ರಾಯ್ ಆತ್ಮಹತ್ಯೆ ಮಾಡಿಕೊಂಡ ಚೇಂಬರ್ ಸಂಪೂರ್ಣ ಸೌಂಡ್‌ಪ್ರೂಫ್ ಇದ್ದ ,
ಬೆಂಗಳೂರು,ಫೆ.2-ಉದ್ಯಮಿ ರಾಯ್ ಅವರ ಕಚೇರಿಯ ಚೇಂಬರ್ ಸಂಪೂರ್ಣವಾಗಿ ಸೌಂಡ್‌ಪೂಫ್ ಆಗಿದ್ದರಿಂದ ಘಟನೆ ನಡೆದು 20 ನಿಮಿಷಗಳಾದರೂ ಸಿಬ್ಬಂದಿಗಳಿಗೆ ಪಿಸ್ತೂಲ್‌ನ ಶಬ್ದ ಕೇಳಿಸಿಲ್ಲ ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಅಂದು ಸ್ಥಳ ಪರಿಶೀಲನೆ ವೇಳೆ ಪೊಲೀಸರಿಗೆ ಅನುಮಾನ ಮೂಡಿದೆ. ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡರೂ ಯಾರಿಗೂ ಗೊತ್ತಾಗದಿರುವ ಬಗ್ಗೆ ತನಿಖೆ ಕೈಗೊಂಡಾಗ ಚೇಂಬರ್‌ಗೆ ಸಂಪೂರ್ಣವಾಗಿ ಸೌಂಡ್‌ಪೂಫ್ ಅಳವಡಿಸಿರುವುದು ಕಂಡು ಬಂದಿದೆ.
ದೈನಂದಿನ ವ್ಯವಹಾರಗಳು ಹೊರಗೆ ಕೇಳಿಸದಂತೆ ವಿಶೇಷ ಇಂಟೀರಿಯರ್ ಮಾಡಿಸಿಕೊಂಡಿದ್ದ ರಾಯ್ ಕೊಠಡಿಯಲ್ಲಿ ಒಳಗಿನ ಶಬ್ದಗಳು ಹೊರಗೆ ಹೋಗುತ್ತಿರಲಿಲ್ಲ. ಇದರಿಂದಾಗಿ ಒಳಗೆ ಅಸಾಮಾನ್ಯ ಘಟನೆ ನಡೆದರೂ ಸಿಬ್ಬಂದಿಗೆ ಅನುಮಾನ ಉಂಟಾಗಿರಲಿಲ್ಲ ಎಂದು ಹೇಳಲಾಗಿದೆ.
ರಾಯ್ ಅವರ ಕಚೇರಿ ಮೇಲೆ ಜ.30 ರಂದು ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ತಮ ತಾಯಿ ಜೊತೆ ಮಾತನಾಡಬೇಕೆಂದು ತಮ ಕೊಠಡಿಯೊಳಗೆ ಹೋಗಿ ಭದ್ರತಾ ಸಿಬ್ಬಂದಿಗೆ ಒಳಗೆ ಯಾರನ್ನೂ ಬಿಡಬಾರದೆಂದು ಸೂಚಿಸಿ ಬಾಗಿಲು ಹಾಕಿಕೊಂಡಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕ ಜೋಸೆಫ್ ಅವರು ರಾಯ್ ಅವರ ಚೇಂಬರ್‌ಗೆ ಹೋಗಲು ಮುಂದಾದಾಗ ಸಿಬ್ಬಂದಿ ಅವರನ್ನು ತಡೆದು ಸರ್ ಒಳಗೆ ಯಾರನ್ನೂ ಬಿಡಬಾರದೆಂದು ಹೇಳಿದ್ದಾರೆಂದು ಜೋಸೆಫ್ ಅವರಿಗೆ ತಿಳಿಸಿದ್ದಾರೆ.
ಸಿಬ್ಬಂದಿ ಮಾತು ಕೇಳಿ ಜೋಸೆಫ್‌ಗೆ ಗಾಬರಿಯಾಗಿದೆ. ಕೆಲ ನಿಮಿಷಗಳಾದರೂ ಹೊರಗೆ ಬಾರದಿದ್ದಾಗ ಜೋಸೆಫ್ ಅವರು ಬಾಗಿಲನ್ನು ಜೋರಾಗಿ ಬಾಗಿಲು ತಟ್ಟಿದ್ದಾರೆ. ಒಳಗೆ ರಾಯ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಬಲವಂತವಾಗಿ ಬಾಗಿಲು ಒಡೆದು ನೋಡಿದಾಗಲೇ ರಾಯ್ ಅವರು ಕುರ್ಚಿಯಲ್ಲಿ ರಕ್ತದ ಮಡುವಿನಲ್ಲಿ ಕುಳಿತಿರುವುದು ಕಂಡು ಬಂದಿದೆ.
ತದ ನಂತರವಷ್ಟೇ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡಿರುವುದು ಗೊತ್ತಾಗಿದೆ. ಆ ಬಳಿಕವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ರಾಯ್ ಅವರು ಆತಹತ್ಯೆಗೆ ಬಳಸಿದ್ದ ಪಿಸ್ತೂಲ್ ವಿದೇಶದ್ದು ಅಲ್ಲದೇ ದುಬಾರಿ ಬೆಲೆಯದ್ದು ಎಂಬುವುದು ಗೊತ್ತಾಗಿದೆ. ಈಗಾಗಲೇ ಪೊಲೀಸರು ಆ ಪಿಸ್ತೂಲ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
