Homeರಾಜ್ಯವ್ಯಾಲೆಂಟೈನ್ಸ್ ಡೇ ಹಿನ್ನಲೆಯಲ್ಲಿ ಗುಲಾಬಿಗೆ ಭಾರೀ ಡಿಮ್ಯಾಂಡ್‌

ವ್ಯಾಲೆಂಟೈನ್ಸ್ ಡೇ ಹಿನ್ನಲೆಯಲ್ಲಿ ಗುಲಾಬಿಗೆ ಭಾರೀ ಡಿಮ್ಯಾಂಡ್‌

Huge demand for roses on the eve of Valentine's Day

ಬೆಂಗಳೂರು,ಫೆ.13- ನಾಳೆ ವಿಶ್ವದೆಲ್ಲೆಡೆ ವ್ಯಾಲೆಂಟೈನ್ಸ್ ಡೇ.. ಪ್ರೇಮಿ ತನ್ನ ಪ್ರೇಮ ನಿವೇದನೆಗೆ ರೆಡ್‌ ರೋಸ್‌‍ ಕೊಟ್ಟು ಪ್ರಪೋಸ್‌‍ ಮಾಡುವ ಆಚರಣೆ.. ಈ ಪ್ರೇಮಿಗಳ ಹಬ್ಬಕ್ಕೆ ಕೆಂಪು ಗುಲಾಬಿಗೆ ಭಾರೀ ಬೇಡಿಕೆ ಹೆಚ್ಚಾಗಿದೆ.

ಈ ಬಾರಿ ರೆಡ್‌ ರೋಸ್‌‍ಗೆ ಮಲೇಷ್ಯಾ, ಇಂಡೋನೇಷ್ಯಾ, ಆಸ್ಟ್ರೇಲಿಯಾ, ಅಮೇರಿಕಾ ಸೇರಿದಂತೆ ಹಲವು ದೇಶಗಳಿಗೆ ರೆಡ್‌ ರೋಸ್‌‍ ರಫ್ತು ವಹಿವಾಟು ಜೋರಾಗಿದೆ. ನಗರದ ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಘಟಕದಲ್ಲಿ ಕಳೆದ ಐದು ವರ್ಷಗಳಿಗಿಂತ ಈ ವರ್ಷ ಭಾರೀ ವ್ಯಾಪಾರ-ವಹಿವಾಟು ನಡೆದಿದೆ ಎಂದು ಹರಾಜು ಘಟಕದ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

ಮೂರು ದಿನಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ರೆಡ್‌ ರೋಸ್‌‍ಗಳು ವಿದೇಶಗಳಿಗೆ ರಫ್ತಾಗಿದ್ದು, ಇನ್ನು 10 ರೂ.ಗೆ ಸಿಗುತ್ತಿದ್ದ ಒಂದು ರೆಡ್‌ ರೋಜ್‌ ಈಗ 30-40 ರೂ.ಗೆ ರಫ್ತು ಅಗುತ್ತಿದೆ.

ಇಂದು ಕೂಡ ಸುಮಾರು 20 ಲಕ್ಷ ಕೆಂಪು ಗುಲಾಬಿ ವಿದೇಶಗಳಿಗೆ ರಫ್ತಾಗಿದೆ. ಈ ಬಾರಿ ರೈತರು ಬೆಳೆದ ರೋಜಾ ಹೂಗಳಿಗೆ ಬೇಡಿಕೆ ಹೆಚ್ಚಿದ್ದು, ರೈತರು ಕೂಡ ಗರಿಷ್ಠ ಮಟ್ಟದ ಲಾಭ ಗಳಿಸಿದ್ದಾರೆ.

ಪ್ರಮುಖವಾಗಿ ಬೆಂಗಳೂರಿನ ನೆಲಮಂಗಲ, ಆನೇಕಲ್‌, ಬಿಡದಿ, ಹೊಸಕೋಟೆ, ಕೋಲಾರ ಭಾಗದ ರೈತರು ಕೆಲವು ಗುಲಾಬಿ ಗಳನ್ನು ಬೆಳೆದು ವ್ಯಾಪಾರಕ್ಕೆ ತಂದಿದ್ದರು. ಕೆಲವೇ ನಿಮಿಷಗಳಲ್ಲಿ ಆನ್‌ ಲೈನ್‌ ಮುಖೇನ ಎಲ್ಲಾ ಹೂಗಳು ವಿದೇಶಗಳಿಗೆ ಭಾರೀ ಮೊತ್ತಕ್ಕೆ ವ್ಯಾಪಾರವಾಯಿತು.

ದೆಹಲಿ, ಮುಂಬಯಿ, ಕೋಲ್ಕತ್ತಾ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಿಗೂ ಬೆಂಗಳೂರಿನಿಂದ ಕೆಂಪು ಗುಲಾಬಿ ರಫ್ತಾಗಿದೆ. ಪ್ರಮುಖವಾಗಿ ತಾಜ್‌ ಮಹಲ್‌ ರೋಸ್‌‍ಗೆ ಹೆಚ್ಚು ಬೇಡಿಕೆ ಇದ್ದು, ಸಿಲಿಕಾನ್‌ ಸಿಟಿ ಮಂದಿ ಆನ್‌ ಲೈನ್‌ ಮುಖೇನ ಗುಲಾಬಿಗಳನ್ನು ಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

RELATED ARTICLES
spot_img

Latest News