ಬೆಂಗಳೂರು, ಫೆ. 12- ಮೆಟ್ರೋ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ನಡೆದ ಜಟಾಪಟಿ ಡಬಲ್ ಡೆಕ್ಕರ್ ರೈಲು ಯೋಜನೆಗೆ ಎಳ್ಳು-ನೀರು ಬಿಡುವಂತಾಗಿದೆ. ಮೆಟ್ರೋ ಟಿಕೆಟ್ ಹೆಚ್ಚಳ ವಿಚಾರದಲ್ಲಿ ಟೀಕಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಮೆಟ್ರೋ ರೆಡ್ ಲೈನ್ಗೆ ಬ್ರೇಕ್ ಹಾಕಲಾಗಿದ್ದು, ಡಬಲ್ ಡೆಕ್ಕರ್ ಪ್ಲಾನ್ಗೂ ನೋ ಎಂದಿದೆ ಎಂದು ಸಂಸದ ಪಿ.ಸಿ.ಮೋಹನ್ ಎಕ್್ಸ ಮಾಡಿ ಗಮನ ಸೆಳೆದಿದ್ದಾರೆ.
ಸರ್ಜಾಪುರ ಟು ಹೆಬ್ಬಾಳ ಯೋಜನೆಗೆ ಕೇಂದ್ರ ಬ್ರೇಕ್ ಹಾಕಿದೆ ಎಂದು ಮಾಹಿತಿ ನೀಡಿರುವ ಪಿಸಿ ಮೋಹನ್ ಅವರು ಹೆಬ್ಬಾಳ-ಸರ್ಜಾಪುರ ಮೆಟ್ರೋ ಕಾರಿಡಾರ್ಗೆ 28,405 ಕೋಟಿ ರೂ.ಗಳ ಅನುಮೋದನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.
ಡಬಲ್ ಡೆಕ್ಕರ್ ಮಾಡೋದ್ರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆಗಳಿವೆ ಹಾಗಾಗಿ, ರೆಡ್ ಲೈನ್ ಮೆಟ್ರೋ ಕಾರಿಡಾರ್ಗಳಲ್ಲಿ ಡಬಲ್ ಡೆಕ್ಕರ್ ಬೇಡ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ.
ಆಯ್ದ ಜಂಕ್ಷನ್ಗಳಲ್ಲಿ ಡಬಲ್ ಡೆಕ್ಕರ್ ಮಾಡಿದ್ರೆ ಓಕೆ ರೆಡ್ ಲೈನ್ನಲ್ಲಿ ಮಾಡಿದರೆ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆಯಂತೆ.
