಳುವ ಇವರು ಕೂಲಿ ಚೋರಿ ಮಾಡುತ್ತಿದ್ದರು. ಜೆಸಿಬಿ ಮೊದಲಾದ ಯಂತ್ರ ಬಳಸಿ ಕೆಲಸ ಮಾಡಿಸುತ್ತಿದ್ದರು. ಸತ್ತವರ ಹೆಸರಲ್ಲಿ ಹಣ ಬಿಡುಗಡೆಯಾಗುತ್ತಿತ್ತು. ಇದರಲ್ಲಿ ಕಾಂಗ್ರೆಸ್‌‍ ಕರ‍್ಯರ‍್ತರೇ ಇರುತ್ತಿದ್ದರು ಎಂದು ದಾಖಲೆಗಳ ಸಮೇತ ತಿರುಗೇಟು ನೀಡುವಂತೆ ಸೂಚನೆ ನೀಡಲಿದ್ದಾರೆ.

ಬಯೋಮೆಟ್ರಿಕ್‌ ಹಾಜರಾತಿ ಇರುವುದರಿಂದ ನಕಲಿ ಹೆಸರು ಸೇರಿಸಲು ಸಾಧ್ಯವಿಲ್ಲ. ನಕಲಿ ಜಾಬ್‌ಕರ‍್ಡ್‌ಗಳು ರದ್ದಾಗಲಿದೆ. ಆಡಳಿತಾತಕ ವೆಚ್ಚವನ್ನು ಕೇಂದ್ರ ಸರಕಾರ ಶೇ.9ಕ್ಕೆ ಏರಿಸಿದೆ. ವೇತನ ಪಾವತಿಗೂ ಕಾಲಮಿತಿ ನಿಗದಿಪಡಿಸಲಾಗಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರ ಅವಧಿಯಲ್ಲಿ ಎರಡೂವರೆ ಲಕ್ಷ ಕೋಟಿ ರೂ. ನೀಡಿದ್ದರೆ, ಪ್ರಧಾನಿ ಮೋದಿಯವರ ಅವಧಿಯಲ್ಲಿ 8 ಲಕ್ಷ ಕೋಟಿ ರೂ. ಬಂದಿದೆ. ರಾಜ್ಯ ರ‍್ಕಾರ ನೀಡುವ ಪಾಲು ಕೂಡ ಉದ್ಯೋಗ ಮಾಡುವ ಬಡವರಿಗೆ ತಲುಪಲಿದೆ. ರಾಜ್ಯ ರ‍್ಕಾರಕ್ಕೆ ಕೇಂದ್ರದಿಂದ 17,000 ಕೋಟಿ ರೂ. ಬರಲಿದೆ. ಕೇಂದ್ರ ಮತ್ತು ರಾಜ್ಯದ ಪಾಲು ಸೇರಿ ಒಟ್ಟು 27,000 ಕೋಟಿ ರೂ. ಸಿಗಲಿದೆ. ತಾವು 10,000 ಕೋಟಿ ರೂ. ಕೊಡಬೇಕಿದೆ.

ಹಿಂದೆ 100 ದಿನಗಳಿದ್ದರೆ, ಈಗ 125 ದಿನಗಳಿವೆ. ರೈತರಿಗೆ ಕೃಷಿ ಕರ‍್ಮಿಕರು ಸಿಗಲಿ ಎಂಬ ಕಾರಣಕ್ಕೆ 60 ದಿನಗಳ ಅಂತರ ನೀಡಲಾಗಿದೆ. ಅದನ್ನೂ ಕಾಂಗ್ರೆಸ್‌‍ ಪ್ರಶ್ನೆ ಮಾಡುತ್ತಿದೆ. ಇದರಿಂದ ಕಾಂಗ್ರೆಸ್‌‍ ಕರ‍್ಯರ‍್ತರಿಗೆ ಗುತ್ತಿಗೆ ಪಡೆಯಲು ಅಥವಾ ಅಕ್ರಮ ಮಾಡಲು ಸಾಧ್ಯವಿಲ್ಲ. ಶಾಶ್ವತವಾದ ಆಸ್ತಿಗಳನ್ನು ನರ‍್ಮಿಸಿದರೆ ರ‍್ಥಿಕ ಅಭಿವೃದ್ಧಿ ಸಾಧ್ಯ. ಹೊಸ ಯೋಜನೆಯಿಂದ ನಿಜವಾದ ಫಲಾನುಭವಿಗಳಿಗೆ ಲಾಭ ದೊರೆಯಲಿದೆ. ಕಾಮಗಾರಿಗಳು ಮೊದಲೇ ನರ‍್ಧಾರವಾಗಲಿದೆ.

RELATED ARTICLES

Latest News