ಕೋಝಿಕ್ಕೋಡ್ (ಕೇರಳ),ಜ.30- ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಅಧ್ಯಕ್ಷೆ ಮತ್ತು ರಾಜ್ಯಸಭಾ ಸದಸ್ಯೆ ಪಿ ಟಿ ಉಷಾ ಅವರ ಪತಿ ವಿ ಶ್ರೀನಿವಾಸನ್(67) ಇಂದು ಮುಂಜಾನೆ ನಿಧನರಾಗಿದ್ದಾರೆ.
ಶ್ರೀನಿವಾಸನ್ ಇಂದು ಮುಂಜಾನೆ ತಮ ನಿವಾಸದಲ್ಲಿ ಕುಸಿದು ಬಿದ್ದರು. ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ದುಃಖಿತ ಉಷಾ ಅವರೊಂದಿಗೆ ಮಾತನಾಡಿ, ಅವರ ಪತಿಯ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೇಂದ್ರ ಸರ್ಕಾರಿ ಉದ್ಯೋಗಿಯಾಗಿದ್ದ ಶ್ರೀನಿವಾಸನ್ ಅವರು ಉಷಾ ಅವರ ಶ್ರೇಷ್ಠ ಕ್ರೀಡಾ ಮತ್ತು ರಾಜಕೀಯ ಜೀವನದುದ್ದಕ್ಕೂ ಅವರ ಪಕ್ಕದಲ್ಲಿ ನಿರಂತರವಾಗಿ ಇದ್ದರು.
ಅವರನ್ನು ಅವರ ಅನೇಕ ವೃತ್ತಿಪರ ಮೈಲಿಗಲ್ಲುಗಳ ಹಿಂದಿನ ಪ್ರೇರಕ ಶಕ್ತಿ ಮತ್ತು ಅವರ ಬೆಂಬಲದ ಆಧಾರಸ್ತಂಭ ಎಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು.ದಂಪತಿಗೆ ಉಜ್ವಲ್ ಎಂಬ ಮಗನಿದ್ದಾನೆ.ಅನೇಕ ಕ್ರೀಡಾಪಟುಗಳು,ರಾಜಕೀಯ ನಾಯಕರು ವಿ ಶ್ರೀನಿವಾಸನ್ ಅವರ ಆತಕ್ಕೆ ಶಾಂತಿ ಕೋರಿದ್ದಾರೆ.
