ಬೆಂಗಳೂರು, ಫೆ.8- ಪ್ರೀತಿಸಿದ ಯುವತಿ ಕೈಕೊಟ್ಟ ನೋವಿನಲ್ಲಿ ದೇಹದಾರ್ಢ್ಯ ಪಟುವೊಬ್ಬರು ಆತಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಗೆಳೆಯರ ಬಳಗದ ನಿವಾಸಿ ಕಿರಣ್ (26) ಆತಹತ್ಯೆ ಮಾಡಿಕೊಂಡ ಜಿಮ್ ಟ್ರೈನರ್. ಇವರು ಆತಹತ್ಯೆಗೂ ಮುನ್ನ ಡೆತ್‌ನೋಟ್‌ವೊಂದನ್ನು ಬರೆದಿಟ್ಟಿದ್ದಾರೆ ಎಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಆಕರ್ಷಕ ಅಂಗಸೌಷ್ಠವ ಹೊಂದಿದ್ದ ಕಿರಣ್ ರಾಜ್ಯಮಟ್ಟದ ಬಾಡಿ ಬಿಲ್ಡರ್ ಆಗಿದ್ದರು. ಮೂರು ವರ್ಷದಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದರು. ತಿಂಗಳ ಹಿಂದೆ ಪ್ರೀತಿಸಿದ ಯುವತಿ ಕಿರಣ್ ಮನೆಗೆ ಬಂದು ಪೋಷಕರ ಜೊತೆ ಮಾತನಾಡಿ, ನಮಿಬ್ಬರಿಗೂ ಮದುವೆ ಮಾಡಿಕೊಡಿ ಎಂದು ಕೇಳಿಕೊಂಡಿದ್ದರು.
ಅದಕ್ಕೆ ಕಿರಣ್ ಮನೆಯವರು ಒಪ್ಪಿಗೆ ಸೂಚಿಸಿದ್ದರು. ಅಣ್ಣನ ಮದುವೆಯಾದ ಬಳಿಕ ನೀವು ಮದುವೆಯಾಗಿ ಸುಖವಾಗಿರಿ ಎಂದು ಸಮತಿ ನೀಡಿದ್ದರು. ಆದರೆ ಇದ್ದಕ್ಕಿದ್ದಂತೆ ಹದಿನೈದು ದಿನಗಳ ಹಿಂದೆ ಯುವತಿ ಕಿರಣ್‌ಗೆ ತನ್ನ ಮದುವೆಯ ಆಹ್ವಾನ ಪತ್ರ ನೀಡಿ, ವರನ ಕಡೆಯವರು ಕೊಡಿಸಿದ್ದ ಹೊಸ ಸೀರೆ ತೋರಿಸಿದ್ದಳು ಎಂದು ಹೇಳಲಾಗಿದೆ.
ಇದರಿಂದ ಕಿರಣ್ ಮಂಕಾಗಿದ್ದ ಎನ್ನಲಾಗಿದೆ. ಮನೆಯವರು ಕೇಳಿದಾಗ ಏನೂ ಇಲ್ಲ, ಚೆನ್ನಾಗಿದ್ದೇನೆ ಎಂದು ಸಬೂಬು ಹೇಳುತ್ತಿದ್ದ ಎನ್ನಲಾಗಿದೆ. ನಿನ್ನೆ ಬೆಳಗ್ಗೆ ತಂದೆ ತಹಸೀಲ್ದಾರ್ ಕಚೇರಿಗೆ ಹೋಗಿ ಬರಲು ಆಟೋ ಪ್ರಯಾಣ ವೆಚ್ಚವನ್ನು ನೀಡಿದ್ದಾರೆ. ಎರಡು ಮೂರು ಬಾರಿ ಕರೆ ಮಾಡಿ ಕಚೇರಿಗೆ ಹೋಗಿದ್ರಾ ಎಂದು ವಿಚಾರಿಸಿಕೊಂಡಿದ್ದಾರೆ.
ನಿನ್ನೆ ಸಂಜೆ ತನ್ನ ಮನೆಯಲ್ಲಿ ಇದ್ದಕ್ಕಿದ್ದಂತೆ ನೇಣು ಬಿಗಿದು ಆತಹತ್ಯೆ ಮಾಡಿಕೊಂಡಿದ್ದಾನೆ. ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಪ್ರೀತಿಸಿದ ಯುವತಿ ಮತ್ತು ಆಕೆಯ ತಾಯಿಯೇ ಕಾರಣ ಎಂದು ಹೆಸರು ಬರೆದಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಕಿರಣ್ ಸಾವಿನಿಂದ ಪೋಷಕರ ಆಕ್ರಂದನ ಕರುಳು ಹಿಂಡುವಂತಿತ್ತು. ತಾಯಿ ಸರೋಜಮ, ತಾವು ಮಗನನ್ನು ಕಳೆದುಕೊಂಡಿದ್ದೇನೆ ಎಂದು ರೋದಿಸಿದ್ದಾರೆ.
ಪ್ರೀತಿಸಿದ ಯುವತಿಯನ್ನು ಅತ್ತಿಗೆ ಎಂದೆ ನನಗೆ ಪರಿಚಯಿಸಿದ್ದ, ಆಕೆಯೊಂದಿಗೆ ಚೆನ್ನಾಗಿದ್ದೇನೆ ಎಂದು ಅಣ್ಣ ಹೇಳುತ್ತಿದ್ದ. ಆಕೆಗೆ ಬೇರೆ ಸಂಬಂಧ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿತ್ತು. ನಾನು ಸೂಕ್ಷ್ಮವಾಗಿ ಅಣ್ಣನಿಗೆ ತಿಳಿಸಿದ್ದೆ. ಆದರೆ ಅದನ್ನು ಆತ ನಂಬಲಿಲ್ಲ. ಈಗ ನಮನ್ನೆಲ್ಲಾ ಬಿಟ್ಟ ಆಕೆಗಾಗಿ ಜೀವ ಕಳೆದುಕೊಂಡಿದ್ದಾನೆ ಎಂದು ಕಿರಣ್ ಸಹೋದರಿ ಕೀರ್ತನಾ ಅಳಲು ತೋಡಿಕೊಂಡಿದ್ದಾರೆ.
ಮೋಸ ಮಾಡಿದ ಆಕೆಗೆ ಶಿಕ್ಷೆಯಾಗಬೇಕು. ಬೇರೆ ಮನೆಯ ಗಂಡು ಮಕ್ಕಳು ಇನ್ಯಾರಿಗೂ ಈ ರೀತಿಯಾಗಬಾರದು ಎಂದು ನೊಂದು ನುಡಿದಿದ್ದಾರೆ.ಕಿರಣ್ ಅವರ ತಂದೆ ಶ್ರೀಧರ್, ಮೂಟೆ ಹೊತ್ತು ಮಕ್ಕಳನ್ನು ಸಾಕಿದ್ದೆ. ಯಾರಿಗೂ ಏನು ಕಡಿಮೆ ಮಾಡಿರಲಿಲ್ಲ. ನನಗೆ ಎಡಗೈ ತುಂಡಾಗಿದೆ. ಅದರಲ್ಲೂ ಕಷ್ಟಪಟ್ಟು ಕೆಲಸ ಮಾಡಿ ಜೀವನ ನಡೆಸಿದ್ದೇನೆ. ಅದನ್ನು ಮಗ ನೋಡಲಿಲ್ಲ. ಈಗ ಹುಡುಗಿಗಾಗಿ ಜೀವ ಕಳೆದುಕೊಂಡಿದ್ದಾನೆ ಎಂದು ಗದ್ಗದಿತರಾಗಿದ್ದಾರೆ.
ಆಕೆ ಎಂಟು ತಿಂಗಳ ಹಿಂದೆ ಮನೆಗೆ ಬಂದಿದ್ದಳು. 40 ಲಕ್ಷ ರೂಪಾಯಿ ಸಾಲ ಇತ್ತು. ನಿಮ ಮಗನೇ ಬಹುತೇಕ ತೀರಿಸಿದ್ದಾರೆ. ಇನ್ನೂ ಸ್ವಲ್ಪ ಬಾಕಿ ಇದೆ ಅದನ್ನು ತೀರಿಸುತ್ತೇನೆ ಎಂದಿದ್ದಾರೆ. ನಂತರ ನಮಗೆ ಮದುವೆ ಮಾಡಿಸಿ ಎಂದು ಕೇಳಿದ್ದಳು. ನಾನು ಒಪ್ಪಿದ್ದೆ. ಕಿರಣ್ ಅಣ್ಣನ ಮದುವೆ ಮುಗಿದ ಮೇಲೆ ನಿಮಿಬ್ಬರಿಗೂ ಮದುವೆ ಮಾಡಿಸುತ್ತೇನೆ ಎಂದಿದ್ದೆ ಎಂದು ಶ್ರೀಧರ್ ಅವರು ವಿವರಿಸಿದ್ದಾರೆ.
ನಿನ್ನೆ ನನ್ನೊಂದಿಗೆ ಚೆನ್ನಾಗಿ ಮಾತನಾಡಿದ್ದ.
ಆಟೋ ಪ್ರಯಾಣ ದರ ಕೊಟ್ಟು ಕರೆ ಮಾಡಿದ್ದ. ಸಂಜೆ ವೇಳೆಗೆ ಹೀಗೆ ಮಾಡಿಕೊಂಡಿದ್ದಾನೆ. ಹುಡುಗಿಗಾಗಿ ನಮ ಕಷ್ಟ ನೋಡಲಿಲ್ಲ ಎಂದು ದುಃಖಿಸಿದ್ದಾರೆ.ಈ ಬಗ್ಗೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
