Homeರಾಷ್ಟ್ರೀಯಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ

ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ

Gold, silver prices fall slightly

ಬೆಂಗಳೂರು, ಜ. 30- ದಿನೇ ದಿನೇ ಗಗನಮುಖಿಯಾಗಿ ದರ ಏರಿಕೆಯಾಗುತ್ತಿದ್ದ ಹಳದಿ ಲೋಹ (ಚಿನ್ನ) ಹಾಗೂ ಬೆಳ್ಳಿ ದರದಲ್ಲಿ ಇಂದು ಸ್ವಲ್ಪ ಮಟ್ಟಿಗೆ ಇಳಿಕೆಯಾಗುವ ಮೂಲಕ ಗ್ರಾಹಕರ ಮೊಗದಲ್ಲಿ ಸಂತಸ ಮೂಡಿಸಿದೆ.

22 ಕ್ಯಾರೆಟ್‌ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 7500 ರೂ. ಕಡಿಮೆ ಆಗಿ 1,56,400 ರೂ.ಗೆ ಇಳಿದಿದ್ದರೆ, 24 ಕ್ಯಾರೆಟ್‌ ಚಿನ್ನದ ದರದಲ್ಲೂ 8230 ರೂ. ದರ ಕಡಿತಗೊಂಡು 1,70,620 ರೂ. ಹಾಗೂ 18 ಕ್ಯಾರೆಟ್‌ ಸ್ವರ್ಣದ ಬೆಲೆಯು 6170 ರೂ. ಇಳಿಕೆಯಾಗುವ ಮೂಲಕ 1,27,970 ರೂ.ಗೆ ತಲುಪಿದೆ.

ನಿನ್ನೆ ಬೆಂಗಳೂರಿನಲ್ಲಿ 4 ಲಕ್ಷದ ಗಡಿ ಮೀರಿದ ಕೆಜಿ ಬೆಳ್ಳಿ ದರದಲ್ಲೂ 15,000 ರೂ. ಕುಸಿದಿದ್ದು, ಪ್ರಸ್ತುತ 3,95,000 ರೂ.ಗಳಾಗಿವೆ. ಸೌರಶಕ್ತಿ, ಎಲೆಕ್ಟ್ರಿಕ್‌ ವಾಹನಗಳು ಹಾಗೂ ಎಲೆಕ್ಟ್ರಾನಿಕ್ಸ್ ವಲಯಗಳಲ್ಲಿ ಬೆಳ್ಳಿಯನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಅದರ ಬೇಡಿಕೆಯೂ ಹೆಚ್ಚಾಗಿದ್ದರೆ, ಸುರಕ್ಷತೆ ಹೂಡಿಕೆಯಾಗಿರುವ ಚಿನ್ನದ ಮೇಲೆ ಬಂಡವಾಳ ಹಾಕುವವರ ಸಂಖ್ಯೆಯೂ ಹೆಚ್ಚಾಗಿದೆ.

ಚಿನ್ನ ಹಾಗೂ ಬೆಳ್ಳಿ ದರದ ಬೆಲೆಯೂ ಇಳಿಕೆಯಾಗಬೇಕಾದರೆ ಹೂಡಿಕೆದಾರರು ಇವೆರಡೂ ಲೋಹಗಳ ಮೇಲೆಯೂ ಹೂಡಿಕೆ ಮಾಡಬೇಕೆಂದು ಮಾರುಕಟ್ಟೆಯ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

RELATED ARTICLES
spot_img

Latest News