Homeರಾಜಕೀಯಖಾಲಿ ಚೊಂಬು ಸರ್ಕಾರಕ್ಕೆ ಸಲ್ಲುತ್ತದೆ : ಎಚ್‌ಡಿಕೆ ಟೀಕೆ

ಖಾಲಿ ಚೊಂಬು ಸರ್ಕಾರಕ್ಕೆ ಸಲ್ಲುತ್ತದೆ : ಎಚ್‌ಡಿಕೆ ಟೀಕೆ

HDK

ಮೈಸೂರು, ಫೆ.8- ಖಾಲಿ ಚೊಂಬಿನ ಕ್ರೆಡಿಟ್‌ ರಾಜ್ಯಸರ್ಕಾರಕ್ಕೆ ಸಲ್ಲುತ್ತದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ 53ಕ್ಕೂ ಹೆಚ್ಚಿನ ಯೋಜನೆಗಳನ್ನು ರಾಜ್ಯಸರ್ಕಾರಗಳು ಬಳಕೆ ಮಾಡಿಕೊಳ್ಳುತ್ತಿಲ್ಲ.

ತಮ ವೈಫಲ್ಯ ಗಳನ್ನು ಮುಚ್ಚಿ ಕೊಳ್ಳಲು ಕೇಂದ್ರ ಸರ್ಕಾರದ ಆಯವ್ಯಯದ ಬಗ್ಗೆ ವ್ಯಂಗ್ಯವಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ಕೇಂದ್ರದ ಬಜೆಟ್‌ನಲ್ಲಿ ಏನು ತಂದಿದ್ದಾರೆ ಎಂದು ಶಾಸಕರು ಪ್ರಶ್ನಿಸುತ್ತಾರೆ. 500 ಕೋಟಿ ರೂ. ವೆಚ್ಚದ ಕೈಗಾರಿಕೆ ಸ್ಥಾಪನೆಗೆ ಭೂಮಿ ನೀಡುವಂತೆ ಕೋರಿ ಪತ್ರ ಬರೆದಿದ್ದರೂ ಮುಖ್ಯಮಂತ್ರಿಗಳು ಸ್ಪಂದಿಸಿಲ್ಲ.

ಎಆರ್‌ಎಐ ಸ್ಥಾಪನೆಗೆ ಕೇಂದ್ರ ಬಜೆಟ್‌ನಲ್ಲಿ ಪ್ರಾಥಮಿಕವಾಗಿ 500 ಕೋಟಿ ರೂ. ಮೀಸಲಿಡಲಾಗಿದೆ. ಆಟೋಮೆಟಿವ್‌ ರೀಸರ್ಚ್‌ ಇಂಡಿಯಾ ಸಂಸ್ಥೆ ಘಟಕ ತೆರೆಯಲು 100 ಎಕರೆ ಜಮೀನು ಕೇಳಿ ಪತ್ರ ಬರೆಯಲಾಗಿದೆ. ನಾಟಕವಾಡಲು ಪತ್ರ ಬರೆದಿಲ್ಲ. ಕೇಂದ್ರ ಸರ್ಕಾರ ಕೈಗಾರಿಕಾ ಸ್ಥಾಪನೆಗೆ ಬದ್ಧವಾಗಿದೆ ಎಂದು ಸಮರ್ಥಿಸಿಕೊಂಡರು.

17ನೇ ಬಾರಿಗೆ ದಾಖಲೆಯ ಬಜೆಟ್‌ ಮಂಡಿಸುವ ಹಮುಬಿಮು ಇಟ್ಟುಕೊಂಡಿರುವ ಸಿದ್ದರಾಮಯ್ಯ ಅವರಿಗೆ ಕೇಂದ್ರ ಬಜೆಟ್‌ನ ದೂರದೃಷ್ಟಿ ತಿಳಿಯುತ್ತಿಲ್ಲವೇ?, ಹಲವು ರಾಷ್ಟ್ರಗಳ ಒಪ್ಪಂದಗಳು, ಆಂತರಿಕ ವ್ಯವಹಾರಗಳು, ದಾಖಲೆಯ ನಿರ್ಮಾಣವಾಗುತ್ತಿದೆ. ಬಲಿಷ್ಠ ರಾಷ್ಟ್ರಗಳು ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಒಪ್ಪಿಕೊಂಡಿವೆ ಎಂದು ಅವರು ಹೇಳಿದರು.

16ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ 50 ಸಾವಿರ ಕೋಟಿ ರೂ. ಬರಬೇಕಿತ್ತು. ಈಗ ಅದು 63 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಕೇಂದ್ರ ಸರ್ಕಾರದ ಅನುದಾನವನ್ನು ರಾಜ್ಯ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನಕ್ಕೆ ಸುಮಾರು 5000 ಕೋಟಿ ರೂ. ಕೊಡುತ್ತಿದ್ದೇವೆ. ಎಚ್‌ಎಂಟಿ ಕಂಪನಿಯ ಪುನರ್‌ ಆರಂಭಕ್ಕೂ ಬದ್ಧನಾಗಿದ್ದೇನೆ.

ಆದರೆ ಅರಣ್ಯ ಇಲಾಖೆಯವರು ಎಚ್‌ಎಂಟಿ ಕಂಪನಿಯ ಜಾಗ ನಮದು ಎಂದು ತಕರಾರು ತೆಗೆದಿದ್ದಾರೆೆ. ರಾಜ್ಯದ ಯಾರೊಬ್ಬ ಮಂತ್ರಿಯೂ ರಾಜ್ಯಕ್ಕೆ ಬೇಕಾಗಿರುವ ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಿಲ್ಲ. ಆದರೆ ಬೆಲೆ ಏರಿಕೆಗೆ ಕೇಂದ್ರ ಸರ್ಕಾರವನ್ನು ದೂಷಣೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ನಡುವಿನ ಸಂಘರ್ಷದಿಂದ ಒಳ್ಳೆಯದಾಗುವುದಿಲ್ಲ ಎಂದರು.

ಜೆಡಿಎಸ್‌‍ ಮುಗಿಸುವ ಗುರಿ :
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಗೂ ತಮನ್ನು ಗುರಿಯಾಗಿಸಿಕೊಂಡಿರುವ ಮುಖ್ಯಮಂತ್ರಿ ಜೆಡಿಎಸ್‌‍ ಮುಗಿಸುವಂತಹ ಕೆಲಸ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಿದೆ. ದೇವೇಗೌಡರೊಂದಿಗೆ ಬೆಳೆದ ಅವರು ಈ ರೀತಿ ಮಾಡುತ್ತಿದ್ದಾರೆ. ಏನೇ ಮಾಡಿದ್ದರೂ ಜೆಡಿಎಸ್‌‍ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ. ಮೈಸೂರಿನ 11 ಕ್ಷೇತ್ರಗಳಲ್ಲಿ 11 ಸ್ಥಾನವನ್ನು ಬಿಜೆಪಿ-ಜೆಡಿಎಸ್‌‍ ಮೈತ್ರಿ ಗೆದ್ದರೆ ಆಶ್ಚರ್ಯ ಪಡಬೇಕಿಲ್ಲ ಎಂದರು.

ಮಾಜಿ ಸಚಿವ ಹಾಗೂ ಶಾಸಕ ಜಿ.ಟಿ.ದೇವೇಗೌಡರು ನಮೊಂದಿಗಿಲ್ಲ. ಬೇರೆ ಮಹಾನ್‌ ನಾಯಕರ ಜೊತೆಯಲ್ಲಿದ್ದಾರೆ. ಪಕ್ಷದ ಬಗ್ಗೆ ನಿಯತ್ತು, ನಿಷ್ಠೆ ಯಾವುದೂ ಇರದವರನ್ನು ನಾವು ಇಟ್ಟುಕೊಳ್ಳಬೇಕೇ?, ನಮನ್ನು ರಾಜೀನಾಮೆ ಕೊಡುತ್ತಾರಾ? ಎಂದು ಕೇಳುತ್ತಾರೆ. ರಾಜೀನಾಮೆ ಕೊಡುವ ತಪ್ಪನ್ನು ಏನು ಮಾಡಿದ್ದೇನೆ?, ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬಹಳಷ್ಟು ಅಭ್ಯರ್ಥಿಗಳಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

RELATED ARTICLES

Latest News