Homeಅಂತಾರಾಷ್ಟ್ರೀಯಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ

Missing Indian student Saketh Sreenivasaiah found dead in the US, Consulate confirms

ನ್ಯೂಯಾರ್ಕ್‌,ಫೆ.15- ಒಂದು ವಾರಕ್ಕೂ ಹಿಂದೆ ಅಮೆರಿಕದಲ್ಲಿ ನಾಪತ್ತೆಯಾಗಿದ್ದ 22 ವರ್ಷದ ಭಾರತೀಯ ಸ್ನಾತಕೋತ್ತರ ವಿದ್ಯಾರ್ಥಿಯ ಮೃತ ಪತ್ತೆಯಾಗಿದೆ.ಭಾರತದ ಕರ್ನಾಟಕ ರಾಜ್ಯ ಬೆಂಗಳೂರು ಮೂಲದ ಸಾಕೇತ್‌ ಶ್ರೀನಿವಾಸಯ್ಯ ಮೃತ ವಿದ್ಯಾರ್ಥಿ. ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಕೇತ್‌ ಕಳೆದ ಸೋಮವಾರದಿಂದ ಕಾಣೆಯಾಗಿದ್ದ ಆದರೆ ದುರಾದೃಷ್ಟ ಆತ ಮೃತಪಟ್ಟಿದ್ದಾನೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸವು ಎಕ್‌್ಸಪೋಸ್ಟ್‌ನಲ್ಲಿ ವಿದ್ಯಾರ್ಥಿ ಸಾಕೇತ್‌ ಶ್ರೀನಿವಾಸಯ್ಯ ಮೃತದೇಹ ಪತ್ತೆಯಾಗಿರುವುದನ್ನು ಸ್ಥಳೀಯ ಪೊಲೀಸರು ದೃಡಪಡಿಸಿದ್ದಾರೆ ಎಂದು ತಿಳಿಸಿದೆ ಮತ್ತು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದೆ.
ಅನ್ಹಾ ಕೆರೆ ಬಳಿ ಆತನ ಶವ ಪತ್ತೆಯಾಗಿದ್ದು, ಇದು ಕೊಲೆ ಅಥವಾ ಆತಹತ್ಯೆ ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ದೂತಾವಾಸವು ಸ್ಥಳೀಯ ಅಧಿಕಾರಿಗಳೊಂದಿಗೆ ಸಮನ್ವದೊಂದಿಗೆ ಭಾರತಕ್ಕೆ ಮೃತದೇಹಗಳನ್ನು ಶೀಘ್ರವಾಗಿ ಕಳುಹಿಸುವ ವ್ಯವಸ್ಥೆ ಸೇರಿದಂತೆ ಮೃತನ ಕುಟುಂಬಕ್ಕೆ ಅಗತ್ಯವಿರುವ ಎಲ್ಲಾ ಸಹಾಯವನ್ನು ಒದಗಿಸಲು ಸಿದ್ಧವಾಗಿದೆ ಎಂದು ಹೇಳಿದೆ.
ನಮ ದೂತಾವಾಸ ಅಧಿಕಾರಿಗಳು ಕುಟುಂಬದೊಂದಿಗೆ ನೇರ ಸಂಪರ್ಕದಲ್ಲಿದ್ದಾರೆ ಮತ್ತು ಅಗತ್ಯವಿರುವ ಎಲ್ಲಾ ಔಪಚಾರಿಕತೆಗಳು ಮತ್ತು ಸೇವೆಗಳೊಂದಿಗೆ ಅವರಿಗೆ ಬೆಂಬಲ ನೀಡುತ್ತಾರೆ ಎಂದು ಅದು ಹೇಳಿದೆ.

ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್‌ ಆಫ್‌ ಸೈನ್‌್ಸ ಪದವಿ ವಿದ್ಯಾರ್ಥಿಯಾಗಿದ್ದು ಪಾರ್ಕ್‌ ಹಿಲ್ಸ್ ನೆರೆಹೊರೆಯ ಮನೆ ಬಾಗಿಲಿನಲ್ಲಿ ಅವರ ಪಾಸ್‌‍ಪೋರ್ಟ್‌ ಮತ್ತು ಲ್ಯಾಪ್‌ಟಾಪ್‌ನೊಂದಿಗೆ ಅವರ ಬಗ್‌ ಪತ್ತೆಯಾಗಿದೆ ಎಂದು ದಿ ಬರ್ಕ್‌ಲಿ ಸ್ಕಾ ್ಯನರ್‌ ನ್ಯೂಸ್‌‍ ಪೋರ್ಟಲ್‌ ವರದಿ ಮಾಡಿದೆ.

ಸ್ಥಳೀಯ ಪೊಲೀಸರು ವಿದ್ಯಾರ್ಥಿಯ ಬಗ್ಗೆ ಮಾಹಿತಿ ಇರುವ ಯಾರಾದರೂ ಸ್ಥಳೀಯ ಕಚೇರಿಗೆ ತಿಳಿಸುವಂತೆ ಮನವಿ ಮಾಡಿದ್ದರು.ಕುಟುಂಬದ ಆಕ್ರಂದನ: ಬೆಂಗಳೂರಿನ ನಾಗರಬಾವಿಯಲ್ಲಿ ವಾಸವಾಗಿರುವ ಸಾಕೇತ್‌ ಶ್ರೀನಿವಾಸಯ್ಯ ಪೋಷಕರು ಕಳೆದ ರಾತ್ರಿ ಮಗ ಮೃತಪಟ್ಟಿರುವುದು ತಿಳಿದ ನಂತರ ಆಘಾತಕ್ಕೊಳಗಾಗಿದ್ದಾರೆ.

ಏನಾಗಿದೆ ಎಂದು ತಿಳಿದು ತಾಯಿ ಕುಸಿದು ಬಿದ್ದಿದ್ದಾರೆ. ಕುಟುಂಬ ಸದಸ್ಯರು, ಸಂಬಂಧಿಕರು ಮನೆಗೆ ದಾವಿಸಿ ಕಂಬನಿ ಮಿಡಿದಿದ್ದಾರೆ.ಮಗನ ಬಗ್ಗೆ ಹಲವಾರು ಕನಸು ಕಂಡಿದ್ದ ಕುಟುಂಬಸ್ಥರಿಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ಆತನ ಸ್ನೇಹಿತರು ಕೂಡ ಸಾಕೇತ್‌ ಮೃತಪಟ್ಟಿರುವ ವಿಷಯ ತಿಳಿದು ಕಂಬನಿ ಮಿಡಿದಿದ್ದಾರೆ. ನಾಗರಬಾವಿಯ ಅವರ ಮನೆ ಬಳಿ ಸ್ನೇಹಿತರು ಬಂದು ಅಗಲಿದ ಆತಕ್ಕೆ ಶಾಂತಿ ಕೋರಿದ್ದಾರೆ. ಸಾಕೇತ್‌ ಅವರ ತಂದೆ-ತಾಯಿ ಇಬ್ಬರೂ ಸರ್ಕಾರಿ ನೌಕರರಾಗಿದ್ದು, ಅಮೆರಿಕಕ್ಕೆ ತೆರಳಲು ತುರ್ತು ವೀಸಾಗೆ ಅರ್ಜಿ ಸಲ್ಲಿಸಿದ್ದಾರೆ.

RELATED ARTICLES

Latest News