ಚೆನ್ನೈ, ಫೆ. 2 (ಪಿಟಿಐ) ನಮ ಪಕ್ಷದ ಪ್ರವೇಶದಿಂದ ತಮಿಳುನಾಡು ರಾಜಕೀಯ ಉದ್ವಿಗ್ನಗೊಂಡಿದೆ ಎಂದು ದಳಪತಿ ವಿಜಯ್ ಹೇಳಿಕೊಂಡಿದ್ದಾರೆ. ನಮ ಟಿವಿಕೆ ಪಕ್ಷದ ಪ್ರವೇಶದಿಂದಾಗಿ ತಮಿಳುನಾಡಿನ ರಾಜಕೀಯ ವಾತಾವರಣ ಉದ್ವಿಗ್ನಗೊಂಡಿದೆ ಎಂದು ನಟ ಕಮ್ ರಾಜಕಾರಣಿ ವಿಜಯ್ ಇಂದು ತಿಳಿಸಿದ್ದಾರೆ.
ಮುಂಬರುವ ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಮತ್ತು ರಾಜಕೀಯ ಮನ್ನಣೆ ಪಡೆಯಲು ತಮ್ಮ ಪಕ್ಷದ ಕಾರ್ಯಕರ್ತರಿಗೆ ಅವರು ಕರೆ ನೀಡಿದ್ದಾರೆ.
ನನ್ನ ಪ್ರೀತಿಸುವ ಜನರ ಅಗಾಧ ಬೆಂಬಲದೊಂದಿಗೆ, ತಮಿಳಗ ವೆಟ್ರಿ ಕಳಗಂ ಸದಸ್ಯರು ಆಡಳಿತದ ನಿಯಂತ್ರಣವನ್ನು ವಶಪಡಿಸಿಕೊಳ್ಳುವ ಪ್ರಜಾಸತ್ತಾತ್ಮಕ ಗುರಿಯನ್ನು ಸಾಧಿಸಲು ದೃಢನಿಶ್ಚಯ ಮತ್ತು ಏಕತೆಯೊಂದಿಗೆ ಚುನಾವಣಾ ಯುದ್ಧವನ್ನು ಹೋರಾಡಬೇಕು ಎಂದು ಅವರು ಹೇಳಿದರು.
ವಿಜಯ್ ಫೆಬ್ರವರಿ 2, 2024 ರಲ್ಲಿ ಟಿವಿಕೆಯನ್ನು ಪ್ರಾರಂಭಿಸಿದರು. ಕರೂರ್ ಕಾಲ್ತುಳಿತ ಪ್ರಕರಣದ ನಂತರ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ವಿಜಯ್ ಅವರು ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮತ್ತೆ ಪ್ರಚಲಿತಕ್ಕೆ ಬಂದಿದ್ದಾರೆ.
