ಟೋಕಿಯೊ, ಜ. 21 (ಎಪಿ) ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಅವರನ್ನು ಹತ್ಯೆ ಮಾಡಿದ್ದ ಆರೋಪಿಗೆ ಅಲ್ಲಿನ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಯನ್ನು ಟೆಟ್ಸು ಯಾ ಯಮಗಾಮಿ ಎಂದು ಗುರುತಿಸಲಾಗಿದೆ.
ತಾನು ಮಾಡಿದ್ದ ಕೊಲೆಯ ತಪ್ಪು ಒಪ್ಪಿಕೊಂಡ ವ್ಯಕ್ತಿಗೆ ಜಪಾನ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಎನ್‌ಎಚ್‌ಕೆ ಸಾರ್ವಜನಿಕ ದೂರದರ್ಶನ ವರದಿ ಮಾಡಿದೆ. ಜುಲೈ 2022 ರಲ್ಲಿ ಪಶ್ಚಿಮ ನಗರವಾದ ನಾರಾದಲ್ಲಿ ಚುನಾವಣಾ ಪ್ರಚಾರ ಭಾಷಣದ ಸಮಯದಲ್ಲಿ 45 ವರ್ಷದ ಟೆಟ್ಸುಯಾ ಯಮಗಾಮಿ ಅವರು ಶಿಂಜೋ ಅಬೆ ಅವರನ್ನು ಕೊಂದಿದ್ದಕ್ಕಾಗಿ ತಪ್ಪೊಪ್ಪಿಕೊಂಡರು.
ಪ್ರಾಸಿಕ್ಯೂಟರ್‌ಗಳು ಕೋರಿದಂತೆ ನಾರಾ ಜಿಲ್ಲಾ ನ್ಯಾಯಾಲಯವು ತರ‍್ಪನ್ನು ದೃಢಪಡಿಸಿತು ಮತ್ತು ಯಮಗಾಮಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
