Thursday, April 16, 2026
Homeರಾಷ್ಟ್ರೀಯBudget Highlights : ಪಶುಪಾಲನೆ ಉತ್ತೇಜಿಸಲು ಸಹಾಯಧನ, ಹಾಲಿನ ಡೈರಿಗಳ ಹೆಚ್ಚಿಸುವ ಘೋಷಣೆ

Budget Highlights : ಪಶುಪಾಲನೆ ಉತ್ತೇಜಿಸಲು ಸಹಾಯಧನ, ಹಾಲಿನ ಡೈರಿಗಳ ಹೆಚ್ಚಿಸುವ ಘೋಷಣೆ

subsidy to promote animal husbandry, increase in dairy dairies

ನವದೆಹಲಿ, ಫೆ.1-ಪಶುಪಾಲನೆ ಉತ್ತೇಜಿಸಲು ಸಹಾಯಧನ ಹಾಗೂ ಹಾಲಿನ ಡೈರಿಗಳ ಹೆಚ್ಚಳ ಮಾಡುವ ಘೋಷಣೆಯನ್ನು ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ಮಾಡಲಾಗಿದೆ.

ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ಅವರು ಇಂದು ಸಂಸತ್ತಿನಲ್ಲಿ ಮಂಡಿಸಿದ ಆಯವ್ಯಯದಲ್ಲಿ ತೆಂಗಿನ ಕಾಯಿ ಸಂಸ್ಕರಣೆ ಹಾಗೂ ರಫ್ತಿಗೆ ಒತ್ತು ನೀಡುವುದಾಗಿ ಪ್ರಕಟಿಸಿದ್ದಾರೆ.

ತೆಂಗು ಬೆಳೆಯುವ ರಾಜ್ಯದಗಳಿಗೆ ಉತ್ತೇಜನ ನೀಡಲು ಕ್ರಮ ವಹಿಸಲಿದ್ದು, ಹೊಸ ತೆಂಗಿನ ಸಸಿ ನೆಡಲು ರೈತರಿಗೆ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದಾರೆ. ಶ್ರೀಗಂಧ, ಗೋಡಂಬಿ, ಕೊಕೋ ಬೆಳೆಗಳಿಗೂ ಉತ್ತೇಜನ ನೀಡುವುದಾಗಿ ಹೇಳಿರುವ ಅವರು, ರೈತರಿಗೆ ಸುಲಭದ ಸಾಲದ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದಾರೆ.

RELATED ARTICLES

Latest News