Thursday, April 16, 2026
Homeಮನರಂಜನೆಓಟಿಟಿಗೆ ಬಂದರೂ ನಿಲ್ಲದ 'ಧುರಂಧರ್‌' ಓಟ, ಬರೋಬ್ಬರಿ 1300 ಕೋಟಿ ಕಲೆಕ್ಷನ್

ಓಟಿಟಿಗೆ ಬಂದರೂ ನಿಲ್ಲದ ‘ಧುರಂಧರ್‌’ ಓಟ, ಬರೋಬ್ಬರಿ 1300 ಕೋಟಿ ಕಲೆಕ್ಷನ್

'Dhurandhar' continues to make history by earning Rs 1,300 crore

ನವದೆಹಲಿ, ಫೆ.2- ನೆಟ್‌ಫ್ಲಿಕ್ಸ್ ನಲ್ಲಿ ಬಿಡುಗಡೆಯಾದರೂ ಧುರಂಧರ್‌ ಚಿತ್ರದ ಕ್ರೇಜ್‌ ಕಡಿಮೆಯಾಗಿಲ್ಲ. ಚಿತ್ರ ವೀಕ್ಷಣೆಗೆ ಪ್ರೇಕ್ಷಕರು ಸಿನಿಮಾ ಮಂದಿರಗಳಿಗೆ ಮುಗಿ ಬೀಳುತ್ತಿರುವುದರಿಂದ ಈ ಚಿತ್ರ ಬರೊಬ್ಬರಿ 1300 ಕೋಟಿ ರೂ.ಗಳ ಲಾಭ ಗಳಿಸಿ ಇತಿಹಾಸ ನಿರ್ಮಿಸಿದೆ.

ಟ್ರ್ಯಾಕಿಂಗ್‌ ವೆಬ್‌ಸೈಟ್‌‍ ಸ್ಯಾಕ್ನಿಲ್‌್ಕ ಪ್ರಕಾರ, ಈ ಸ್ಪೈ ಥ್ರಿಲ್ಲರ್‌ ಚಿತ್ರವು 59 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡು ಜಾಗತಿಕವಾಗಿ 1,300 ಕೋಟಿ ರೂ.ಗಳನ್ನು ಕಲೆ ಹಾಕಿದೆ. ಭಾರತದಲ್ಲಿ, ಈ ಚಿತ್ರವು ತನ್ನ ಜೀವಿತಾವಧಿಯಲ್ಲಿ 1,000 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ.

ಒಂಬತ್ತನೇ ವಾರದಲ್ಲಿ ಧುರಂಧರ್‌ನ ಸಂಗ್ರಹವು ದಿನಕ್ಕೆ ಸುಮಾರು 40-50 ಲಕ್ಷ ರೂ.ಗಳಾಗಿದ್ದರೂ, ಬಾಲಿವುಡ್‌ನ ಅತಿದೊಡ್ಡ ಹಿಟ್‌ ಆದ ನಂತರವೂ ಅದು ತನ್ನ ಜೀವಿತಾವಧಿಯ ಸಂಗ್ರಹಕ್ಕೆ ಕೊಡುಗೆ ನೀಡುತ್ತಿದೆ. ಭಾನುವಾರ, ಈ ಚಿತ್ರವು ಭಾರತದಲ್ಲಿ 45 ಲಕ್ಷ ರೂ. ನಿವ್ವಳ (ಒಟ್ಟು ತೆರಿಗೆಗಳನ್ನು ಹೊರತುಪಡಿಸಿ) ಗಳಿಸಿತು.

ಸಕ್ನಿಲ್‌್ಕ ದತ್ತಾಂಶದ ಪ್ರಕಾರ, ಧುರಂಧರ್‌ ದೇಶೀಯ ಬಾಕ್‌್ಸ ಆಫೀಸ್‌‍ನಲ್ಲಿ 836.95 ಕೋಟಿ ರೂ.ಗಳನ್ನು ಗಳಿಸಿದೆ. ರಣವೀರ್‌ ಸಿಂಗ್‌ ಮತ್ತು ಅಕ್ಷಯ್‌ ಖನ್ನಾ ಅಭಿನಯದ ಈ ಚಿತ್ರದ ಒಟ್ಟು ಸಂಗ್ರಹವು ಭಾರತದಲ್ಲಿ 1,004 ಕೋಟಿ ರೂ.ಗಳಷ್ಟಿದೆ. ವಿದೇಶಗಳಲ್ಲಿ 299 ಕೋಟಿ ರೂ.ಗಳ ಕಲೆಕ್ಷನ್‌ನೊಂದಿಗೆ, ಧುರಂಧರ್‌ ಚಿತ್ರವು 1,300 ಕೋಟಿ ರೂ.ಗಳ ಕಲೆಕ್ಷನ್‌ ಅನ್ನು ಮೀರಿದೆ ಮತ್ತು ಈಗ ಜಾಗತಿಕವಾಗಿ 1,303 ಕೋಟಿ ರೂ.ಗಳಾಗಿದೆ.

ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಯಾವುದೇ ದೊಡ್ಡ ಚಿತ್ರಗಳ ಬಿಡುಗಡೆಗಳಿಲ್ಲದ ಕಾರಣ, ಬಿಡುಗಡೆಯಾದ ಎರಡು ತಿಂಗಳ ನಂತರ ಧುರಂಧರ್‌ ಎಲ್ಲರ ಆಯ್ಕೆಯಾಗಿದೆ. ಧುರಂಧರ್‌ ಒಂದು ಸ್ಪೈ ಆಕ್ಷನ್‌ ಥ್ರಿಲ್ಲರ್‌ ಚಿತ್ರವಾಗಿದ್ದು, ಇದನ್ನು ಆದಿತ್ಯ ಧರ್‌ ಬರೆದು, ಸಹ-ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಣವೀರ್‌ ಸಿಂಗ್‌, ಅಕ್ಷಯ್‌ ಖನ್ನಾ, ಸಂಜಯ್‌ ದತ್‌, ಅರ್ಜುನ್‌ ರಾಂಪಾಲ್‌ ಮತ್ತು ಆರ್‌ ಮಾಧವನ್‌ ಸೇರಿದಂತೆ ಹಲವಾರು ತಾರಾಗಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಎರಡು ಭಾಗಗಳ ಸರಣಿಯ ಮೊದಲ ಕಂತು ಪ್ರೇಕ್ಷಕರನ್ನು ನೈಜ ಘಟನೆಗಳ ಮೂಲಕ ಕರೆದೊಯ್ಯುತ್ತದೆ, ಇದರಲ್ಲಿ 1999 ರೂ. ಐಸಿ-814 ಅಪಹರಣ, 2001 ರ ಭಾರತೀಯ ಸಂಸತ್ತಿನ ದಾಳಿ, 2008 ರ ಮುಂಬೈ ದಾಳಿ ಮತ್ತು ಪಾಕಿಸ್ತಾನದ ಲಿಯಾರಿಗೆ ಸಂಬಂಧಿಸಿದ ರಹಸ್ಯ ಗೂಢಚಾರ ಕಾರ್ಯಾಚರಣೆಗಳು ಸೇರಿವೆ.ಧುರಂಧರ್‌ 2 – ದಿ ರಿವೆಂಜ್‌ ಎಂಬ ಶೀರ್ಷಿಕೆಯ ಎರಡನೇ ಭಾಗವು ಮಾರ್ಚ್‌ 19 ರಂದು ಭಾರಿ ನಿರೀಕ್ಷೆಯ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

RELATED ARTICLES

Latest News