ರೇಬೀಸ್ ರೋಗ ತಡೆಗೆ ಸರ್ಕಾರ ಬದ್ಧ: ಉಪಮನ್ಯು ಬಸು
ಬೆಂಗಳೂರು.ಸೆ.28- ರೇಬೀಸ್ ರೋಗವನ್ನು ದೇಶಾದ್ಯಂತ ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸರ್ಕಾರದ ಪಶು ಸಂಗೋಪನೆ ಇಲಾಖೆ ಜಂಟಿ ಕಾರ್ಯದರ್ಶಿ ಉಪಮನ್ಯು ಬಸು ಅಭಿಪ್ರಾಯಪಟ್ಟರು. ಹೆಬ್ಬಾಳದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಪರಿಷತ್‍ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೇಬೀಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಒನ್ ಹೆಲ್ತ್, ಜೀರೋ ಡೆತ್ಸ್ ಎನ್ನುವ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ರೇಬೀಸ್ ದಿನ ಆಚರಣೆ ಮಾಡಲಾಗುತ್ತಿದೆ. ರೇಬೀಸ್ ರೋಗ ತಡೆಗಟ್ಟಲು ನೀವೆಲ್ಲರೂ ಸಹಕಾರ ನೀಡಬೇಕು. ನಾಯಿಗಳಿಗೆ ಕಡ್ಡಾಯವಾಗಿ ರೇಬೀಸ್ […]